ಪ್ರೊ.ಹೆಚ್​.ಎಸ್​.ಶಿವಪ್ರಕಾಶರಿಗೆ ಅಂಬಿಕಾತನಯದತ್ತ ಪ್ರಶಸ್ತಿ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 20, 2021 | 8:20 PM

ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್​ ವತಿಯಿಂದ ನೀಡುವ ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿಗೆ ಹಿರಿಯ ಲೇಖಕ, ಚಿಂತಕ ಪ್ರೊ.ಹೆಚ್.ಎಸ್.ಶಿವಪ್ರಕಾಶ​ ಭಾಜನರಾಗಿದ್ದಾರೆ.

ಪ್ರೊ.ಹೆಚ್​.ಎಸ್​.ಶಿವಪ್ರಕಾಶರಿಗೆ ಅಂಬಿಕಾತನಯದತ್ತ ಪ್ರಶಸ್ತಿ
ಪ್ರೊ.ಹೆಚ್​.ಎಸ್​.ಶಿವಪ್ರಕಾಶ ಅವರಿಗೆ ಅಂಬಿಕಾತನಯದತ್ತ ಪ್ರಶಸ್ತಿ
Follow us on

ಧಾರವಾಡ: ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್​ ವತಿಯಿಂದ ನೀಡುವ ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿಗೆ ಹಿರಿಯ ಲೇಖಕ, ಚಿಂತಕ ಪ್ರೊ.ಹೆಚ್.ಎಸ್.ಶಿವಪ್ರಕಾಶ​ ಭಾಜನರಾಗಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಡಾ.ಡಿ.ಎಂ.ಹಿರೇಮಠ ಅವರು ಪ್ರಶಸ್ತಿಯನ್ನು ಬೇಂದ್ರೆ ಅವರ 125ನೇ ಜನ್ಮದಿನಾಚರಣೆ ಸಂದರ್ಭದಲ್ಲಿ ಪ್ರದಾನ ಮಾಡುವುದಾಗಿ ಹೇಳಿದ್ದಾರೆ.

ಒಟ್ಟು ₹1ಲಕ್ಷ ಮೌಲ್ಯದ ನಗದು ಹಾಗೂ ಪ್ರಶಸ್ತಿ ಫಲಕವನ್ನೊಳಗೊಂಡಈ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷತೆಯನ್ನು ಡಾ.ಗುರುಪಾದ ಮರೆಗುದ್ದಿ ವಹಿಸಿದ್ದು, ಡಾ.ತಾರಿಣಿ ಶುಭದಾಯಿನಿ ಹಾಗೂ ಪ್ರೊ.ಶಿವಾನಂದ ಕೆಳಗಿನಮನಿ ಸಮಿತಿ ಸದಸ್ಯರಾಗಿದ್ದರು. ಸಮಿತಿ ಆಯ್ಕೆ ಮಾಡಿದ ಮೂರು ಹೆಸರುಗಳ ಟ್ರಸ್ಟ್​ ಮಂಡಳಿ ಸಭೆಯಲ್ಲಿ ಪ್ರೊ.ಹೆಚ್.ಎಸ್​.ಶಿವಪ್ರಕಾಶ ಅವರ ಹೆಸರು ಅಂತಿಮಗೊಂಡಿದೆ. ಜ.31ರಂದು ಸಾಧನಕೇರಿಯ ಬೇಂದ್ರೆ ಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ 2019ನೇ ಸಾಲಿನ ಯುವ ಬರಹಗಾರರ ಚೊಚ್ಚಲ ಕೃತಿ ಲೋಕಾರ್ಪಣೆ