ನೆರೆ ಹಾವಳಿ: 3 ತಿಂಗಳ ಹಸುಗೂಸನ್ನು ರಕ್ಷಿಸಿದ PSI ಸಂಗಮೇಶ

| Updated By: ಸಾಧು ಶ್ರೀನಾಥ್​

Updated on: Oct 19, 2020 | 11:45 AM

ಕಲಬುರಗಿ: ಜಿಲ್ಲೆಯಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಭೀಮಾ ನದಿಯ ರೌದ್ರಾವತಾರಗಳಿಂದ ಇಡೀ ಗ್ರಾಮಗಳನ್ನೇ ನುಂಗಿಬಿಟ್ಟಿದ್ದಾಳೆ. ಇದೀಗ, ನದಿ ನೀರಿನಿಂದ ಜಿಲ್ಲೆಯ ಜೇವರ್ಗಿ ತಾಲೂಕಿನ ಕೋನ ಹಿಪ್ಪರಗಾ ಗ್ರಾಮ ಸಹ ಜಲಾವೃತಗೊಂಡಿದೆ. ಹಾಗಾಗಿ, ನೆರೆಯಿಂದ ಗ್ರಾಮದಲ್ಲಿ ಸಿಲುಕಿದ್ದ 6 ಜನರ ರಕ್ಷಣೆಮಾಡಲು ಖಾಕಿ ಪಡೆ ಮುಂದಾಗಿತ್ತು. ಇದೇ ವೇಳೆ ಮೂರು ತಿಂಗಳ ಹಸುಗೂಸೊಂದನ್ನು ಸೇರಿ 6 ಜನ ಗ್ರಾಮಸ್ಥರನ್ನು ಜೇವರ್ಗಿ ಠಾಣೆಯ ಕ್ರೈಂ PSI ಸಂಗಮೇಶ ರಕ್ಷಿಸಿದ್ದಾರೆ. ಹಸುಗೂಸನ್ನು ಹೊತ್ತುತುರುವುದರ ಜೊತೆಗೆ, ಗ್ರಾಮಸ್ಥರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಿದ್ದಾರೆ. […]

ನೆರೆ ಹಾವಳಿ: 3 ತಿಂಗಳ ಹಸುಗೂಸನ್ನು ರಕ್ಷಿಸಿದ PSI ಸಂಗಮೇಶ
Follow us on

ಕಲಬುರಗಿ: ಜಿಲ್ಲೆಯಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಭೀಮಾ ನದಿಯ ರೌದ್ರಾವತಾರಗಳಿಂದ ಇಡೀ ಗ್ರಾಮಗಳನ್ನೇ ನುಂಗಿಬಿಟ್ಟಿದ್ದಾಳೆ. ಇದೀಗ, ನದಿ ನೀರಿನಿಂದ ಜಿಲ್ಲೆಯ ಜೇವರ್ಗಿ ತಾಲೂಕಿನ ಕೋನ ಹಿಪ್ಪರಗಾ ಗ್ರಾಮ ಸಹ ಜಲಾವೃತಗೊಂಡಿದೆ.
ಹಾಗಾಗಿ, ನೆರೆಯಿಂದ ಗ್ರಾಮದಲ್ಲಿ ಸಿಲುಕಿದ್ದ 6 ಜನರ ರಕ್ಷಣೆಮಾಡಲು ಖಾಕಿ ಪಡೆ ಮುಂದಾಗಿತ್ತು. ಇದೇ ವೇಳೆ ಮೂರು ತಿಂಗಳ ಹಸುಗೂಸೊಂದನ್ನು ಸೇರಿ 6 ಜನ ಗ್ರಾಮಸ್ಥರನ್ನು ಜೇವರ್ಗಿ ಠಾಣೆಯ ಕ್ರೈಂ PSI ಸಂಗಮೇಶ ರಕ್ಷಿಸಿದ್ದಾರೆ. ಹಸುಗೂಸನ್ನು ಹೊತ್ತುತುರುವುದರ ಜೊತೆಗೆ, ಗ್ರಾಮಸ್ಥರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಿದ್ದಾರೆ. PSI ಸಂಗಮೇಶರ ಕಾರ್ಯಕ್ಕೆ ಸ್ಥಳೀಯರು ಪ್ರಶಂಸೆ ವ್ಯಕ್ತಪಡಿಸಿದರು.