ಇಂದು ರಾಗಿಣಿ ಬಿಡುಗಡೆ ಸಾಧ್ಯತೆ.. ಮನೆಯಲ್ಲಿ ವಿಶೇಷ ಪೂಜೆಗೆ ಸಿದ್ಧತೆ ನಡೆಸಿದ ಕುಟುಂಬ

140 ದಿನಗಳಿಂದ ದೂರವಿದ್ದ ಮನೆ ಮಗಳ ಬರುವಿಕೆಗಾಗಿ ಕಾಯುತ್ತಿರುವ ಕುಟುಂಬ ವರ್ಗದವರು, ರಾಗಿಣಿಯ ಕೈಯಿಂದಲೇ ವಿಶೇಷ ಪೋಜೆ ಮಾಡಿಸುವುದಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ.

ಇಂದು ರಾಗಿಣಿ ಬಿಡುಗಡೆ ಸಾಧ್ಯತೆ.. ಮನೆಯಲ್ಲಿ ವಿಶೇಷ ಪೂಜೆಗೆ ಸಿದ್ಧತೆ ನಡೆಸಿದ  ಕುಟುಂಬ
ಸಂಗ್ರಹ ಚಿತ್ರ
Edited By:

Updated on: Jan 23, 2021 | 1:45 PM

ಬೆಂಗಳೂರು: ನಟಿ ರಾಗಿಣಿ ದ್ವಿವೇದಿ ಇಂದು ಜೈಲಿನಿಂದ ಹೊರಬರುವ ಸಾಧ್ಯತೆ ಇದ್ದು, ಅವರನ್ನು ಬರಮಾಡಿಕೊಳ್ಳಲು ಕುಟುಂಬಸ್ಥರು ಸಜ್ಜಾಗಿದ್ದಾರೆ.  143 ದಿನಗಳಿಂದ ದೂರವಿದ್ದ ಮನೆ ಮಗಳ ಬರುವಿಕೆಗಾಗಿ ಕಾಯುತ್ತಿರುವ ಕುಟುಂಬ ವರ್ಗದವರು, ರಾಗಿಣಿಯ ಕೈಯಿಂದಲೇ ವಿಶೇಷ ಪೂಜೆ ಮಾಡಿಸುವುದಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ.

ಇಂದು ರಾಗಿಣಿ ಮನೆಗೆ ಬಂದ ಕೂಡಲೇ ಆಕೆಯಿಂದಲೇ ಸರಳವಾಗಿ ದೇವರ ಪೂಜೆ ಮಾಡಿಸಲು ತಯಾರಿ ನಡೆಸಲಾಗಿದ್ದು, ಯಾವುದೇ ದೊಡ್ಡ ರೀತಿ ಆಚರಣೆ ಮಾಡದಿರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈ ಕಾರಣದಿಂದ ಆಕೆಯ ಪೋಷಕರೊಂದಿಗೆ ಕೆಲ ಸ್ನೇಹಿತರು ಸಹ ರಾಗಿಣಿಗಾಗಿ ಮನೆಯಲ್ಲಿ ಕಾಯುತ್ತಿದ್ದಾರೆ.

ರಾಗಿಣಿ ದ್ವಿವೇದಿ (ಸಂಗ್ರಹ ಚಿತ್ರ)