ಸಚಿವ ಡಾ. ಕೆ.ಸುಧಾಕರ್ ಭಾವಮೈದುನಗೆ ಕೊರೊನಾ ಅಟ್ಯಾಕ್
ಬೆಂಗಳೂರು: ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಭಾವಮೈದುನನಿಗೂ ಕೊರೊನಾ ಸೋಂಕು ಹೊಕ್ಕಿದೆ. ಜೊತೆಗೆ ಆತನ ಸ್ನೇಹಿತನಿಗೂ ಕೊರೊನಾ ಪಾಸಿಟಿವ್ ಬಂದಿದೆ. ಸೋಂಕು ದೃಢವಾಗುತ್ತಿದ್ದಂತೆ ವೈದ್ಯಾಧಿಕಾರಿಗಳು ಕೋವಿಡ್ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ. ಕೆಲ ದಿನಗಳ ಹಿಂದೆ ಸಚಿವ ಸುಧಾಕರ್ ಅವರ ತಂದೆ, ಪತ್ನಿ ಹಾಗೂ ಮಗಳಿಗೂ ಸೋಂಕು ತಗುಲಿತ್ತು. ಸದ್ಯ 82 ವರ್ಷ ವಯಸ್ಸಿನ ಸುಧಾಕರ್ ತಂದೆಯವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಸಚಿವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಅಡುಗೆ ಭಟ್ಟನಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಸುಧಾಕರ್ ತಮ್ಮ […]
ಬೆಂಗಳೂರು: ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಭಾವಮೈದುನನಿಗೂ ಕೊರೊನಾ ಸೋಂಕು ಹೊಕ್ಕಿದೆ. ಜೊತೆಗೆ ಆತನ ಸ್ನೇಹಿತನಿಗೂ ಕೊರೊನಾ ಪಾಸಿಟಿವ್ ಬಂದಿದೆ. ಸೋಂಕು ದೃಢವಾಗುತ್ತಿದ್ದಂತೆ ವೈದ್ಯಾಧಿಕಾರಿಗಳು ಕೋವಿಡ್ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ.
ಕೆಲ ದಿನಗಳ ಹಿಂದೆ ಸಚಿವ ಸುಧಾಕರ್ ಅವರ ತಂದೆ, ಪತ್ನಿ ಹಾಗೂ ಮಗಳಿಗೂ ಸೋಂಕು ತಗುಲಿತ್ತು. ಸದ್ಯ 82 ವರ್ಷ ವಯಸ್ಸಿನ ಸುಧಾಕರ್ ತಂದೆಯವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ.
ಸಚಿವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಅಡುಗೆ ಭಟ್ಟನಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಸುಧಾಕರ್ ತಮ್ಮ ಕುಟುಂಬದವರಿಗೆ ಕೋವಿಡ್ ಪರೀಕ್ಷೆ ಮಾಡಿಸಿದ್ದರು. ಈ ವೇಳೆ 82 ವರ್ಷ ವಯಸ್ಸಿನ ತಂದೆಯವರಿಗೆ, ಪತ್ನಿ ಹಾಗೂ ಮಗಳಿಗೆ ಕೊರೊನಾ ಪಾಸಿಟಿವ್ ಬಂದಿತ್ತು.
Published On - 2:51 pm, Thu, 25 June 20