ಚಿಕ್ಕಮಗಳೂರು : ಜಮೀನು ವಿಚಾರವಾಗಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿರೋ ಘಟನೆ ಚಿಕ್ಕಮಗಳೂರು ತಾಲೂಕಿನ ಕರಡಿಹಳ್ಳಿ ಕಾವಲ್ ಗ್ರಾಮದಲ್ಲಿ ನಡೆದಿದೆ. ಎರಡು ಗುಂಪುಗಳು ಜಮೀನು ತಮಗೆ ಸೇರಿದ್ದು ಎಂದು ವಾದ ಮಾಡುವಾಗ ಮಾತಿಗೆ ಮಾತು ಬೆಳೆದು ಎರಡು ಗುಂಪಿನವರು ಹೆಲ್ಮೆಟ್, ದೊಣ್ಣೆಗಳಿಂದ ಪುರುಷರು ಹಾಗೂ ಮಹಿಳೆಯರು ಪರಸ್ಪರ ಹೊಡೆದಾಡಿದ್ದಾರೆ.
ಈ ಜಮೀನನ್ನ 1953ನೇ ಇಸವಿಯಲ್ಲಿ ನಾಗಭೂಷಣಮ್ಮ ಎಂಬುವರಿಂದ ರಾಜ್‍ದೀಪ್ ಎಂಬುವರು ಖರೀದಿ ಮಾಡಿದ್ದರು ಎಂದು ಹೇಳಲಾಗ್ತಿದೆ. ರಾಜ್‍ದೀಪ್ ಜಮೀನನ್ನು ಕ್ಲೀನ್ ಮಾಡಲು ಹೋದಾಗ ಮತ್ತೊಂದು ಗುಂಪು ಈ ಜಮೀನು ನಮ್ಮದ್ದು, ನಾವು 30 ವರ್ಷಗಳಿಂದ ಉಳುಮೆ ಮಾಡಿಕೊಂಡು ಬರುತ್ತಿದ್ದೇವೆ. ಫಾರಂ 50 ಹಾಗೂ 53ರಲ್ಲಿ ಅರ್ಜಿ ಹಾಕಿದ್ದೇವೆ ಎಂದಾಗ ಎರಡು ಗುಂಪಿನ ನಡುವೆ ಮಾತಿಗೆ ಮಾತು ಬೆಳೆದು ಇಬ್ಬರು ಹೊಡೆದಾಡಿದ್ದಾರೆ.
ಒಬ್ಬರು ನಾವು ಖರೀದಿ ಮಾಡಿದ್ದೇವೆ, ನಮ್ಮ ಹೆಸರಿಗೆ ಖಾತೆ ಇದೆ ಅಂತಿದ್ದಾರೆ. ಮತ್ತೊಬ್ಬರು ನಾವು 30 ವರ್ಷಗಳಿಂದ ಉಳುಮೆ ಮಾಡಿಕೊಂಡು ಬರುತ್ತಿದ್ದೇವೆ ಎನ್ನುತ್ತಿದ್ದಾರೆ. ಹೀಗೆ ವಾದ ಮಾಡುತ್ತಾ ಎರಡು ಕಡೆಯವರು ಮಾರಾಮಾರಿ ಹೊಡೆದಾಡಿದ್ದಾರೆ. ಆದರೆ, ಅಸಲಿಗೆ ಈ ಜಮೀನು ಯಾರಿಗೆ ಸೇರಬೇಕೆಂಬುದರ ಬಗ್ಗೆ ಸ್ಪಷ್ಟವಾದ ಮಾಹಿತಿ ಇಲ್ಲ. ಚಿಕ್ಕಮಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಸ್ಥಳಕ್ಕೆ ಗ್ರಾಮಾಂತರ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.