ಬೆಂಗಳೂರು: ಕೊರೊನಾ ಸೋಂಕು ನಿಯಂತ್ರಣ ವಿಚಾರಕ್ಕೆ ಸಂಬಂಧಿಸಿ ವಿಧಾನಸೌಧದಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ತಜ್ಞರ ಸಭೆ ಅಂತ್ಯವಾಗಿದೆ. ಸಭೆ ಬಳಿಕ ವಿಧಾನಸೌಧದಲ್ಲಿ ಸಿಎಂ ಯಡಿಯೂರಪ್ಪ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.
ರೋಗ ಲಕ್ಷಣ ಇಲ್ಲದ ಕೊರೊನಾ ಸೋಂಕಿತರಿಗೆ ಮನೆಯಲ್ಲೇ ಚಿಕಿತ್ಸೆ ನೀಡುವ ಬಗ್ಗೆ ತಜ್ಞರು ಸಲಹೆ ನೀಡಿದ್ದಾರೆ. ಸೋಂಕಿತರಿಗೆ ಸಾಂಸ್ಥಿಕ ಕ್ವಾರಂಟೈನ್ ಅನಗತ್ಯ ಎಂಬ ಬಗ್ಗೆಯೂ ಸಲಹೆ ಕೊಟ್ಟಿದ್ದಾರೆ.
ಕೊವಿಡ್ ಹೆಚ್ಚಾದರೂ ಸಹ ಯಾರನ್ನೂ ಹೆದರಿಸಬಾರದು, ಕೊವಿಡ್ ಬಂದರೆ ಜೀವ ಅಂತ್ಯವಲ್ಲ. ರೋಗ ಲಕ್ಷಣ ಇಲ್ಲದವರು ಆಸ್ಪತ್ರೆಗೆ ದಾಖಲಾಗುವುದ ಬೇಡ. ಕೊವಿಡ್ ಚಿಕಿತ್ಸೆಗೆ ಬೆಡ್ಗಳ ಕೊರತೆ ಆಗುವುದಿಲ್ಲ ಎಂದು ಮಣಿಪಾಲ್ ಸಮೂಹದ ಮುಖ್ಯಸ್ಥ ಡಾ.ಸುದರ್ಶನ್ ಬಲ್ಲಾಳ್ ಹೇಳಿದ್ದಾರೆ.