ನೋ ಲಾಕ್​ಡೌನ್ ಇನ್ ಬೆಂಗಳೂರು, ಇದು ಕ್ಲಿಯರ್ -ಆರ್.ಅಶೋಕ್​

|

Updated on: Jun 25, 2020 | 3:31 PM

ಬೆಂಗಳೂರು: ನಗರದಲ್ಲಿ ಯಾವುದೇ ಕಾರಣಕ್ಕೂ ಲಾಕ್​ಡೌನ್ ಮಾಡುವುದಿಲ್ಲ ಎಂದು ಕಂದಾಯ ಸಚಿವ ಆರ್​. ಅಶೋಕ್​ ಸ್ಪಷ್ಟನೆ ನೀಡಿದ್ದಾರೆ. ವಿಧಾನಸೌಧದಲ್ಲಿ ಕೊವಿಡ್ ನಿಯಂತ್ರಣ ಸಭೆ ಬಳಿಕ ಮಾತನಾಡಿದ ಅಶೋಕ್,​ ನೋ ಲಾಕ್​ಡೌನ್ ಇನ್ ಬೆಂಗಳೂರು ಇದು ಕ್ಲಿಯರ್ ಎಂದು ಹೇಳಿದ್ದಾರೆ. ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಸೋಂಕಿತರು ಯಾವುದೇ ಕಾರಣಕ್ಕೂ ಕಾಯಬಾರದು. ರಸ್ತೆಯಲ್ಲಿ ನಿಲ್ಲದಂತೆ ವ್ಯವಸ್ಥೆ ಮಾಡುತ್ತಿದ್ದೇವೆ. 6-8 ಗಂಟೆಗಳ ಒಳಗೆ ಸೋಂಕಿತರನ್ನು ಆಸ್ಪತ್ರೆಗೆ ಶಿಫ್ಟ್​ ಮಾಡುತ್ತೇವೆ. ಜೊತೆಗೆ ಲಕ್ಷಣವಿಲ್ಲದ ರೋಗಿಗಳನ್ನು ಪ್ರತ್ಯೇಕವಾಗಿರಿಸುತ್ತೇವೆ ಎಂದು ತಿಳಿಸಿದ್ದಾರೆ. ಬೆಂಗಳೂರಿನಲ್ಲಿ 100 […]

ನೋ ಲಾಕ್​ಡೌನ್ ಇನ್ ಬೆಂಗಳೂರು, ಇದು ಕ್ಲಿಯರ್ -ಆರ್.ಅಶೋಕ್​
Follow us on

ಬೆಂಗಳೂರು: ನಗರದಲ್ಲಿ ಯಾವುದೇ ಕಾರಣಕ್ಕೂ ಲಾಕ್​ಡೌನ್ ಮಾಡುವುದಿಲ್ಲ ಎಂದು ಕಂದಾಯ ಸಚಿವ ಆರ್​. ಅಶೋಕ್​ ಸ್ಪಷ್ಟನೆ ನೀಡಿದ್ದಾರೆ. ವಿಧಾನಸೌಧದಲ್ಲಿ ಕೊವಿಡ್ ನಿಯಂತ್ರಣ ಸಭೆ ಬಳಿಕ ಮಾತನಾಡಿದ ಅಶೋಕ್,​ ನೋ ಲಾಕ್​ಡೌನ್ ಇನ್ ಬೆಂಗಳೂರು ಇದು ಕ್ಲಿಯರ್ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಸೋಂಕಿತರು ಯಾವುದೇ ಕಾರಣಕ್ಕೂ ಕಾಯಬಾರದು. ರಸ್ತೆಯಲ್ಲಿ ನಿಲ್ಲದಂತೆ ವ್ಯವಸ್ಥೆ ಮಾಡುತ್ತಿದ್ದೇವೆ. 6-8 ಗಂಟೆಗಳ ಒಳಗೆ ಸೋಂಕಿತರನ್ನು ಆಸ್ಪತ್ರೆಗೆ ಶಿಫ್ಟ್​ ಮಾಡುತ್ತೇವೆ. ಜೊತೆಗೆ ಲಕ್ಷಣವಿಲ್ಲದ ರೋಗಿಗಳನ್ನು ಪ್ರತ್ಯೇಕವಾಗಿರಿಸುತ್ತೇವೆ ಎಂದು ತಿಳಿಸಿದ್ದಾರೆ. ಬೆಂಗಳೂರಿನಲ್ಲಿ 100 ಆ್ಯಂಬುಲೆನ್ಸ್​ಗಳ ವ್ಯವಸ್ಥೆ ಮಾಡಿದ್ದೇವೆ. ಪ್ರತಿ ಎರಡು ವಾರ್ಡ್​ಗಳಿಗೆ 1 ಆ್ಯಂಬುಲೆನ್ಸ್​ ವ್ಯವಸ್ಥೆ ಮಾಡಿದ್ದೇವೆ ಎಂದರು.

ಕೋವಿಡ್ ಬೆಂಗಳೂರು ಉಸ್ತುವಾರಿ ಆರ್. ಅಶೋಕ್ ಗೆ ಹಸ್ತಾಂತರ
ಇದೀಗ ಕೋವಿಡ್ ಬೆಂಗಳೂರು ಉಸ್ತುವಾರಿಯನ್ನು ಆರ್. ಅಶೋಕ್​ಗೆ ಹಸ್ತಾಂತರಿಸಲಾಗಿದೆ. ಇಂದಿನಿಂದಲೇ ಬೆಂಗಳೂರಿನ ಕೋವಿಡ್ ಉಸ್ತುವಾರಿಯನ್ನು ಸಚಿವರು ನೋಡಿಕೊಳ್ಳಲಿದ್ದಾರೆ. ಬೆಂಗಳೂರು ಕೋವಿಡ್ ಉಸ್ತುವಾರಿಯನ್ನು ಈ ಹಿಂದೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ನಿರ್ವಹಿಸುತ್ತಿದ್ದರು. ಸಚಿವ ಸುಧಾಕರ್ ಹೋಮ್‌ ಕ್ವಾರಂಟೈನ್ ನಲ್ಲಿ ಇರುವ ಹಿನ್ನೆಲೆಯಲ್ಲಿ ಈ ಜವಾಬ್ದಾರಿಯನ್ನ ಅಶೋಕ್​ರಿಗೆ ವಹಿಸಲಾಗಿದೆ.

Published On - 3:21 pm, Thu, 25 June 20