ಕೊರೊನಾ ಕಾಲದಲ್ಲಿ ‘ರೋಗ ಪ್ರತಿರೋಧಕ ಶಕ್ತಿ’ ಬ್ರ್ಯಾಂಡ್ ಮಾಡಿದವನೇ ಜಾಣ! ಏನಂತೀರಿ?
ಬೆಂಗಳೂರು: ಕೊರೊನಾ ವೈರಸ್ ಹಾವಳಿಗೆ ವಿಶ್ವಕ್ಕೆ ವಿಶ್ವವೇ ಕಂಗಾಲಾಗಿದೆ. ಮಾರಣಾಂತಿಕ ವೈರಸ್‌ನಿಂದಾಗಿ ಬಹಳಷ್ಟು ಸಾವು ನೋವು ಸಂಭವಿಸುತ್ತಿದೆ. ಇದು ಜನರನ್ನು ಭಯಭೀತರನ್ನಾಗಿಸಿದೆ. ಪರಿಣಾಮ ಜನರು ಹೇಳಿದ್ದು ಕೇಳಿದ್ದನ್ನೆಲ್ಲಾ ನಂಬುವಂತಾಗಿದೆ. ಜೊತೆಗೆ ಕೊರೊನಾ ಮಾರಿಗೆ ಇನ್ನೂ ಔಷಧಿ ಲಭ್ಯವಿಲ್ಲದಿರೋದು ಜನರನ್ನು ಭಯದಲ್ಲಿರುವಂತೆ ಮಾಡಿದೆ. ಕೊರೊನಾ ಸಮಯದಲ್ಲಿ ಲಸಿಕೆಯೇ ಇಲ್ಲದಿರುವುದು ಜನರನ್ನು ಕೇವಲ ಭಯಭೀತರನ್ನಾಗಿಸಿದೆ. ಇದಕ್ಕೆ ಪರ್ಯಾಯವಾಗಿ, ಉತ್ತಮ ಆರೋಗ್ಯದ ಮಹತ್ವ ಎಷ್ಟಿದೆ ಎಂಬ ಪಾಠವನ್ನೂ ಕಲಿಸುತ್ತಿದೆ. ಕೊರೊನಾ ಹಾವಳಿ ಆರಂಭವಾದ ನಂತರ ಜನರು ಹೆಚ್ಚಿನ ಪ್ರಮಾಣದಲ್ಲಿ ಆರೋಗ್ಯದ ಕಡೆಗೆ […]
ಬೆಂಗಳೂರು: ಕೊರೊನಾ ವೈರಸ್ ಹಾವಳಿಗೆ ವಿಶ್ವಕ್ಕೆ ವಿಶ್ವವೇ ಕಂಗಾಲಾಗಿದೆ. ಮಾರಣಾಂತಿಕ ವೈರಸ್‌ನಿಂದಾಗಿ ಬಹಳಷ್ಟು ಸಾವು ನೋವು ಸಂಭವಿಸುತ್ತಿದೆ. ಇದು ಜನರನ್ನು ಭಯಭೀತರನ್ನಾಗಿಸಿದೆ. ಪರಿಣಾಮ ಜನರು ಹೇಳಿದ್ದು ಕೇಳಿದ್ದನ್ನೆಲ್ಲಾ ನಂಬುವಂತಾಗಿದೆ. ಜೊತೆಗೆ ಕೊರೊನಾ ಮಾರಿಗೆ ಇನ್ನೂ ಔಷಧಿ ಲಭ್ಯವಿಲ್ಲದಿರೋದು ಜನರನ್ನು ಭಯದಲ್ಲಿರುವಂತೆ ಮಾಡಿದೆ.
ಕೊರೊನಾ ಸಮಯದಲ್ಲಿ ಲಸಿಕೆಯೇ ಇಲ್ಲದಿರುವುದು ಜನರನ್ನು ಕೇವಲ ಭಯಭೀತರನ್ನಾಗಿಸಿದೆ. ಇದಕ್ಕೆ ಪರ್ಯಾಯವಾಗಿ, ಉತ್ತಮ ಆರೋಗ್ಯದ ಮಹತ್ವ ಎಷ್ಟಿದೆ ಎಂಬ ಪಾಠವನ್ನೂ ಕಲಿಸುತ್ತಿದೆ. ಕೊರೊನಾ ಹಾವಳಿ ಆರಂಭವಾದ ನಂತರ ಜನರು ಹೆಚ್ಚಿನ ಪ್ರಮಾಣದಲ್ಲಿ ಆರೋಗ್ಯದ ಕಡೆಗೆ ಗಮನ ಹರಿಸುತ್ತಿದ್ದಾರೆ. ಪರಿಣಾಮ ಉತ್ತಮ ಆರೋಗ್ಯ ಕಾಯ್ದುಕೊಳ್ಳಲು ಏನು ಮಾಡಬೇಕು ಎಂದು ಇಂಟರ್ನೆಟ್ನಲ್ಲಿ ಸರ್ಚ್ ಮಾಡುತ್ತಿದ್ದಾರೆ.
ಸಂಬಂಧಿಗಳು ಮತ್ತು ಸ್ನೇಹಿತರಿಗೂ ಫಾರ್ವರ್ಡ್ ಮಾಡಿ, ಪುಣ್ಯ ಕಟ್ಕೊಳ್ಳಿ ಇನ್ನು ಸಾಮಾಜಿಕ ತಾಣಗಳಲ್ಲಿ ಉತ್ತಮ ಆರೋಗ್ಯಕ್ಕೆ ಬೇಕಾದ ಉಚಿತ ಮಾಹಿತಿಯ ಸಂದೇಶಗಳು ಪ್ರವಾಹದಂತೆ ಹರಿದಾಡುತ್ತಿವೆ. ಅದ್ರಲ್ಲೂ ಭಾರತದಲ್ಲಿ ಪುರಾತನ ಕಾಲದಿಂದಲೂ ಆಚರಣೆಯಲ್ಲಿರುವ ಸಾಂಪ್ರದಾಯಿಕ ಆಹಾರ ಪದಾರ್ಥಗಳತ್ತ ಜನರ ಗಮನ ಹರಿಯುತ್ತಿದೆ. ಮೊದಲಿನಿಂದಲೂ ಸಾಮನ್ಯ ನೆಗಡಿ ಮತ್ತು ಕೆಮ್ಮಿಗೆ ಬಳಸುವ ಬೆಳ್ಳುಳ್ಳಿ, ಲಿಂಬೆ ಹಣ್ಣು, ಲವಂಗ, ಕೊತ್ತುಂಬರಿ, ಶುಂಠಿ ಹಾಗೂ ಅರಿಶಿನದ ಕಲಸುಮೇಲೋಗರದ ಕಶಾಯಗಳತ್ತ ಜನ ವಾಲುತ್ತಿದ್ದಾರೆ.
ಸಾಮಾಜಿಕ ತಾಣಗಳಲ್ಲಂತೂ ಈಗ ಬಗೆ ಬಗೆಯ ಕಶಾಯದ ಪಂಡಿತರೇ ಉದಯಿಸಿದ್ದಾರೆ. ಈ ಮಹಾಶಯರು ತಮ್ಮ ತಮ್ಮ ಜ್ಞಾನದ ಮಟ್ಟಕ್ಕನುಸಾರವಾಗಿ ಸ್ಪೆಷಲ್ ಕಶಾಯಗಳ ವಿಡಿಯೋ ಹಾಗೂ ರಿಸಿಪಿಗಳ ಲಿಸ್ಟ್ ಅನ್ನು ದಿನ ನಿತ್ಯ ಹರಿಯಬಿಡುತ್ತಿದ್ದಾರೆ. ಕೊನೆಗೆ, ನೀವು ಓದಿದ ಮೇಲೆ ನೀವು ಮಾತ್ರ ಆರೋಗ್ಯವಂತರಾದ್ರೆ ಸಾಲದು. ಇತರ ನಿಮ್ಮ ಸಂಬಂಧಿಗಳು ಮತ್ತು ಸ್ನೇಹಿತರಿಗೂ ಫಾರ್ವರ್ಡ್ ಮಾಡಿ, ಪುಣ್ಯ ಕಟ್ಕೊಳ್ಳಿ ಎಂದು ಹೇಳಿ ತಮ್ಮ ಸ್ಟಾರ್ ವ್ಯಾಲ್ಯೂ ಹೆಚ್ಚಿಸಿಕೊಳ್ಳುತ್ತಿದ್ದಾರೆ.
ಇನ್ನು ಇದನ್ನೇ ಬಂಡವಾಳ ಮಾಡಿಕೊಂಡಿರುವ ಮಲ್ಟಿ ನ್ಯಾಷನಲ್ ಕಂಪನಿಗಳು ಹಲವಾರು ಬ್ರಾಂಡ್ ಗಳನ್ನು ಹೊಸದಾಗಿ ಮಾರ್ಪಡಿಸಿ ಇಮ್ಯುನಿಟಿ ಬೂಸ್ಟರ್ ಹೆಸರಿನಲ್ಲಿ ಮಾರುಕಟ್ಟೆಗೆ ಬಿಟ್ಟಿವೆ. ಉತ್ತಮ ಆರೋಗ್ಯಕ್ಕಾಗಿ.. ಅತ್ಯುತ್ತಮ ರೋಗನಿರೋಧಕ ಶಕ್ತಿಗಾಗಿ.. ರೋಗ ರುಜಿನುಗಳಿಂದ ದೂರುವಿರಲು.. ಬಳಸಿ ಈ ಬ್ರ್ಯಾಂಡ್, ಆ ಬ್ರ್ಯಾಂಡ್ ಎಂದು ಭಾರೀ ಪ್ರಚಾರದೊಂದಿಗೆ ಉತ್ತಮ ಡಿಸೈನರ್ ಕವರ್ನಲ್ಲಿ ತಮ್ಮಆಹಾರೊತ್ಪನ್ನಗಳನ್ನು ಸೇಲ್ ಮಾಡುತ್ತಿವೆ.
ಆದ್ರೆ ಇದು ಸಂಪೂರ್ಣ ದೇಹದ ಪ್ರತಿರೋಧಕ ಅಥವಾ ನಿರೋಧಕ ಶಕ್ತಿಯ ಬಗೆಗಿನ ಕಲ್ಪನೆಯನ್ನೇ ಬುಡಮೇಲು ಮಾಡುತ್ತಿದೆ ಎಂದು ಕೆಲ ವೈದ್ಯರು ಆತಂಕಗೊಂಡಿದ್ದಾರೆ. ರೋಗ ಪ್ರತಿರೋಧಕ ಎಂದರೆ ಮಾನವನ ಅಥವಾ ಯಾವುದೇ ಜೀವಂತ ಪ್ರಾಣಿಗಳ ದೇಹದಲ್ಲಿ ರೋಗ ನಿರೋಧಕ ಎಂಬ ಸೇನೆ ಇರುತ್ತದೆ. ಇದು ದೇಹದ ಹೊರಗಿನಿಂದ ಬರುವ ಯಾವುದೇ ವೈರಸ್, ಬ್ಯಾಕ್ಟೀರಿಯಾ ವಿರುದ್ಧ ಸದಾ ಹೋರಾಡುತ್ತದೆ.
ಇದು ಹೊರಗಿನಿಂದ ಬರುವ ವೈರಸ್ ಅಥವಾ ಬ್ಯಾಕ್ಟೀರಿಯಾ ಯಾವ ರೀತಿಯಾಗಿರುತ್ತದೇಯೋ ಅದನ್ನು ಅಭ್ಯಾಸ ಮಾಡಿ ಅದಕ್ಕೆ ತಕ್ಕ ರೋಗ ನಿರೋಧಕವನ್ನು ಸೃಷ್ಟಿಸಿ ಆ ವೈರಸ್ ಅಥವಾ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುತ್ತದೆ. ಸಾಮಾನ್ಯವಾಗಿ ಕೆಮ್ಮು ನೆಗಡಿಯಂಥ ಸಾಮಾನ್ಯ ಕಾಯಿಲೆಗಳಿಗೆ ಯಾವುದೇ ಔಷಧಿಗಳಿಲ್ಲದೇ ತನ್ನಿಂತಾನೆ ಪ್ರತಿರೋಧಕ ಶಕ್ತಿ ಹುಟ್ಟುತ್ತದೆ. ಇನ್ನು ಕೆಲ ಕಾಯಿಲೆಗಳ ಸಂದರ್ಭದಲ್ಲಿ ವೈದ್ಯರು ಕಾಯಿಲೆಯ ಸ್ವರೂಪನ್ನು ನೋಡಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಂಟಿಬಾಡಿಗಳನ್ನು ನೀಡುತ್ತಾರೆ.
ಆಯ್ಕೆ ನಿಮಗೇ ಬಿಟ್ಟಿದ್ದು! ಆದರೆ ಈಗ ಕೊರೊನಾ ಭಯದಲ್ಲಿ ಜನರು ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಏಕೈಕ ಗುರಿಯೊಂದಿಗೆ ಸಾಮಾಜಿಕ ತಾಣಗಳಲ್ಲಿ ಹರಿದು ಬರುತ್ತಿರುವ ಸಂದೇಶಗಳನ್ನು ಕಣ್ಣುಮುಚ್ಚಿ ನಂಬುತ್ತಿದ್ದಾರೆ. ಚಾಣಾಕ್ಷ ಮಲ್ಟಿ ನ್ಯಾಷನಲ್ ಕಂಪನಿಗಳ ಮಾರುಕಟ್ಟೆ ತಂತ್ರಕ್ಕೆ ಸುಲಭ ಆಹಾರವಾಗಿ ಜಾಹಿರಾತಿನಲ್ಲಿ ಕಂಡ, ಇದ್ದ ಬಿದ್ದ ಪ್ರತಿರೋಧಕ ಶಕ್ತಿವರ್ಧನೆಯ ಉತ್ಪನ್ನಗಳನ್ನು ಖರೀದಿಸುತ್ತಿದ್ದಾರೆ. ಇದು ಆರೋಗ್ಯದ ಮೇಲೆ ಕೆಲವೊಮ್ಮೆ ಅಡ್ಡ ಪರಿಣಾಮವನ್ನೂ ಬೀರುತ್ತದೆ ಎಂಬ ಎಚ್ಚರವೂ ಇರಲಿ. ಆದ್ರೆ ಕೊರೊನಾ ಸಂಕಷ್ಟದ ಸಮಯದಲ್ಲಿ ಜನರು ಅಂತೆ ಕಂತೆಗಳಿಗೆ ಮಾರು ಹೊಗುತ್ತಿದ್ದಾರೆಯೇ ವಿನಃ ಸಮಚಿತ್ತರಾಗಿ ಯೋಚಿಸುತ್ತಿಲ್ಲ ಎಂಬ ಅಭಿಪ್ರಾಯ ಬಲವಾಗಿ ಕೇಳಿಬರುತ್ತಿದೆ. ಸೋ, ಆಯ್ಕೆ ನಿಮಗೇ ಬಿಟ್ಟಿದ್ದು!
Published On - 1:54 pm, Tue, 11 August 20