ಕಡಲತೀರದಲ್ಲಿ ಸಚಿವ ಬೊಮ್ಮಾಯಿ ಅಪಾಯದಿಂದ ಪಾರು, ನಡೆದದ್ದಾದರೂ ಏನು?
ಉಡುಪಿ: ಜಿಲ್ಲೆಯಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿರುವುದರಿಂದ ಆ ಭಾಗದ ಜನ ಭಾರಿ ಕಷ್ಟದಲ್ಲಿದ್ದಾರೆ. ಹೀಗಾಗಿ ಆ ಭಾಗಕ್ಕೆ ನೆರೆ ಪ್ರವಾಸ ಕೈಗೊಂಡಿದ್ದ ಗೃಹ ಸಚಿವ ಬಸವರಾಜ ಬೊಮ್ಮಾಯಿ ದೊಡ್ಡದೊಂದು ಅಪಾಯದಿಂದ ಪಾರಾಗಿರುವ ಘಟನೆ ನಡೆದಿದೆ. ಸಕಾಲದಲ್ಲಿ ಕೈಹಿಡಿದ ಉಡುಪಿ SP ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ ಪಡುಬಿದ್ರೆ ಬಳಿಯ ಬೀಚ್ನಲ್ಲಿ ಕಡಲ್ಕೊರೆತವನ್ನು ಪರೀಕ್ಷಿಸಲು ತೆರಳಿದ್ದರು. ಈ ವೇಳೆ ಸಮುದ್ರದ ಅಲೆ ರಭಸವಾಗಿ ಬಂದಿದೆ. ಕೂಡಲೇ ಎಚ್ಚೆತ್ತ ಉಡುಪಿಯ ಎಸ್ಪಿ ವಿಷ್ಣುವರ್ಧನ್, ಇದರ […]
ಉಡುಪಿ: ಜಿಲ್ಲೆಯಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿರುವುದರಿಂದ ಆ ಭಾಗದ ಜನ ಭಾರಿ ಕಷ್ಟದಲ್ಲಿದ್ದಾರೆ. ಹೀಗಾಗಿ ಆ ಭಾಗಕ್ಕೆ ನೆರೆ ಪ್ರವಾಸ ಕೈಗೊಂಡಿದ್ದ ಗೃಹ ಸಚಿವ ಬಸವರಾಜ ಬೊಮ್ಮಾಯಿ ದೊಡ್ಡದೊಂದು ಅಪಾಯದಿಂದ ಪಾರಾಗಿರುವ ಘಟನೆ ನಡೆದಿದೆ.
ಸಕಾಲದಲ್ಲಿ ಕೈಹಿಡಿದ ಉಡುಪಿ SP ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ ಪಡುಬಿದ್ರೆ ಬಳಿಯ ಬೀಚ್ನಲ್ಲಿ ಕಡಲ್ಕೊರೆತವನ್ನು ಪರೀಕ್ಷಿಸಲು ತೆರಳಿದ್ದರು. ಈ ವೇಳೆ ಸಮುದ್ರದ ಅಲೆ ರಭಸವಾಗಿ ಬಂದಿದೆ.
ಕೂಡಲೇ ಎಚ್ಚೆತ್ತ ಉಡುಪಿಯ ಎಸ್ಪಿ ವಿಷ್ಣುವರ್ಧನ್, ಇದರ ಪರಿವೆ ಇಲ್ಲದೆ ಸ್ಥಳ ಪರಿಶೀಲಿಸುತ್ತಿದ್ದ ಬಸವರಾಜ ಬೊಮ್ಮಾಯಿ ಅವರನ್ನು ರಕ್ಷಿಸಿದ್ದಾರೆ. ಘಟನೆಯಲ್ಲಿ ಗೃಹ ಸಚಿವರ ಒಂದು ಚಪ್ಪಲಿಯನ್ನು ಸಮುದ್ರದ ಅಲೆ ಎಳೆದುಕೊಂಡು ಹೋಗಿದೆ.