ಪಾಸಿಟಿವ್‌ ಇಲ್ಲದಿದ್ರೂ ‘ಚಿಕಿತ್ಸೆ’ ನೀಡಿ ಹಣ ದೋಚಿದ ಬೆಂಗಳೂರಿನ 2 ಖಾಸಗಿ ಆಸ್ಪತ್ರೆ

| Updated By: ಸಾಧು ಶ್ರೀನಾಥ್​

Updated on: Jul 06, 2020 | 11:15 AM

ಬೆಂಗಳೂರು: ಕೊರೊನಾದಂಥ ಸಂಕಷ್ಟದ ಸಮಯದಲ್ಲಿ ಸಿಕ್ಕವನಿಗೆ ಸೀರುಂಡೆ ಅಂತಾ ಕೆಲ ಖಾಸಗಿ ಆಸ್ಪತ್ರೆಗಳು ಜನರಿಂದ ಹಣ ಸುಲಿಗೆಗೆ ಇಳಿದ ಘಟನೆ ಬೆಂಗಳೂರಿನ ನಾಗರಭಾವಿಯಲ್ಲಿ ನಡೆದಿದೆ. ಬೆಂಗಳೂರಿನ 70 ವರ್ಷದ ಕಾಂತರಾಜು ಅನ್ನೋರು ನಾಗರಭಾವಿಯ ಜಿಎಂ ಆಸ್ಪತ್ರೆಗೆ ಆರೋಗ್ಯ ಸಮಸ್ಯೆಯಿಂದ ದಾಖಲಾಗಿದ್ದರು. ಐಸಿಯುನಲ್ಲಿ ದಾಖಲಿಸಿಕೊಂಡ ಆಸ್ಪತ್ರೆ ಕೋವಿಡ್‌ ಟೆಸ್ಟ್‌ ಮಾಡಿದ್ದೇವೆ, ಸೋಮವಾರ ರಿಪೋರ್ಟ್‌ ಬರುತ್ತೆ ಅಂತಾ ದುಡ್ಡು ಕಟ್ಟಿಸಿಕೊಂಡಿದ್ದಾರೆ. ನಂತರ ಸಂಜೆ ಕೊವಿಡ್‌ ಪಾಸಿಟಿವ್‌ ಬಂದಿದೆ, ಬೇರೆ ಆಸ್ಪತ್ರೆಗೆ ಶಿಫ್ಟ್‌ ಮಾಡಿ ಅಂತಾ ಒಂದು ಲಕ್ಷ ಹಣ ಕಟ್ಟಿಸಿಕೊಂಡು […]

ಪಾಸಿಟಿವ್‌ ಇಲ್ಲದಿದ್ರೂ ‘ಚಿಕಿತ್ಸೆ’ ನೀಡಿ ಹಣ ದೋಚಿದ ಬೆಂಗಳೂರಿನ 2 ಖಾಸಗಿ ಆಸ್ಪತ್ರೆ
Follow us on

ಬೆಂಗಳೂರು: ಕೊರೊನಾದಂಥ ಸಂಕಷ್ಟದ ಸಮಯದಲ್ಲಿ ಸಿಕ್ಕವನಿಗೆ ಸೀರುಂಡೆ ಅಂತಾ ಕೆಲ ಖಾಸಗಿ ಆಸ್ಪತ್ರೆಗಳು ಜನರಿಂದ ಹಣ ಸುಲಿಗೆಗೆ ಇಳಿದ ಘಟನೆ ಬೆಂಗಳೂರಿನ ನಾಗರಭಾವಿಯಲ್ಲಿ ನಡೆದಿದೆ.

ಬೆಂಗಳೂರಿನ 70 ವರ್ಷದ ಕಾಂತರಾಜು ಅನ್ನೋರು ನಾಗರಭಾವಿಯ ಜಿಎಂ ಆಸ್ಪತ್ರೆಗೆ ಆರೋಗ್ಯ ಸಮಸ್ಯೆಯಿಂದ ದಾಖಲಾಗಿದ್ದರು. ಐಸಿಯುನಲ್ಲಿ ದಾಖಲಿಸಿಕೊಂಡ ಆಸ್ಪತ್ರೆ ಕೋವಿಡ್‌ ಟೆಸ್ಟ್‌ ಮಾಡಿದ್ದೇವೆ, ಸೋಮವಾರ ರಿಪೋರ್ಟ್‌ ಬರುತ್ತೆ ಅಂತಾ ದುಡ್ಡು ಕಟ್ಟಿಸಿಕೊಂಡಿದ್ದಾರೆ. ನಂತರ ಸಂಜೆ ಕೊವಿಡ್‌ ಪಾಸಿಟಿವ್‌ ಬಂದಿದೆ, ಬೇರೆ ಆಸ್ಪತ್ರೆಗೆ ಶಿಫ್ಟ್‌ ಮಾಡಿ ಅಂತಾ ಒಂದು ಲಕ್ಷ ಹಣ ಕಟ್ಟಿಸಿಕೊಂಡು ಯಶವಂತಪುರದ ಪೀಪಲ್‌ ಟ್ರಿ ಆಸ್ಪತ್ರೆಗೆ ಕಳಿಸಿದ್ದಾರೆ.

ಆದ್ರೆ ಅಲ್ಲಿ ಈಗ ಬೆಡ್‌ ಖಾಲಿ ಇಲ್ಲ ಅಂತಾ ವಾಪಸ್‌ ಕಳಿಸಿದ್ದಾರೆ. ಹೀಗಾಗಿ ಮತ್ತೆ ವಾಪಸ್‌ ಜಿಎಂ ಆಸ್ಪತ್ರೆಗೆ ವಾಪಸ್‌ ಬಂದ್ರೆ, ಆಸ್ಪತ್ರೆ ಕೋವಿಡ್‌ ನೆಪ ಹೇಳಿ ಅಡ್ಮಿಟ್‌ ಮಾಡಿಕೊಳ್ಳಲು ನಿರಾಕರಿಸಿದೆ. ನಂತರ ಮಂಗಳವಾರ ರಾತ್ರಿ ಮೈಸೂರು ರಸ್ತೆಯಲ್ಲಿರುವ ಆರ್ ಆರ್ ಆಸ್ಪತ್ರೆಗೆ ಹೋಗಿದ್ದಾರೆ. ಅಲ್ಲಿ 30,000 ಹಣ ಕಟ್ಟಿಸಿಕೊಂಡಿದ್ದಾರೆ.

ಎರಡು ದಿನಗಳ ನಂತರ ಮತ್ತೆ 20,000 ಹಣ ಕಟ್ಟಲು ಹೇಳಿದ್ದಾರೆ. ಆಗ ಕುಟುಂಬಸ್ಥರು ಜಿ.ಎಂ ಆಸ್ಪತ್ರೆಯಲ್ಲಿಯೂ ರೋಗಿಗೆ ಕೊರೊನಾ ಪಾಸಿಟಿವ್ ಅಂತ ಹಣ ಕಟ್ಟಿಸಿಕೊಂಡರು ರಿಪೋರ್ಟ್ ಕೊಡಲಿಲ್ಲ. ನೀವು ಹಣ ಕಟ್ಟಿ ಅಂತಿದ್ದೀರಾ, ರಿಪೋರ್ಟ್ ಮಾತ್ರ ಕೊಡ್ತಿಲ್ಲ ಅಂತ ಗಲಾಟೆ ಮಾಡಿದಕ್ಕೆ ಹಣ ಕಟ್ಟಿಸಿಕೊಳ್ಳದೆ ಸುಮ್ಮನಾಗಿದ್ದಾರೆ.

ಇದಾದ ನಂತರ ಆಸ್ಪತ್ರೆಯವರು ರೋಗಿಗೆ ನೆಗೆಟಿವ್ ಇದೆ, ಇವತ್ತು ಡಿಸ್ಚಾರ್ಜ್ ಮಾಡ್ತಿವಿ ಅಂದಿದ್ದಾರಂತೆ. ಈ ನಡುವೆ ವ್ಯಕ್ತಿಗೆ ಕೋವಿಡ್‌ ಇದೆ ಎಂದಿದ್ದಕ್ಕೆ ಬಿಬಿಎಂಪಿ ಅಧಿಕಾರಿಗಳು ಕಾಂತರಾಜು ಅವರ ಮನೆಯನ್ನ ಭಾನುವಾರ ರಿಪೋರ್ಟ್‌ ಬರುವುದಕ್ಕಿಂತ ಮುನ್ನವೇ ಸೀಲ್‌ಡೌನ್‌ ಮಾಡಿದೆ.

ಒಂದೆಡೆ ಮನೆ ಸೀಲ್‌ಡೌನ್,‌ ಮತ್ತೊಂದೆಡೆ ಕೋರೋನಾ ಇಲ್ಲದಿದ್ರೂ ಪಾಸಿಟಿವ್‌ ಇದೆ ಎಂದು ಖಾಸಗಿ ಆಸ್ಪತ್ರೆಗಳಾದ ಜಿ.ಎಂ ಆಸ್ಪತ್ರೆ ಮತ್ತು ಆರ್ ಆರ್‌ ಆಸ್ಪತ್ರೆಗಳ ಸುಲಿಗೆ. ಕುಟುಂಬ ಈಗ ಕಂಗಾಲಾಗಿ ಹೋಗಿದೆ. ಖಾಸಗಿ ಆಸ್ಪತ್ರೆಗಳು ಕೊರೊನಾದಂಥ ಸಮಯದಲ್ಲೂ ಜನರ ರಕ್ತ ಹೀರುತ್ತಿರುವುದು ಜನರಲ್ಲಿ ಆಘಾತ ಮೂಡಿಸಿದೆ.