ಚಿತ್ರದುರ್ಗ: ಸ್ಯಾಂಡಲ್ವುಡ್ ನಟ ನಟಿಯರಿಗೆ ಹಲವಾರು ಅಭಿಮಾನಿಗಳಿರುತ್ತಾರೆ. ಕೆಲವು ಕಟ್ಟಾಭಿಮಾನಿಗಳು ಸಹ ಇರುತ್ತಾರೆ. ಅಂತೆಯೇ, ನಟಿ ರಾಗಿಣಿ ದ್ವಿವೇದಿ ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಜೈಲುಪಾಲಾದ ಬಳಿಕ ನಟಿಯ ಕಟ್ಟಾಭಿಮಾನಿಯೊಬ್ಬ ತನ್ನ ನೋವು ಮತ್ತು ಸಿಟ್ಟು ಹೊರಹಾಕಿದ್ದಾನೆ. ಕೋಟೆನಾಡಿನವನಾದ ರಾಗಿಣಿ ಅಭಿಮಾನಿಯ ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಸಹ ಆಗಿದೆ.
ರಾಗಿಣಿಗಾಗಿ ನನ್ನ ರಕ್ತ ಮತ್ತು ಪ್ರಾಣ ಕೊಡಲು ಸಿದ್ಧನಾಗಿರುವೆ ಎಂದು ಘೋಷಿಸಿರುವ ಆಕೆಯ ಅಭಿಮಾನಿ ಸುಧಾಕರ್ ನಟಿ ರಾಗಿಣಿ ನನ್ನ ದೇವತೆ, ಕನಸಿನ ರಾಣಿ ಎಂದು ಹೇಳಿಕೊಂಡಿದ್ದಾನೆ. ಜೊತೆಗೆ, ರಾಗಿಣಿನ ಡ್ರಗ್ಸ್ ಅಡಿಕ್ಟ್ ಮಾಡಿದವರಿಗೆ ಗಲ್ಲು ಶಿಕ್ಷೆ ಆಗಲಿ ಅಂತಾ ತನ್ನ ಆಕ್ರೋಶ ಸಹ ಹೊರಹಾಕಿದ್ದಾನೆ.
ತಾನು RTI ಕಾರ್ಯಕರ್ತ ಎಂದು ಹೇಳಿಕೊಂಡಿರುವ ಜಿಲ್ಲೆಯ ಹಿರಿಯೂರಿನ ನಿವಾಸಿ ಬಿ.ಸುಧಾಕರ್ನ ವಿಡಿಯೋ ಈಗ ವೈರಲ್ ಆಗಿದೆ.
Published On - 11:09 am, Fri, 18 September 20