ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ದೇಗುಲಗಳ ದರೋಡೆ ನಿಲ್ಲುತ್ತಿಲ್ಲ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೆ. ಶೆಟ್ಟಹಳ್ಳಿ ಗ್ರಾಮದ ಆಂಜನೇಯ ಸ್ವಾಮಿ ದೇಗುಲದ ಬಾಗಿಲು ಮುರಿದು ಕಳ್ಳರು ತಮ್ಮ ಕೈಚಳಕ ಪ್ರದರ್ಶಿಸಿದ್ದಾರೆ.
ನಾಲ್ಕೈದು ಜನರ ತಂಡ ದೇಗುಲದ ಗ್ರಿಲ್ ಬಾಗಿಲು ಮುರಿದು ದೇವಾಲಯದ ಒಳಗಿದ್ದ ಹುಂಡಿ ಹೊತ್ತೊಯ್ದಿದ್ದಾರೆ. ದುಷ್ಕರ್ಮಿಗಳ ದರೋಡೆ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಳೆದ ವಾರವಷ್ಟೇ ಮಂಡ್ಯದಲ್ಲಿ ಅರ್ಚಕರನ್ನು ಕೊಂದು ದೇಗುಲ ದರೋಡೆ ಮಾಡಿದ್ದ ಘಟನೆ ನಡೆದಿತ್ತು.
ಇದಲ್ಲದೆ ಜಿಲ್ಲೆಯ ಹಲವಾರು ಕಡೆ ದೇಗುಲಗಳಲ್ಲಿ ದರೋಡೆ ನಡೆಯುತ್ತಲೇ ಇದೆ. ಈ ಕೃತ್ಯಗಳನ್ನು ನೋಡುತ್ತಿದ್ದರೆ ದೇಗುಲಗಳನ್ನು ಟಾರ್ಗೆಟ್ ಮಾಡಿ ದರೋಡೆ ಮಾಡೋ ತಂಡ ಜಿಲ್ಲೆಯಲ್ಲಿ ಬೀಡು ಬಿಟ್ಟಿರೋ ಶಂಕೆ ವ್ಯಕ್ತವಾಗುತ್ತಿದೆ. ಕೆ.ಎಂ. ದೊಡ್ಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ದೈವೀ ಸನ್ನಿಧಿಯಲ್ಲಿ ಪೈಶಾಚಿಕ ಕೃತ್ಯ: ಮೂವರ ಬರ್ಬರ ಕೊಲೆ, ಹುಂಡಿ ಕದ್ದೊಯ್ದ ದುಷ್ಕರ್ಮಿಗಳು