
ಬೆಂಗಳೂರು: ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ ಸಂಭವಿಸಿದ ಹಿಂಸಾಚಾರದಲ್ಲಿ ಗಲಭೆಕೋರರು ಶಾಸಕ ಅಖಂಡ ಶ್ರೀನಿವಾಸಮೂರ್ತಿಯನ್ನ ಮುಗಿಸಲು ಬಂದಂತಿದೆ ಎಂದು ವಿಧಾನಸೌಧದಲ್ಲಿ ಕಂದಾಯ ಸಚಿವ R ಅಶೋಕ್ ಹೇಳಿದ್ದಾರೆ.
ಶಾಸಕ ಅಖಂಡ ಶ್ರೀನಿವಾಸಮೂರ್ತಿ ಸೌಮ್ಯ ಸ್ವಭಾವದವರು. ನಿನ್ನೆ ಘಟನೆಯಿಂದ ಅವರ ಅಣ್ಣ-ತಮ್ಮಂದಿರು ಬೀದಿಪಾಲಾಗಿದ್ದಾರೆ. ಕಿಡಿಗೇಡಿಗಳು ಅವರ ಮನೆಗಳಲ್ಲೂ ಲೂಟಿ ಮಾಡಿದ್ದಾರೆ. ಜೊತೆಗೆ, ಮನೆಗಳಲ್ಲಿ ಇದ್ದ ವಸ್ತುಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ಅಶೋಕ್ ಹೇಳಿದರು.
ಈ ಘಟನೆ ಹಿಂದೆ ಇರುವ ಯಾರನ್ನೂ ಬಿಡಬಾರದು. ಶಾಸಕರು ಮತ್ತು ಅವರ ಕುಟುಂಬವನ್ನು ಟಾರ್ಗೆಟ್ ಮಾಡಲಾಗಿದೆ. ಬೆಂಗಳೂರಿಗರನ್ನ ಬೆದರಿಸಬೇಕೆಂದು ಇಂಥ ಕೃತ್ಯಕ್ಕೆ ಕೈಹಾಕಲಾಗಿದೆ. ಸಿಎಂ ಭೇಟಿ ಬಳಿಕ ಮುಂದಿನ ತನಿಖೆ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ. ಜೊತೆಗೆ ಶಾಸಕರಿಗೆ, ಎಲ್ಲ ರೀತಿಯ ರಕ್ಷಣೆ ನೀಡುವುದಾಗಿ ಸರ್ಕಾರದಿಂದ ಭರವಸೆ ಕೊಟ್ಟಿದ್ದೇವೆ ಎಂದು ಹೇಳಿದರು.
‘ಕಿಡಿಗೇಡಿಗಳನ್ನ ಬಂಧಿಸಿ ಜೈಲಿಗೆ ಕಳಿಸೋವರೆಗೂ ಬಿಡಲ್ಲ’
ಕಿಡಿಗೇಡಿಗಳನ್ನ ಬಂಧಿಸಿ ಜೈಲಿಗೆ ಕಳಿಸೋವರೆಗೂ ಬಿಡಲ್ಲ. ಇಂಥ ಕೃತ್ಯ ಮಾಡುವುದು ನಕ್ಸಲರು ಮಾತ್ರ. ಈ ರೀತಿ ಮಾಡಿದ್ದಾರೆ ಅಂದರೆ ಯಾವ ಮಟ್ಟಕ್ಕೆ ಬಂದಿದ್ದಾರೆ ಎಂದು ತಿಳಿಯುತ್ತದೆ. ಸದ್ಯ ಎಲ್ಲ ಪ್ರದೇಶಗಳು ಸಂಪೂರ್ಣ ನಿಯಂತ್ರಣದಲ್ಲಿದೆ. ಡಿಸಿಪಿಯನ್ನು ಕೂಡಿ ಹಾಕ್ತಾರೆಂದರೆ ಅವರು ದೇಶದ್ರೋಹಿಗಳು . ದೇಶದ್ರೋಹಿಗಳಿಗೆ ಬುದ್ಧಿ ಕಲಿಸುವ ಕೆಲಸ ಮಾಡುತ್ತೇವೆ ಎಂದೂ ಅವರು ಹೇಳಿದರು.
Published On - 3:55 pm, Wed, 12 August 20