ಡಾ. ರಾಜಕುಮಾರ್‌ಗೆ ಭಾರತ ರತ್ನ ಪ್ರಶಸ್ತಿ ನೀಡಿ, ಮೋದಿಗೆ ಸಂಸದರ ಆಗ್ರಹ

ಡಾ. ರಾಜಕುಮಾರ್‌ಗೆ ಭಾರತ ರತ್ನ ಪ್ರಶಸ್ತಿ ನೀಡಿ, ಮೋದಿಗೆ ಸಂಸದರ ಆಗ್ರಹ

ಬೆಂಗಳೂರು: ಕನ್ನಡ ಚಲನ ಚಿತ್ರರಂಗದ ಮೇರುನಟ ಡಾ. ರಾಜಕುಮಾರ್‌ ಅವರಿಗೆ ಭಾರತ ರತ್ನ ಪುರಸ್ಕಾರ ನೀಡಿ ಎನ್ನುವ ಕೂಗೂ ಮತ್ತೇ ಕೇಳಿ ಬಂದಿದೆ. ಹೌದು ಕನ್ನಡದ ಮಹಾನ್‌ ನಟ ಡಾ. ರಾಜಕುಮಾರ್‌ ಅವರಿಗೆ ಭಾರತ ರತ್ನ ಪುರಸ್ಕಾರ ನೀಡಿ ಎಂದು ರಾಜ್ಯಸಭಾ ಸದಸ್ಯ ಜಿ ಸಿ ಚಂದ್ರಶೇಖರ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಡಾ. ರಾಜ್‌ಗೆ ಈಗಾಗಲೇ ಕರ್ನಾಟಕ ರತ್ನ, ಪದ್ಮಭೂಷಣ, ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿಗಳು ಲಭಿಸಿವೆ. ಕರ್ನಾಟಕದ ಸಾಂಸ್ಕೃತಿಕ ರಾಯಭಾರಿಯಾಗಿರೋ […]

Guru

| Edited By:

Jul 26, 2020 | 1:50 AM

ಬೆಂಗಳೂರು: ಕನ್ನಡ ಚಲನ ಚಿತ್ರರಂಗದ ಮೇರುನಟ ಡಾ. ರಾಜಕುಮಾರ್‌ ಅವರಿಗೆ ಭಾರತ ರತ್ನ ಪುರಸ್ಕಾರ ನೀಡಿ ಎನ್ನುವ ಕೂಗೂ ಮತ್ತೇ ಕೇಳಿ ಬಂದಿದೆ.

ಹೌದು ಕನ್ನಡದ ಮಹಾನ್‌ ನಟ ಡಾ. ರಾಜಕುಮಾರ್‌ ಅವರಿಗೆ ಭಾರತ ರತ್ನ ಪುರಸ್ಕಾರ ನೀಡಿ ಎಂದು ರಾಜ್ಯಸಭಾ ಸದಸ್ಯ ಜಿ ಸಿ ಚಂದ್ರಶೇಖರ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಡಾ. ರಾಜ್‌ಗೆ ಈಗಾಗಲೇ ಕರ್ನಾಟಕ ರತ್ನ, ಪದ್ಮಭೂಷಣ, ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿಗಳು ಲಭಿಸಿವೆ. ಕರ್ನಾಟಕದ ಸಾಂಸ್ಕೃತಿಕ ರಾಯಭಾರಿಯಾಗಿರೋ ಡಾ.ರಾಜ್ ಗೆ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿ ನೀಡಿ ಎಂದು ಅವರು ಮನವಿ ಮಾಡಿದ್ದಾರೆ.

ಕೇವಲ ಕನ್ನಡ ಚಿತ್ರರಂಗ ಮಾತ್ರವಲ್ಲ ಇಡೀ ಭಾರತೀಯ ಸಿನೆಮಾ ರಂಗವೇ ಗೌರವಿಸುವ ವ್ಯಕ್ತಿತ್ವ ದಿ. ಡಾ.ರಾಜಕುಮಾರ್‌ ಅವರದ್ದು. ತಮ್ಮ ಅತ್ಯುತ್ತಮ ನಟನೆ ಮತ್ತು ನಡವಳಿಕೆಯಿಂದಾಗಿ ಜನಮನದಲ್ಲಿ ಹಾಸುಹೊಕ್ಕಾಗಿದ್ದಾರೆ. ಇಂಥ ನಟನಿಗೆ ಭಾರತ ರತ್ನ ಕೊಟ್ಟರೆ ಪ್ರತಿಭೆಗೆ ಸಂದ ತಕ್ಕ ಪುರಸ್ಕಾರ ಎನ್ನಬಹುದು. ಹಾಗೇನೆ ಆ ಪ್ರಶಸ್ತಿಗೂ ಒಂದು ಗೌರವ ಎನ್ನುವುದು ಚಂದ್ರಶೇಖರ್‌ ಅವರ ಅಭಿಪ್ರಾಯ.

Follow us on

Related Stories

Most Read Stories

Click on your DTH Provider to Add TV9 Kannada