ರಾಜಧಾನಿಯಲ್ಲಿ 50 ಸಾವಿರದತ್ತ ಕೊರೊನಾ ಹೆಜ್ಜೆ! ಸಾವಿರದತ್ತ ಸಾವಿನ ಸಂಖ್ಯೆ
ಬೆಂಗಳೂರು: ರಾಜಧಾನಿಯನ್ನೇ ಟಾರ್ಗೆಟ್ ಮಾಡಿರೋ ಕೊರೊನಾ, ನಿತ್ಯ ಎರಡು ಸಾವಿರಕ್ಕೂ ಹೆಚ್ಚು ಸೋಂಕಿತರನ್ನು ಕೊಟ್ಟು ಮುನ್ನುಗ್ಗುತ್ತಿದೆ. ಸೋಂಕಿಗೆ ಬಲಿಯಾದವರಲ್ಲಿ ಬೆಂಗಳೂರಿಗರೇ ಹೆಚ್ಚಿದ್ದು, ಎಲ್ಲರ ನಿದ್ದೆಗೆಡಿಸಿದೆ. ಅದರಲ್ಲೂ ಇನ್ನೆರಡ್ಮೂರು ದಿನ ನಗರದಲ್ಲಿ ಸೋಂಕಿತರ ಸಂಖ್ಯೆ ಅರ್ಥ ಶತಕ ಆಗಲಿದೆ. ಸಾವಿರದತ್ತ ಸಾವಿನ ಸಂಖ್ಯೆ.. ಐವತ್ತು ಸಾವಿರದತ್ತ ಸೋಂಕಿತರ ಸಂಖ್ಯೆ.. ನಿತ್ಯವೂ ಎರಡು ಸಾವಿರದ ನಂಬರ್‌ಅನ್ನೇ ಗಟ್ಟಿಮಾಡಿಕೊಂಡಿರೋ ಕೊರೊನಾ ಬೆಂಗಳೂರನ್ನೇ ಥರಥರ ನಡುಗಿಸಿಬಿಟ್ಟಿದೆ. ಸೋಂಕಿನ ಈ ಸರಣಿ ಏಟಿನಿಂದಾಗಿ ಬೆಂಗಳೂರಿನ ಯಾವೊಂದು ಆಸ್ಪತ್ರೆಯೂ ಖಾಲಿ ಉಳಿದಿಲ್ಲ. ನಿನ್ನ ಕೂಡಾ ಬೆಂಗಳೂರಿಗೆ […]
ಬೆಂಗಳೂರು: ರಾಜಧಾನಿಯನ್ನೇ ಟಾರ್ಗೆಟ್ ಮಾಡಿರೋ ಕೊರೊನಾ, ನಿತ್ಯ ಎರಡು ಸಾವಿರಕ್ಕೂ ಹೆಚ್ಚು ಸೋಂಕಿತರನ್ನು ಕೊಟ್ಟು ಮುನ್ನುಗ್ಗುತ್ತಿದೆ. ಸೋಂಕಿಗೆ ಬಲಿಯಾದವರಲ್ಲಿ ಬೆಂಗಳೂರಿಗರೇ ಹೆಚ್ಚಿದ್ದು, ಎಲ್ಲರ ನಿದ್ದೆಗೆಡಿಸಿದೆ. ಅದರಲ್ಲೂ ಇನ್ನೆರಡ್ಮೂರು ದಿನ ನಗರದಲ್ಲಿ ಸೋಂಕಿತರ ಸಂಖ್ಯೆ ಅರ್ಥ ಶತಕ ಆಗಲಿದೆ.
ಸಾವಿರದತ್ತ ಸಾವಿನ ಸಂಖ್ಯೆ.. ಐವತ್ತು ಸಾವಿರದತ್ತ ಸೋಂಕಿತರ ಸಂಖ್ಯೆ.. ನಿತ್ಯವೂ ಎರಡು ಸಾವಿರದ ನಂಬರ್‌ಅನ್ನೇ ಗಟ್ಟಿಮಾಡಿಕೊಂಡಿರೋ ಕೊರೊನಾ ಬೆಂಗಳೂರನ್ನೇ ಥರಥರ ನಡುಗಿಸಿಬಿಟ್ಟಿದೆ. ಸೋಂಕಿನ ಈ ಸರಣಿ ಏಟಿನಿಂದಾಗಿ ಬೆಂಗಳೂರಿನ ಯಾವೊಂದು ಆಸ್ಪತ್ರೆಯೂ ಖಾಲಿ ಉಳಿದಿಲ್ಲ. ನಿನ್ನ ಕೂಡಾ ಬೆಂಗಳೂರಿಗೆ ಬಿಗ್ ಶಾಕ್ ಕೊಟ್ಟಿದೆ.
ರಾಜಧಾನಿಯಲ್ಲೇ ಇದ್ದಾರೆ 43 ಸಾವಿರ ಸೋಂಕಿತರು! ಬೆಂಗಳೂರಿನಲ್ಲಿ ಶರವೇಗದಲ್ಲಿ ಓಡ್ತಿರೋ ಕೊರೊನಾ ನಿನ್ನೆ ಕೂಡಾ 2 ಸಾವಿರದ ಸಂಖ್ಯೆಯಿಂದಲೇ ದಾಳಿ ಮಾಡಿದೆ. ರಾಜಧಾನಿಯ ಗಲ್ಲಿಗಲ್ಲಿಯನ್ನೂ ಹೊಕ್ಕು 2036 ಜನರನ್ನ ಸೋಂಕಿತರನ್ನಾಗಿ ಮಾಡಿದೆ. ಸೋಂಕಿನ ಈ ಏಟಿನಿಂದಲೇ ಸಿಲಿಕಾನ್ ಸಿಟಿಯಲ್ಲಿ ಸೋಂಕಿತರ ಸಂಖ್ಯೆ ಬರೋಬ್ಬರಿ 43,503 ಕ್ಕೆ ಏರಿಕೆಯಾಗಿದೆ.
ಸಿಲಿಕಾನ್ ಸಿಟಿಯಲ್ಲಿ ನಿನ್ನೆ 29 ಬಲಿ ಪಡೆದ ಸೋಂಕು! ಇನ್ನು ರಾಜ್ಯದಲ್ಲಿ ನಿನ್ನೆ 72 ಜನ ಕೊರೊನಾಗೆ ಬಲಿಯಾಗಿದ್ರೆ, ಬೆಂಗಳೂರಿನಲ್ಲೇ 29 ಜನ ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ನಗರದಲ್ಲೇ ಸೋಂಕಿತರ ಸಾವಿನ ಸಂಖ್ಯೆ 862 ಕ್ಕೆ ಏರಿಕೆಯಾಗಿದೆ.
ಬೆಂಗಳೂರು ಕೊರೊನಾ ಡೈರಿ! ಬೆಂಗಳೂರಿನಲ್ಲಿ ನಿನ್ನೆ 2,036 ಜನರಿಗೆ ಸೋಂಕು ತಗುಲಿದೆ. ಹಾಗೇ ನಗರದಲ್ಲಿ 686 ಸೋಂಕಿತರು ಗುಣಮುಖರಾಗಿ ಮನೆ ಸೇರಿದ್ದಾರೆ. ಇದುವರೆಗೆ 10 ಸಾವಿರಕ್ಕೂ ಹೆಚ್ಚು ಸೋಂಕಿತರು ಡಿಸ್ಚಾರ್ಜ್ ಆಗಿದ್ದು, 31,882 ಸೋಂಕಿತರು ಆಸ್ಪತ್ರೆಯಲ್ಲಿ, ಕೊವಿಡ್ ಕೇರ್ ಸೆಂಟರ್‌ನಲ್ಲಿ, ಹೋಂ ಐಸೋಲೇಷನ್‌ನಲ್ಲಿ ಟ್ರೀಟ್‌ಮೆಂಟ್ ಪಡೆಯುತ್ತಿದ್ದಾರೆ. ಇನ್ನು ರಾಜ್ಯದಲ್ಲಿ ಬರೋಬ್ಬರಿ 611 ಸೋಂಕಿತರ ಸ್ಥಿತಿ ಗಂಭೀರವಾಗಿದ್ದು, ಇವೆರೆಲ್ಲಾ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈರಿ ಅರ್ಧಕ್ಕಿಂತಲೂ ಹೆಚ್ಚು ಸೋಂಕಿತರು ಬೆಂಗಳೂರಿನವರೇ ಆಗಿದ್ದಾರೆ.
ರಾಜಧಾನಿಯಲ್ಲಿ 50 ಸಾವಿರದತ್ತ ಕೊರೊನಾ ಹೆಜ್ಜೆ! ಇನ್ನು ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1 ಲಕ್ಷದತ್ತ ಸಾಗಿದ್ರೆ, ಇದರಲ್ಲಿ ಅರ್ಧದಷ್ಟು ಜನ ಬೆಂಗಳೂರಿನವರೇ ಇದ್ದಾರೆ. ಈಗ ರಾಜಧಾನಿಯಲ್ಲಿ 43,503 ಜನ ಸೋಂಕಿತರಿದ್ದು, ಇನ್ನು ಎರಡ್ಮೂರು ದಿನಗಳಲ್ಲಿ ಈ ಸಂಖ್ಯೆ 50 ಸಾವಿರದ ಗಡಿದಾಟಲಿದೆ.
ಒಟ್ನಲ್ಲಿ ರಾಜಧಾನಿಯಲ್ಲಿ ನಿತ್ಯ ಎರಡು ಸಾವಿರ ಜನರನ್ನ ಸೋಂಕಿತರನ್ನಾಗಿ ಮಾಡ್ತಿರೋ ಕೊರೊನಾ, ನಿನ್ನೆ ಕೂಡಾ ಅಂಥಾ ಹೊಡೆತವನ್ನೇ ಕೊಟ್ಟಿದೆ. ಇದೇ ನಂಬರ್ ಇನ್ನೂ ಮೂರು ದಿನ ಬಂದ್ರೆ ಸಿಲಿಕಾನ್ ಸಿಟಿಯಲ್ಲಿ ಸೋಂಕಿತರ ಸಂಖ್ಯೆ 50 ಸಾವಿರ ದಾಟಲಿದೆ.
Published On - 6:51 am, Sun, 26 July 20