ಚುನಾವಣೆಯಲ್ಲಿ ನಾನೇಕೆ ಸ್ಪರ್ಧಿಸುತ್ತಿಲ್ಲ: ಕಾರಣ ವಿವರಿಸಿದ ಪುದುಚೇರಿ ಮಾಜಿ ಸಿಎಂ ವಿ. ನಾರಾಯಣಸ್ವಾಮಿ

|

Updated on: Mar 21, 2021 | 8:02 PM

Puducherry Assembly Elections 2021: ನಾನು ಮತ್ತು ಕಾಂಗ್ರೆಸ್ ಸಂಸದೀಯ ಸದಸ್ಯ ವಿ.ವೈಥಿಲಿಂಗಂ ಚುನಾವಣೆ ಸಂಬಂಧಿತ ಪಕ್ಷದ ಕಾರ್ಯ ಚಟುವಟಿಕೆಗಳ ಜವಾಬ್ದಾರಿ ವಹಿಸಲಿದ್ದೇವೆ. ಇದೇ ಕಾರಣದಿಂದ ನಾನು ಚುನಾವಣೆ ಸ್ಪರ್ಧಿಸುತ್ತಿಲ್ಲ ಎಂದು ವಿ.ನಾರಾಯಣಸ್ವಾಮಿ ಹೇಳಿದ್ದಾರೆ.

ಚುನಾವಣೆಯಲ್ಲಿ ನಾನೇಕೆ ಸ್ಪರ್ಧಿಸುತ್ತಿಲ್ಲ: ಕಾರಣ ವಿವರಿಸಿದ ಪುದುಚೇರಿ ಮಾಜಿ ಸಿಎಂ ವಿ. ನಾರಾಯಣಸ್ವಾಮಿ
ನಾರಾಯಣಸ್ವಾಮಿ
Follow us on

ಪುದುಚೇರಿ: ಏಪ್ರಿಲ್ 6ರಂದು ನಡೆಯುವ ಪುದುಚೇರಿ ವಿಧಾನಸಭೆ ಚುನಾವಣೆಯಲ್ಲಿ ಯಾಕೆ ಸ್ಪರ್ಧಿಸುತ್ತಿಲ್ಲ ಎಂಬುದರ ಬಗ್ಗೆ ಪುದುಚೇರಿ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಹಿರಿಯ ನಾಯಕ ವಿ.ನಾರಾಯಣಸ್ವಾಮಿ ಮಾತನಾಡಿದ್ದಾರೆ. ಚುನಾವಣೆಗೆ ಪಕ್ಷವನ್ನು ಸಿದ್ಧಗೊಳಿಸಿ, ಕಾರ್ಯಕ್ರಮಗಳನ್ನು ಆಯೋಜಿಸುವ ಹೊಣೆ ಇರುವುದರಿಂದಲೇ ನಾನು ಈ ಬಾರಿ ಚುನಾವಣೆ ಕಣಕ್ಕಿಳಿದಿಲ್ಲ ಎಂದು ಅವರು ಹೇಳಿದ್ದಾರೆ.

ಭಾನುವಾರ ಪಿಸಿಸಿ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ನಾರಾಯಣಸ್ವಾಮಿ, ಪ್ರದೇಶ ಕಾಂಗ್ರೆಸ್ ಸಮಿತಿ ಎ.ವಿ.ಸುಬ್ರಣಿಯನ್ ಅವರು ಕರೈಕಲ್ (ಉತ್ತರ) ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ನಾನು ಮತ್ತು ಕಾಂಗ್ರೆಸ್ ಸಂಸದೀಯ ಸದಸ್ಯ ವಿ.ವೈಥಿಲಿಂಗಂ ಚುನಾವಣೆ ಸಂಬಂಧಿತ ಪಕ್ಷದ ಕಾರ್ಯ ಚಟುವಟಿಕೆಗಳ ಜವಾಬ್ದಾರಿ ವಹಿಸಲಿದ್ದೇವೆ. ಇದೇ ಕಾರಣದಿಂದ ನಾನು ಚುನಾವಣೆ ಸ್ಪರ್ಧಿಸುತ್ತಿಲ್ಲ ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷವು ಸೆಕ್ಯುಲರ್ ಡೆಮಾಕ್ರಟಿಕ್ ಮೈತ್ರಿಕೂಟದ (SDA) ನೇತೃತ್ವ ವಹಿಸಿದ್ದು 15 ಚುನಾವಣಾ ಕ್ಷೇತ್ರಗಳಲ್ಲಿ  ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. 14 ಸೀಟುಗಳಲ್ಲಿ ಕಾಂಗ್ರೆಸ್ ಸ್ಪರ್ಧಿಸುತ್ತಿದ್ದು ಯಾನಂನಲ್ಲಿ ಮಾತ್ರ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ. ಆರೋಗ್ಯ ಸಚಿವರಾಗಿದ್ದ ಕಾಂಗ್ರೆಸ್ ಪಕ್ಷದ ಮಲ್ಲಡಿ ಕೃಷ್ಣ ರಾವ್, ಎಐಎನ್​ಆರ್​ಸಿ ನಾಮನಿರ್ದೇಶಿತ ಎನ್. ರಂಗಸ್ವಾಮಿ ಅವರಿಗೆ ಯಾನಂನಲ್ಲಿ ಬೆಂಬಲ ನೀಡುವುದಾಗಿ ಹೇಳಿದ್ದರು. ರಾವ್ ಅವರು ಆರೋಗ್ಯ ಸಚಿವ ಸ್ಥಾನಕ್ಕೆ ಮತ್ತು ಶಾಸಕ ಸ್ಥಾನವನ್ನು ತೊರೆದಿದ್ದರು.

ಯಾನಂ ಚುನಾವಣೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಆಯ್ಕೆ ಮಾಡಲು ವಿಳಂಬವಾಯಿತು. ಸ್ವತಂತ್ರ ಅಭ್ಯರ್ಥಿ ಕೊಲಪಳ್ಳಿ ಅಶೋಕ್ ಅವರು ಯಾನಂನಲ್ಲಿ ಕಾಂಗ್ರೆಸ್ ಬೆಂಬಲ ಬಯಸುತ್ತಿದ್ದಾರೆ. ಅವರ ಮನವಿ ಸ್ವೀಕರಿಸಿ ನಾವು ಅವರಿಗೆ ಬೆಂಬಲ ನೀಡುತ್ತೇವೆ ಎಂದು ನಾರಾಯಣಸ್ವಾಮಿ ಹೇಳಿದ್ದಾರೆ.

ಕಳೆದ ವಾರದಿಂದ ಕೇಂದ್ರ ಸರ್ಕಾರದ ನಿರ್ದಿಷ್ಟ ಸಂಸ್ಥೆಗಳು ವಿಪಕ್ಷ ನೇತಾರರನ್ನು ಗುರಿ ಮಾಡುತ್ತಿದ್ದು, ಪುದುಚೇರಿಯಲ್ಲಿ ನಮ್ಮ ನಾಯಕರ ವಿರುದ್ಧ ಕೈಗೊಳ್ಳುತ್ತಿದ್ದಾರೆ ಎಂದು ನಾರಾಯಣಸ್ವಾಮಿ ಆರೋಪಿಸಿದ್ದಾರೆ. ಆದಾಗ್ಯೂ ಯಾವ ಸಂಸ್ಥೆ ಎಂಬುದನ್ನು ಅವರು ವಿವರಿಸಿಲ್ಲ.

ಚುನಾವಣಾ ಅಧಿಕಾರಿಗಳು ಪಕ್ಷಬೇಧವಿಲ್ಲದೆ ವರ್ತಿಸಬೇಕು, ಇದು ನಮ್ಮ ಮನವಿ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನಮ್ಮ ವಿರುದ್ಧ ಆರೋಪ ಮಾಡಿದ್ದಕ್ಕೆ ಏನು ಸಾಕ್ಷ್ಯವಿದೆ? ಎಂದು ಪ್ರಶ್ನಿಸಿದ್ದಾರೆ. ಫೆಬ್ರವರಿ 28ರಂದು ಕರೈಕಲ್​ನಲ್ಲಿ ಸಾರ್ವಜನಿಕ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ಅವರು ಪುದುಚೇರಿಗೆ 15,000 ಕೋಟಿ ಕೇಂದ್ರ ಅನುದಾನ ನೀಡಿದ್ದರು. ಇದರಲ್ಲಿ ನಾನು ಗಾಂಧಿ ಕುಟುಂಬಕ್ಕೆ ಕಟ್ ಮನಿ ನೀಡಿದ್ದೆ ಎಂದಿದ್ದರು. ಆರೋಪವನ್ನು ತಿರಸ್ಕರಿಸಿದ ನಾರಾಯಣಸ್ವಾಮಿ, ಆರೋಪವನ್ನು ಸಾಕ್ಷ್ಯ ಸಮೇತ ಅಮಿತ್ ಶಾ ಸಾಬೀತು ಪಡಿಸಲಿ. ಇಲ್ಲವೇ ಸಾರ್ವಜನಿಕವಾಗಿ ಕ್ಷಮೆ ಕೇಳಲಿ. ಈ ಆರೋಪ ನಿಜವಾಗಿದ್ದರೆ ನಾನು ಯಾವುದೇ ತನಿಖೆ ಎದುರಿಸಲು ಸಿದ್ಧ ಎಂದು ಹೇಳಿದ್ದಾರೆ.

ಇದನ್ನೂ ಓದಿ: Puducherry Elections 2021: ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಎಐಎನ್​ಆರ್​ಸಿ; ತಟ್ಟನ್​ಚವಡಿ, ಯಾನಂನಿಂದ ಸ್ಪರ್ಧಿಸಲಿದ್ದಾರೆ ಎನ್.ರಂಗಸ್ವಾಮಿ

Puducherry Assembly Elections 2021: ಪುದುಚೇರಿ ಚುನಾವಣೆಯಲ್ಲಿ10 ಸೀಟುಗಳಲ್ಲಿ ಸ್ಪರ್ಧಿಸಲಿದೆ ಬಿಜೆಪಿ