McDonald’s ಕಾಮಕಾಂಡ: ಮಾಜಿ ಸಿಇಒ ಈ-ಮೇಲ್ನಲ್ಲಿ ಮಹಿಳೆಯರ ನಗ್ನ ಫೋಟೋ ಪತ್ತೆ!
ಅಮೆರಿಕಾದ ಪ್ರತಿಷ್ಠಿತ ಮೆಕ್ ಡೊನಾಲ್ಡ್ಸ್ ಫಾಸ್ಟ್ ಫುಡ್ ಸರಣಿ ರೆಸ್ಟೋರೆಂಟ್ ಕಂಪನಿಯ ಮಾಜಿ ಸಿಇಒ ಸ್ಟೀವ್ ಈಸ್ಟರ್ಬ್ರೂಕ್ರ ಖಾಸಗಿ ಇ-ಮೇಲ್ ಖಾತೆಯಲ್ಲಿ ಮಹಿಳೆಯರ ನೂರಾರು ನಗ್ನ ಫೋಟೋಗಳು ಪತ್ತೆಯಾಗಿದೆ. ಜೊತೆಗೆ, ಸ್ಟೀವ್ ಕಂಪನಿಯ ಕೆಲವು ಮಹಿಳಾ ಉದ್ಯೋಗಿಗಳೊಂದಿಗೆ ಲೈಂಗಿಕ ಸಂಬಂಧ ಸಹ ಹೊಂದಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ. ಕಳೆದ ವರ್ಷ ಮಹಿಳಾ ಸಹೋದ್ಯೋಗಿಯೊಂದಿಗೆ ಸ್ಟೀವ್ ಲೈಂಗಿಕ ಸಂಬಂಧ ಹೊಂದಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಇದರ ಬೆನ್ನಲ್ಲೇ ಮೆಕ್ ಡೊನಾಲ್ಡ್ಸ್ ಕಂಪನಿಯ ಆಡಳಿತವು ಅಂದಿನ ಸಿಇಒ […]
ಅಮೆರಿಕಾದ ಪ್ರತಿಷ್ಠಿತ ಮೆಕ್ ಡೊನಾಲ್ಡ್ಸ್ ಫಾಸ್ಟ್ ಫುಡ್ ಸರಣಿ ರೆಸ್ಟೋರೆಂಟ್ ಕಂಪನಿಯ ಮಾಜಿ ಸಿಇಒ ಸ್ಟೀವ್ ಈಸ್ಟರ್ಬ್ರೂಕ್ರ ಖಾಸಗಿ ಇ-ಮೇಲ್ ಖಾತೆಯಲ್ಲಿ ಮಹಿಳೆಯರ ನೂರಾರು ನಗ್ನ ಫೋಟೋಗಳು ಪತ್ತೆಯಾಗಿದೆ. ಜೊತೆಗೆ, ಸ್ಟೀವ್ ಕಂಪನಿಯ ಕೆಲವು ಮಹಿಳಾ ಉದ್ಯೋಗಿಗಳೊಂದಿಗೆ ಲೈಂಗಿಕ ಸಂಬಂಧ ಸಹ ಹೊಂದಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ.
ಕಳೆದ ವರ್ಷ ಮಹಿಳಾ ಸಹೋದ್ಯೋಗಿಯೊಂದಿಗೆ ಸ್ಟೀವ್ ಲೈಂಗಿಕ ಸಂಬಂಧ ಹೊಂದಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಇದರ ಬೆನ್ನಲ್ಲೇ ಮೆಕ್ ಡೊನಾಲ್ಡ್ಸ್ ಕಂಪನಿಯ ಆಡಳಿತವು ಅಂದಿನ ಸಿಇಒ ಆಗಿದ್ದ ಸ್ಟೀವ್ನ ಕೆಲಸದಿಂದ ವಜಾಮಾಡಿತ್ತು. ಆದರೆ, ಇದೀಗ, ಆತ ಕಂಪನಿಯ ಹಲವಾರು ಮಹಿಳಾ ಉದ್ಯೋಗಿಗಳೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದ ಎಂಬ ಆರೋಪಗಳ ಸರಮಾಲೆ ಹೊರಬರುತ್ತಿದ್ದಂತೆ ಆತನ ಮೇಲೆ ನ್ಯಾಯಾಲಯದಲ್ಲಿ ಕೇಸ್ ದಾಖಲಿಸಿತ್ತು.
ಕೇಸ್ ವಿಚಾರಣೆ ವೇಳೆ ಕಂಪನಿಯು ಸ್ಟೀವ್ ತನ್ನ ಅಧಿಕೃತ ಇ-ಮೇಲ್ ಖಾತೆಯಿಂದ ಹಲವಾರು ಮಹಿಳಾ ಉದ್ಯೋಗಿಗಳ ನಗ್ನ ಫೋಟೋಗಳನ್ನ ತನ್ನ ಖಾಸಗಿ ಇ-ಮೇಲ್ಗೆ ವರ್ಗಾಯಿಸಿದ್ದ. ಅದರಲ್ಲಿ, ತನ್ನೊಟ್ಟಿಗೆ ಲೈಂಗಿಕ ಸಂಬಂಧ ಬೆಳೆಸಿದ್ದ ಉದ್ಯೋಗಿಗಳ ಫೋಟೋ ಸಹ ಇದೆ ಎಂದು ಕೋರ್ಟ್ನಲ್ಲಿ ಉಲ್ಲೇಖಿಸಿತ್ತು.
ಮೆಕ್ ಡೊನಾಲ್ಡ್ಸ್ ಕಂಪನಿಯು ತಾನು ಮಂಡಿಸಿರುವ ವಾದದಲ್ಲಿ ರಾಜೀನಾಮೆ ವೇಳೆ ಸ್ಟೀವ್ ತೆಗೆದುಕೊಂಡಿದ್ದ ಬೇರ್ಪಡಿಕೆ ಮೊತ್ತದಲ್ಲಿ ಸುಮಾರು 42 ಮಿಲಿಯನ್ ಡಾಲರ್ಗಳನ್ನು ವಾಪಸ್ ಕೊಡಿಸಲು ಕೋರ್ಟ್ಗೆ ಮನವಿ ಮಾಡಿದೆ.