ಶೀಘ್ರವೇ ತಲಕಾವೇರಿ ಪೂಜೆ ಆರಂಭ, ಆದ್ರೆ ಪೂಜೆಯ ಜವಾಬ್ದಾರಿ ಯಾರ ಹೆಗಲಿಗೆ?

ಕೊಡಗು: ಬ್ರಹ್ಮಗಿರಿ ಗುಡ್ಡ ಕುಸಿತದಲ್ಲಿ ಸಿಲುಕಿಕೊಂಡ ತಲಕಾವೇರಿಯ ಅರ್ಚಕರು ಹಾಗೂ ಕುಟುಂಬಸ್ಥರ ಮೃತದೇಹ ಪತ್ತೆ ಹಚ್ಚುವ ಕಾರ್ಯಾಚರಣೆ ಭರದಿಂದ ಸಾಗಿದೆ. ಈ ನಡುವೆ ಜಿಲ್ಲಾ ಉಸ್ತುವಾರಿ ಸಚಿವ ವಿ ಸೋಮಣ್ಣ ತಲಕಾವೇರಿಯಲ್ಲಿ ಪೂಜೆ ಪುನಃ ಪ್ರಾರಂಭಿಸುವ ವಿಚಾರವಾಗಿ ಸ್ಪಷ್ಟನೆ ನೀಡಿದ್ದಾರೆ. ರಸ್ತೆ ಸಮಸ್ಯೆ ಇತ್ತು. ಇದೀಗ ಬಗೆಹರಿದಿದೆ. ಹಾಗಾಗಿ, ತಂತ್ರಿಗಳ ಸಲಹೆಯಂತೆ ಪೂಜೆ ಆರಂಭಿಸಲಾಗುವುದು. ಸದ್ಯಕ್ಕೆ ಭಗಂಡೇಶ್ವರ ದೇವಸ್ಥಾನದ ಅರ್ಚಕರು ತಾತ್ಕಾಲಿಕವಾಗಿ ಪೂಜೆಯ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಕೂಡಲೇ ತಲಕಾರವೇರಿಯಲ್ಲಿ ಪೂಜೆಯನ್ನು ಆರಂಭಿಸಲಾಗುವುದು ಎಂದು ಟಿವಿ9ಗೆ ಸ್ಪಷ್ಟನೆ ನೀಡಿದ್ದಾರೆ. […]

ಶೀಘ್ರವೇ ತಲಕಾವೇರಿ ಪೂಜೆ ಆರಂಭ, ಆದ್ರೆ ಪೂಜೆಯ ಜವಾಬ್ದಾರಿ ಯಾರ ಹೆಗಲಿಗೆ?
Edited By:

Updated on: Aug 11, 2020 | 11:51 AM

ಕೊಡಗು: ಬ್ರಹ್ಮಗಿರಿ ಗುಡ್ಡ ಕುಸಿತದಲ್ಲಿ ಸಿಲುಕಿಕೊಂಡ ತಲಕಾವೇರಿಯ ಅರ್ಚಕರು ಹಾಗೂ ಕುಟುಂಬಸ್ಥರ ಮೃತದೇಹ ಪತ್ತೆ ಹಚ್ಚುವ ಕಾರ್ಯಾಚರಣೆ ಭರದಿಂದ ಸಾಗಿದೆ.

ಈ ನಡುವೆ ಜಿಲ್ಲಾ ಉಸ್ತುವಾರಿ ಸಚಿವ ವಿ ಸೋಮಣ್ಣ ತಲಕಾವೇರಿಯಲ್ಲಿ ಪೂಜೆ ಪುನಃ ಪ್ರಾರಂಭಿಸುವ ವಿಚಾರವಾಗಿ ಸ್ಪಷ್ಟನೆ ನೀಡಿದ್ದಾರೆ. ರಸ್ತೆ ಸಮಸ್ಯೆ ಇತ್ತು. ಇದೀಗ ಬಗೆಹರಿದಿದೆ. ಹಾಗಾಗಿ, ತಂತ್ರಿಗಳ ಸಲಹೆಯಂತೆ ಪೂಜೆ ಆರಂಭಿಸಲಾಗುವುದು. ಸದ್ಯಕ್ಕೆ ಭಗಂಡೇಶ್ವರ ದೇವಸ್ಥಾನದ ಅರ್ಚಕರು ತಾತ್ಕಾಲಿಕವಾಗಿ ಪೂಜೆಯ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಕೂಡಲೇ ತಲಕಾರವೇರಿಯಲ್ಲಿ ಪೂಜೆಯನ್ನು ಆರಂಭಿಸಲಾಗುವುದು ಎಂದು ಟಿವಿ9ಗೆ ಸ್ಪಷ್ಟನೆ ನೀಡಿದ್ದಾರೆ.

ಬ್ರಹ್ಮಗಿರಿ ಗುಡ್ಡ ಅಲ್ಲ ಅದು ಗಜಗಿರಿ ಬೆಟ್ಟ
ಜೊತೆಗೆ, ಕುಸಿತವಾಗಿರುವುದು ಬ್ರಹ್ಮಗಿರಿ ಗುಡ್ಡ ಅಲ್ಲ ಅದು ಗಜಗಿರಿ ಬೆಟ್ಟ ಎಂದು ಟಿವಿ9ಗೆ ಜಿಲ್ಲಾ ಉಸ್ತುವಾರಿ ಸಚಿವ ವಿ ಸೋಮಣ್ಣ ಸ್ಪಷ್ಟನೆ ನೀಡಿದ್ದಾರೆ. ನಾಪತ್ತೆಯಾದವರು ಸಿಗುವವರೆಗೂ ಕಾರ್ಯಾಚರಣೆ ನಿಲ್ಲಿಸುವುದಿಲ್ಲ. ಎರಡು ಹಿಟ್ಯಾಚಿ ಬಳಸಿ ಕಾರ್ಯಾಚರಣೆ ಮಾಡಲಾಗುತ್ತಿದೆ. ಜೊತೆಗೆ, ಇವತ್ತು ಮತ್ತೊಂದು ಹಿಟ್ಯಾಚಿ ಸಹಾ ಬಳಸಲಾಗುವುದು.

ಸಂಜೆಯಷ್ಟರಲ್ಲಿ ಎಲ್ಲವೂ ಮುಗಿಯುವ ವಿಶ್ವಾಸವಿದೆ. ಸಾಯಂಕಾಲ ವೇಳೆ ಮಂಜಿನಿಂದ ಕಾರ್ಯಾಚರಣೆ ಕಷ್ಟವಾಗುತ್ತಿದೆ. ಹೀಗಾಗಿ, ತಜ್ಞರು ಕಾರ್ಯಾಚರಣೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇದೀಗ, 2 NDRF ತಂಡ, ಶ್ವಾನ ದಳ, ಅಗ್ನಿಶಾಮಕ ಸಿಬ್ಬಂದಿ, ಪೊಲೀಸ್ ಹಾಗೂ ಅರಣ್ಯ ಇಲಾಖೆ ಸೇರಿ ಜಿಲ್ಲಾಡಳಿತ ಅಲ್ಲೇ ಬೀಡು ಬಿಟ್ಟಿದೆ. ಎಷ್ಟೇ ತೊಂದರೆ ಆದರೂ ಪರವಾಗಿಲ್ಲ ಕಾರ್ಯಾಚರಣೆ ನಿಲ್ಲಿಸುವುದಿಲ್ಲ ಎಂದು  ಸೋಮಣ್ಣ ತಿಳಿಸಿದ್ದಾರೆ.