ಜೋಯಿಡಾದಲ್ಲಿ ಸ್ಪೆಷಲ್ ಜೇನು ಸವಿದು.. ಹಾರ್ನ್ ಬಿಲ್ ಪಕ್ಷಿ ವೀಕ್ಷಿಸಿ ಪುನೀತರಾದ ಅಪ್ಪು!
ಉತ್ತರ ಕನ್ನಡ: ಜಿಲ್ಲೆಯ ಪ್ರಸಿದ್ಧ ಜೋಯಿಡಾ ವನ್ಯಜೀವಿ ತಾಣಕ್ಕೆ ಇಂದು ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಭೇಟಿ ಕೊಟ್ಟರು. ಸಾಕ್ಷ್ಯ ಚಿತ್ರವೊಂದರ ಶೂಟಿಂಗ್ಗಾಗಿ ಪುನೀತ್ ರಾಜ್ಕುಮಾರ್ ಜೋಯಿಡಾಕ್ಕೆ ಬಂದಿದ್ದರು. ತಮ್ಮ ಭೇಟಿ ವೇಳೆ ನಟ ಜೋಯಿಡಾದ ವಿಶೇಷ ಜೇನು ಸವಿದು ಎಂಜಾಯ್ ಮಾಡಿದರು. ಜೊತೆಗೆ, ಚಾಪಖಂಡ ನರಸಿಂಹ ಭಟ್ರವರ ಹನಿ ಬೀ ಪಾರ್ಕ್ನಲ್ಲಿ ಜೇನು ಕೃಷಿ ನೋಡಿ ಸಂತಸಪಟ್ಟರು. ಅಷ್ಟೇ ಅಲ್ಲದೆ, ತಮ್ಮ ಭೇಟಿಯ ನೆನಪಿಗಾಗಿ ಹನಿ ಬೀ ಪಾರ್ಕ್ನ ಟೀ-ಶರ್ಟ್ ತರಿಸಿ ಹಾಕಿಕೊಂಡರು. ಇದಲ್ಲದೆ, ಜೋಯಿಡಾ ವನ್ಯಜೀವಿ […]

ಉತ್ತರ ಕನ್ನಡ: ಜಿಲ್ಲೆಯ ಪ್ರಸಿದ್ಧ ಜೋಯಿಡಾ ವನ್ಯಜೀವಿ ತಾಣಕ್ಕೆ ಇಂದು ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಭೇಟಿ ಕೊಟ್ಟರು. ಸಾಕ್ಷ್ಯ ಚಿತ್ರವೊಂದರ ಶೂಟಿಂಗ್ಗಾಗಿ ಪುನೀತ್ ರಾಜ್ಕುಮಾರ್ ಜೋಯಿಡಾಕ್ಕೆ ಬಂದಿದ್ದರು.
ತಮ್ಮ ಭೇಟಿ ವೇಳೆ ನಟ ಜೋಯಿಡಾದ ವಿಶೇಷ ಜೇನು ಸವಿದು ಎಂಜಾಯ್ ಮಾಡಿದರು. ಜೊತೆಗೆ, ಚಾಪಖಂಡ ನರಸಿಂಹ ಭಟ್ರವರ ಹನಿ ಬೀ ಪಾರ್ಕ್ನಲ್ಲಿ ಜೇನು ಕೃಷಿ ನೋಡಿ ಸಂತಸಪಟ್ಟರು. ಅಷ್ಟೇ ಅಲ್ಲದೆ, ತಮ್ಮ ಭೇಟಿಯ ನೆನಪಿಗಾಗಿ ಹನಿ ಬೀ ಪಾರ್ಕ್ನ ಟೀ-ಶರ್ಟ್ ತರಿಸಿ ಹಾಕಿಕೊಂಡರು.
ಇದಲ್ಲದೆ, ಜೋಯಿಡಾ ವನ್ಯಜೀವಿ ತಾಣದಲ್ಲಿ ಪಕ್ಷಿ ವೀಕ್ಷಣೆಗೆ ಸಹ ಮುಂದಾದರು. ವನ್ಯಜೀವಿ ಧಾಮದ ಸುಪ್ರಸಿದ್ಧ ದಿ ಗ್ರೇಟ್ ಇಂಡಿಯನ್ ಹಾರ್ನ್ ಬಿಲ್ ಪಕ್ಷಿಯನ್ನು ಸಹ ವೀಕ್ಷಿಸಿ ಆನಂದಿಸಿದರು.
Published On - 11:58 am, Mon, 9 November 20