AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುನೀತ್ ರಾಜ್‌ಕುಮಾರ್ ಅಭಿಮಾನಿ ಬಳಗದಿಂದ ತಯಾರಾಯ್ತು ಬಸ್ ಸ್ಟಾಪ್ ಗ್ರಂಥಾಲಯ

ಉತ್ತರ ಕನ್ನಡ ಜಿಲ್ಲೆಯ ಹಳ್ಳಿಯೊಂದರಲ್ಲಿ ಯುವಕರೆಲ್ಲ ಸೇರಿ ನಿರ್ಮಿಸಿರುವ ಬಸ್ ಸ್ಟಾಪ್ ಗ್ರಂಥಾಲಯಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹಾಗಿದ್ದರೇ ಹೇಗಿದೆ ಆ ಬಸ್​ ಸ್ಟಾಪ್​ ಇಲ್ಲಿದೆ ನೋಡಿ.

ಪುನೀತ್ ರಾಜ್‌ಕುಮಾರ್ ಅಭಿಮಾನಿ ಬಳಗದಿಂದ ತಯಾರಾಯ್ತು ಬಸ್ ಸ್ಟಾಪ್ ಗ್ರಂಥಾಲಯ
ಹೋಸ್ಕೆರಿ ಗ್ರಾಮದ ಬಸ್​ ನಿಲ್ದಾಣ
ವಿವೇಕ ಬಿರಾದಾರ
|

Updated on: Jun 04, 2023 | 10:46 PM

Share

ಉತ್ತರ ಕನ್ನಡ: ಮೊಬೈಲ್ ಪೋನ್, ಇಂಟರ್ನೆಟ್ ಬಂದಾಗಿನಿಂದ ಪುಸ್ತಕಗಳನ್ನು ಓದುವವರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿದೆ. ಅದರಲ್ಲೂ ಯುವ ಸಮೂಹವಂತೂ ಮೊಬೈಲ್ (Mobile) ಬಿಟ್ಟು ಒಂದು ಕ್ಷಣ ಇರೋದಿಲ್ಲ ಅಂತಾರೆ. ಆದರೆ ಇಲ್ಲೊಂದು ಹಳ್ಳಿಯಲ್ಲಿ ಯುವಕರೇ ಸೇರಿ ಬಸ್ ನಿಲ್ದಾಣವನ್ನೇ (Bus Stop) ಗ್ರಂಥಾಲಯ (Library) ಮಾಡಿದ್ದಾರೆ. ಬಗೆ ಬಗೆಯ ಪುಸ್ತಕಗಳನ್ನ (Books) ಇಟ್ಟು ಓದುಗರಿಗೆ ಜ್ಞಾನ ಹಂಚುತ್ತಿದ್ದಾರೆ ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.

ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಹೋಸ್ಕೆರಿ ಗ್ರಾಮದಲ್ಲಿ ಈ ರೀತಿಯ ವಿನೂತನ ಗ್ರಂಥಾಲಯವನ್ನ ಕಾಣಬಹುದು. ಪುನೀತ್ ರಾಜ್‌ಕುಮಾರ್ ಅಭಿಮಾನಿ ಬಳಗದಿಂದ ಹೋಸ್ಕೆರಿ ಬಸ್ ನಿಲ್ದಾಣದಲ್ಲಿ ಈ ಗ್ರಂಥಾಲಯವನ್ನ ತೆರೆಯಲಾಗಿದೆ. ಬಸ್ ನಿಲ್ದಾಣಕ್ಕೆ ಬಂದವರು ಬಸ್‌ಗಾಗಿ ಕಾಯುತ್ತಾ ಸುಮ್ಮನೆ ಕಾಲಹರಣ ಮಾಡುತ್ತಾರೆ. ಇದನ್ನು ಗಮನಿಸಿದ ಯುವಕರು ನಿಲ್ದಾಣದಲ್ಲಿ ಭಾರತದ ಇತಿಹಾಸ, ಸ್ವಾಮಿ ವಿವೇಕಾನಂದರ ಬಗ್ಗೆ, ಪ್ರಚಲಿತ ವಿದ್ಯಮಾನಗಳ ಬಗ್ಗೆ ಹಾಗೂ ದಿನಪತ್ರಿಕೆಗಳನ್ನ ಇಟ್ಟು ಓದಲು ಹಚ್ಚುತ್ತಿದ್ದಾರೆ.

ಇನ್ನು ಕಾಲಹರಣ ಮಾಡುವವರು ಪುಸ್ತಕಗಳನ್ನ ಓದುವ ಮೂಲಕ ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳುತ್ತಿದ್ದಾರೆ. ಯುವಕರ ಈ ವಿಶಿಷ್ಟ ಯೋಚನೆ ಯಶಸ್ವಿಯಾಗಿದ್ದು, ಇದೀಗ ಗ್ರಾಮಸ್ಥರು ದಿನಕ್ಕೊಂದರಂತೆ ವಿಶೇಷ ಮಾಹಿತಿಯುಳ್ಳ ಪುಸ್ತಕಗಳನ್ನು ಕೊಡುಗೆಯಾಗಿ ಬಸ್ ಸ್ಟಾಪ್ ಗ್ರಂಥಾಲಯಕ್ಕೆ ನೀಡುತ್ತಿದ್ದಾರೆ.

ಇನ್ನು ಪುನೀತ್ ರಾಜ್‍ಕುಮಾರ್ ಅಭಿಮಾನಿ ಬಳಗದವರು ಹೋಸ್ಕೆರಿ ಗ್ರಾಮದಲ್ಲಿ ರಕ್ತದಾನ ಶಿಬಿರ, ನೇತ್ರದಾನ ಶಿಬಿರ ಹೀಗೆ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದಾರೆ. ಆದರೆ ಈ ರೀತಿಯ ಯೋಚನೆ ಬಂದಿದ್ದು ನಿಜಕ್ಕೂ ವಿನೂತನವೇ ಸರಿ. ಇನ್ನೂ ಬಸ್‌ಗಾಗಿ ಕಾಯುವ ಯುವಕ ಯುವತಿಯರಿಗೆ ಮಾತ್ರವಲ್ಲದೇ ಊರಿನ ಹಿರಿಯ ನಾಗರಿಕರಿಗೂ ಬಸ್ ಸ್ಟಾಪ್ ಗ್ರಂಥಾಲಯದಿಂದ ಸಾಕಷ್ಟು ಉಪಯೋಗವಾಗಿದೆ.

ವಾಯುವಿಹಾರಕ್ಕೆ ಬರುವವರಿಗೆ, ಕಟ್ಟೆ ಪಂಚಾಯತಿ ಮಾಡುವವರು ಸಹ, ಈ ಗ್ರಾಂಥಾಲಯಕ್ಕೆ ಬಂದು ಕೆಲ ಸಮಯ ಪುಸ್ತಕಗಳನ್ನ, ದಿನಪತ್ರಿಕೆಗಳನ್ನ ಓದುತ್ತಿದ್ದಾರೆ‌‌. ಜೊತೆಗೆ ದಿನನಿತ್ಯ ಬಳಕೆಯಾಗುತ್ತಿರುವ ಈ ಗ್ರಂಥಾಲಯಕ್ಕೆ ಊರಿನ ಜನರೆ ಮಾಲೀಕರಾಗಿದ್ದು, ಅವರೇ ಬಸ್ ನಿಲ್ದಾಣವನ್ನ ಸ್ವಚ್ಛಗೊಳಿಸಿಕೊಂಡು ಬಳಕೆ ಮಾಡುತ್ತಿದ್ದಾರೆ. ಇನ್ನು ಈ ಗ್ರಂಥಾಲಯಕ್ಕೆ ಹಲವು ಮಹತ್ವದ ಮಾಹಿಯುಳ್ಳ ಪುಸ್ತಕಗಳ ಅವಶ್ಯಕತೆ ಇದೆ ಎನ್ನುತ್ತಾರೆ ಊರಿನ ಗ್ರಾಮಸ್ಥರು.

ಒಟ್ಟಿನಲ್ಲಿ ಪಟ್ಟಣಗಳಲ್ಲಿ, ನಗರಗಳಲ್ಲಿ ಕಾಣುತ್ತಿದ್ದ ಗ್ರಂಥಾಲಯ, ಬಸ್ ನಿಲ್ದಾಣದಲ್ಲಿ ಕಂಡಿದ್ದು ನಿಜಕ್ಕೂ ಖುಷಿ ಸಂಗತಿ. ಇನ್ನಮೇಲಾದರೂ ಯುವ ಸಮೂಹ ಮೊಬೈಲ್ ಇಂಟರ್ನೆಟ್‌ನ್ನ ಮಿತ ಬಳಕೆ ಮಾಡಿ ಹೆಚ್ಚು ಪುಸ್ತಕಗಳನ್ನ ಓದುವ ಹವ್ಯಾಸ ಬೆಳಿಸಿಕೊಂಡರೆ ಆರೋಗ್ಯಕ್ಕೂ, ಜ್ಞಾನ ವೃದ್ಧಿಗೂ ಸಹಕಾರವಾಗುತ್ತದೆ.

ವಿನಾಯಕ ಬಡಿಗೇರೆ ಟಿವಿ9 ಉತ್ತರ ಕನ್ನಡ

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನನ್ನ ಸೊಸೆ ಸ್ಟಾರ್, ಆಕೆಗೆ ಕೆಟ್ಟ ಹೆಸರು ಬರಬಾರದು: ಯಶ್ ತಾಯಿ ಪುಷ್ಪ
ನನ್ನ ಸೊಸೆ ಸ್ಟಾರ್, ಆಕೆಗೆ ಕೆಟ್ಟ ಹೆಸರು ಬರಬಾರದು: ಯಶ್ ತಾಯಿ ಪುಷ್ಪ
ಮೋದಿಮಯವಾದ ನಮೀಬಿಯಾ ಸಂಸತ್; ಸಂಸದರಿಂದ ಎದ್ದು ನಿಂತು ಚಪ್ಪಾಳೆ
ಮೋದಿಮಯವಾದ ನಮೀಬಿಯಾ ಸಂಸತ್; ಸಂಸದರಿಂದ ಎದ್ದು ನಿಂತು ಚಪ್ಪಾಳೆ
ಶಿವಮೊಗ್ಗದಲ್ಲಿ ಅಮಾನವೀಯ ಘಟನೆ:ದೆವ್ವ ಬಿಡಿಸ್ತೀನಂತ ಮಹಿಳೆಯನ್ನೇ ಬಲಿಪಡೆದಳು
ಶಿವಮೊಗ್ಗದಲ್ಲಿ ಅಮಾನವೀಯ ಘಟನೆ:ದೆವ್ವ ಬಿಡಿಸ್ತೀನಂತ ಮಹಿಳೆಯನ್ನೇ ಬಲಿಪಡೆದಳು
‘ನಿದ್ರಾದೇವಿ ನೆಕ್ಸ್ಟ್ ಡೋರ್’ ವೇದಿಕೆ ಮೇಲೆ ಭಾಷೆ ಬಗ್ಗೆ ಗಣೇಶ ಮಾತು
‘ನಿದ್ರಾದೇವಿ ನೆಕ್ಸ್ಟ್ ಡೋರ್’ ವೇದಿಕೆ ಮೇಲೆ ಭಾಷೆ ಬಗ್ಗೆ ಗಣೇಶ ಮಾತು
ಸಿಎಂ ಮತ್ತು ಡಿಸಿಎಂ ಜೊತೆ ಸಚಿವ ಮತ್ತ ಶಾಸಕರ ಪಟಾಲಂ ಕೂಡ ಇದೆ!
ಸಿಎಂ ಮತ್ತು ಡಿಸಿಎಂ ಜೊತೆ ಸಚಿವ ಮತ್ತ ಶಾಸಕರ ಪಟಾಲಂ ಕೂಡ ಇದೆ!
ಹಿಂದೆ ತಾವು ಹೇಳಿದ್ದನ್ನು ನೆನೆಪಿಸಿದಾಗ ಶ್ರೀರಾಮುಲು ನಿರುತ್ತರಾದರು!
ಹಿಂದೆ ತಾವು ಹೇಳಿದ್ದನ್ನು ನೆನೆಪಿಸಿದಾಗ ಶ್ರೀರಾಮುಲು ನಿರುತ್ತರಾದರು!
ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ
ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ
ನಮ್ಮನ್ನು ಅಸಡ್ಡೆ ಮಾಡಲಾಯಿತು, ಆಗಿಂದಲೇ ಹೋರಾಟ ಶುರುವಾಯಿತು: ನಿಶಾ
ನಮ್ಮನ್ನು ಅಸಡ್ಡೆ ಮಾಡಲಾಯಿತು, ಆಗಿಂದಲೇ ಹೋರಾಟ ಶುರುವಾಯಿತು: ನಿಶಾ
ರಸ್ತೆ ಪೂರ್ಣಗೊಳ್ಳುವ ಮೊದಲೇ ಸುಂಕ ವಸೂಲಾತಿ; ಟೋಲ್ ಪ್ಲಾಜಾ ಧ್ವಂಸ
ರಸ್ತೆ ಪೂರ್ಣಗೊಳ್ಳುವ ಮೊದಲೇ ಸುಂಕ ವಸೂಲಾತಿ; ಟೋಲ್ ಪ್ಲಾಜಾ ಧ್ವಂಸ
ನ್ಯಾಯ ಕೊಡಿಸುವ ಭರವಸೆ ಸುರ್ಜೇವಾಲಾ ನೀಡಿದ್ದಾರೆ: ಮಾಳವಿಕ
ನ್ಯಾಯ ಕೊಡಿಸುವ ಭರವಸೆ ಸುರ್ಜೇವಾಲಾ ನೀಡಿದ್ದಾರೆ: ಮಾಳವಿಕ