ನಾಳೆ ರಸ್ತೆಗಿಳಿಯೋದಿಲ್ವಂತೆ ಓಲಾ, ಊಬರ್, ಆಟೋ, ಟ್ಯಾಕ್ಸಿ

|

Updated on: Nov 25, 2020 | 10:13 AM

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಾಳೆ ಓಲಾ, ಉಬರ್, ಆಟೋ, ಟ್ಯಾಕ್ಸಿ ಚಾಲಕರು ಸೇವೆ ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ.

ನಾಳೆ ರಸ್ತೆಗಿಳಿಯೋದಿಲ್ವಂತೆ ಓಲಾ, ಊಬರ್, ಆಟೋ, ಟ್ಯಾಕ್ಸಿ
ಓಲಾ, ಉಬರ್, ಆಟೋ, ಟ್ಯಾಕ್ಸಿ ಚಾಲಕರಿಂದ ನಾಳೆ ಧರಣಿ
Follow us on

ಬೆಂಗಳೂರು: ಓಲಾ, ಉಬರ್, ಆಟೋ, ಟ್ಯಾಕ್ಸಿ ಚಾಲಕರು ನಾಳೆ ರಸ್ತೆಗಿಳಿಯದಿರಲು ನಿರ್ಧರಿಸಿದ್ದಾರೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಚಾಲಕರು ಪ್ರತಿಭಟನೆ ನಡೆಸಲಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಚಾಲಕರು ಬಹಳಷ್ಟು ಆರ್ಥಿಕ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಆದರೆ ಸರ್ಕಾರ ಮಾತ್ರ ನಮ್ಮ ಸಹಾಯಕ್ಕೆ ಬರ್ತಿಲ್ಲ. ಹೀಗಾಗಿ ನಾವು ನಾಳೆ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದೇವೆ ಎಂದು ಚಾಲಕರು ತಿಳಿಸಿದ್ದಾರೆ. 20 ಸಂಘಟನೆಗಳಿಂದ ಮುಷ್ಕರಕ್ಕೆ ಕರೆ ನೀಡಲಾಗಿದೆ.

ಚಾಲಕರ ಬೇಡಿಕೆಗಳು:
-ಸಾಲ‌ ಮರುಪಾವತಿ ತಡೆ ಅವಧಿ ವಿಸ್ತರಣೆ ಮಾಡಬೇಕು
-ಅಸಂಘಟಿತ ಚಾಲಕರಿಗೆ ಅಭಿವೃದ್ಧಿ ನಿಗಮ ಜಾರಿ
-ಹೊಸ ಆಟೋ ಮಾರಾಟ ತೆರಿಗೆ ಶೇ.17ರಿಂದ ಶೇ.5ಕ್ಕೆ ಇಳಿಕೆ
-ಹಳೇ ವಾಹನಗಳಿಗೂ ಎಫ್‌ಸಿ, ಪ್ರಯಾಣ ದರ ಹೆಚ್ಚಳ
-ಖಾಸಗಿ ಬ್ಯಾಂಕುಗಳು ಚಾಲಕರಿಂದ ಹೆಚ್ಚು ಬಡ್ಡಿ ವಸೂಲಿ ಮಾಡೋದನ್ನ ನಿಲ್ಲಿಸಬೇಕು
-15 ವರ್ಷದ ಹಳೆ ವಾಹನಗಳ ಫಲಕ ಎಫ್ ಸಿ ನಿಲ್ಲಿಸಿರೋದನ್ನ ರದ್ದುಗೊಳಿಸಬೇಕು.. ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಚಾಲಕರು ಆಗ್ರಹಿಸಿದ್ದಾರೆ.

Published On - 10:10 am, Wed, 25 November 20