ಆಸ್ತಿ ವಿವಾದ, 6 ತಿಂಗಳಿಂದ ದೇಗುಲಕ್ಕೆ ಬೀಗ: ತೆರವಿಗೆ ಮುಂದಾದ ಜಿಲ್ಲಾಡಳಿತ, ಆದರೆ..?
ದಾವಣಗೆರೆ: ಆಸ್ತಿ ವಿವಾದ ಹಿನ್ನೆಲೆ 6 ತಿಂಗಳಿಂದ ದೇವಾಲಯಕ್ಕೆ ಬೀಗ ಹಾಕಲಾಗಿದ್ದು, ಇದೀಗ ದೇವಾಲಯದ ಬಾಗಿಲು ತೆರೆಯಲು ಜಿಲ್ಲಾಡಳಿತ ಮುಂದಾಗಿದೆ. ಆರು ತಿಂಗಳಿಂದ ದೇಗುಲ ಆವರಣದಲ್ಲಿ ಅಶಾಂತಿ ವಾತಾವರಣ ದಾವಣಗೆರೆಯ ಪಿಬಿ ರಸ್ತೆಯಲ್ಲಿರುವ ಬೀರಲಿಂಗೇಶ್ವರ ದೇಗುಲದ ಬಾಗಿಲು ತೆರೆಯಲು ಹಳೇ ಅರ್ಚಕರಿಂದ ವಿರೋಧ ವ್ಯಕ್ತವಾಗಿತ್ತು. ಆದರೆ ಪೂಜೆ ಮಾಡುವಂತೆ ದೇಗುಲದ ಸಮಿತಿ ಆಗ್ರಹಪಡಿಸುತ್ತಿತ್ತು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಮತ್ತು ಪೊಲೀಸರು ಆಗಮಿಸಿ, ದೇವಾಲಯದ ಬಾಗಿಲು ತೆರೆತಲು ಸಿದ್ಧತೆ ನಡೆಸಿದ್ದಾರೆ. ಪ್ರಕರಣ ಹೈಕೋರ್ಟಿನಲ್ಲಿದೆ.. ಬೇರೆ ಪೂಜಾರಿಯ […]

ದಾವಣಗೆರೆ: ಆಸ್ತಿ ವಿವಾದ ಹಿನ್ನೆಲೆ 6 ತಿಂಗಳಿಂದ ದೇವಾಲಯಕ್ಕೆ ಬೀಗ ಹಾಕಲಾಗಿದ್ದು, ಇದೀಗ ದೇವಾಲಯದ ಬಾಗಿಲು ತೆರೆಯಲು ಜಿಲ್ಲಾಡಳಿತ ಮುಂದಾಗಿದೆ.
ಆರು ತಿಂಗಳಿಂದ ದೇಗುಲ ಆವರಣದಲ್ಲಿ ಅಶಾಂತಿ ವಾತಾವರಣ ದಾವಣಗೆರೆಯ ಪಿಬಿ ರಸ್ತೆಯಲ್ಲಿರುವ ಬೀರಲಿಂಗೇಶ್ವರ ದೇಗುಲದ ಬಾಗಿಲು ತೆರೆಯಲು ಹಳೇ ಅರ್ಚಕರಿಂದ ವಿರೋಧ ವ್ಯಕ್ತವಾಗಿತ್ತು. ಆದರೆ ಪೂಜೆ ಮಾಡುವಂತೆ ದೇಗುಲದ ಸಮಿತಿ ಆಗ್ರಹಪಡಿಸುತ್ತಿತ್ತು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಮತ್ತು ಪೊಲೀಸರು ಆಗಮಿಸಿ, ದೇವಾಲಯದ ಬಾಗಿಲು ತೆರೆತಲು ಸಿದ್ಧತೆ ನಡೆಸಿದ್ದಾರೆ.
ಪ್ರಕರಣ ಹೈಕೋರ್ಟಿನಲ್ಲಿದೆ.. ಬೇರೆ ಪೂಜಾರಿಯ ತಂದು ಪೂಜೆ ಆರಂಭಿಸಲು ಜಿಲ್ಲಾಡಳಿತ ಮುಂದಾಗಿದೆ. ಆದರೆ ದೇವಸ್ಥಾನದ ಆಸ್ತಿ ವಿಚಾರವಾಗಿ ಹೈಕೋರ್ಟ್ ನಲ್ಲಿ ಪ್ರಕರಣ ವಿಚಾರಣೆ ಹಂತದಲ್ಲಿದೆ. ಹಾಗಾಗಿ, ದೇವಸ್ಥಾನದ ಬೀಗ ತೆಗೆಯದೇ ಜಿಲ್ಲಾಡಳಿತ ಕಾಯ್ದು ಕುಳಿತಿದೆ. ಇದರಿಂದ ಬೀರಲಿಂಗೇಶ್ವರ ದೇವಾಲಯದ ಬಳಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಎರಡು ಗುಂಪುಗಳಿಂದ ದೇವಸ್ಥಾನದ ಎದುರು ಧರಣಿ ನಡೆದಿದೆ.
Published On - 11:20 am, Sat, 7 November 20