TV9 Exclusive: ಪಕ್ಷ, ಶಾಸಕರು ಇಚ್ಛಿಸಿದರೆ ಮತ್ತೆ CM ಆಗಲು ಸಿದ್ಧ -ಸಿದ್ದರಾಮಯ್ಯ
[lazy-load-videos-and-sticky-control id=”1je4duCSfCg”] ಮೊನ್ನೆಯಷ್ಟೇ ಪತ್ರಿಕಾಗೋಷ್ಠಿ ನಡೆಸಿ ಕೊವಿಡ್ ಉಪಕರಣಗಳ ಖರೀದಿಯಲ್ಲಿ ಭಾರೀ ಪ್ರಮಾಣದ ಅವ್ಯವಹಾರ ನಡೆದಿದೆಯೆಂದು ಆರೋಪಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು TV9 ಜತೆ ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಮತ್ತು ಇತರ ಕೆಲವು ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡಿದರು. TV9 ರಂಗನಾಥ್ ಭಾರದ್ವಾಜ್ ನಡೆಸಿದ ಮಾತುಕತೆಯ ಆಯ್ದಭಾಗ ಇಲ್ಲಿದೆ: ಅಂಕಿ-ಅಂಶಗಳು ನಮ್ಮಲ್ಲಿವೆ ಆರೋಪ ಮಾಡುವ ಮೊದಲು ಅಂಕಿ-ಅಂಶಗಳನ್ನು ಪರಿಶೀಲಿಸುವ ಪ್ರಯತ್ನವನ್ನು ಮಾಡಿಲ್ಲ ಎನ್ನುವ ಆಪಾದನೆಯನ್ನು ನಿರಾಕರಿಸಿದ ಸಿದ್ದರಾಮಯ್ಯನವರು, ಕೇವಲ ತೋರಿಕೆಗೆ ತಾನು ಮತ್ತು ಕಾಂಗ್ರೆಸ್ […]
[lazy-load-videos-and-sticky-control id=”1je4duCSfCg”]
ಮೊನ್ನೆಯಷ್ಟೇ ಪತ್ರಿಕಾಗೋಷ್ಠಿ ನಡೆಸಿ ಕೊವಿಡ್ ಉಪಕರಣಗಳ ಖರೀದಿಯಲ್ಲಿ ಭಾರೀ ಪ್ರಮಾಣದ ಅವ್ಯವಹಾರ ನಡೆದಿದೆಯೆಂದು ಆರೋಪಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು TV9 ಜತೆ ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಮತ್ತು ಇತರ ಕೆಲವು ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡಿದರು. TV9 ರಂಗನಾಥ್ ಭಾರದ್ವಾಜ್ ನಡೆಸಿದ ಮಾತುಕತೆಯ ಆಯ್ದಭಾಗ ಇಲ್ಲಿದೆ:
ಅಂಕಿ-ಅಂಶಗಳು ನಮ್ಮಲ್ಲಿವೆ ಆರೋಪ ಮಾಡುವ ಮೊದಲು ಅಂಕಿ-ಅಂಶಗಳನ್ನು ಪರಿಶೀಲಿಸುವ ಪ್ರಯತ್ನವನ್ನು ಮಾಡಿಲ್ಲ ಎನ್ನುವ ಆಪಾದನೆಯನ್ನು ನಿರಾಕರಿಸಿದ ಸಿದ್ದರಾಮಯ್ಯನವರು, ಕೇವಲ ತೋರಿಕೆಗೆ ತಾನು ಮತ್ತು ಕಾಂಗ್ರೆಸ್ ಪಕ್ಷ ಆರೋಪ ಮಾಡುತ್ತಿಲ್ಲ, ಎಲ್ಲಾ ಆಪಾದನೆಗಳಿಗೂ ದಾಖಲೆ ನೀಡಲಾಗಿದೆ ಎಂದರು. ಆರೋಪಗಳು ಸರ್ಕಾರ ನಡೆಸಿರುವ ಭ್ರಷ್ಟಾಚಾರಕ್ಕೆ ಸಂಬಂಧಿಸಿದ್ದು, ಆದರೆ ಸರ್ಕಾರ ಕೊರೊನಾ ನಿಯಂತ್ರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಅವರು ಹೇಳಿದರು. ಕೊವಿಡ್ ಉಪಕರಣಗಳ ಖರೀದಿಯಲ್ಲಿ ಶೇಕಡಾ 50 ರಷ್ಟು ಅವ್ಯವಹಾರ ನಡೆದಿರುವುದಕ್ಕೆ ತಮ್ಮಲ್ಲಿ ದಾಖಲೆ ಇದೆಯೆಂದು ಸಿದ್ದರಾಮಯ್ಯ ಹೇಳಿದರು.
ಇಬ್ಬರು ಹೇಳಿದ್ದು ರೂ 324 ಕೋಟಿ, ಐವರು ಹೇಳಿದ್ದು ರೂ 2118 ಕೋಟಿ!! ಕಾಂಗ್ರೆಸ್ ಮಾಡಿದ ಆರೋಪಗಳಿಗೆ ಮೊದಲು ಉತ್ತರಿಸಿದ ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ ಮತ್ತು ಆರೋಗ್ಯ ಸಚಿವ ಶ್ರೀರಾಮುಲು, ಉಪಕರಣಗಳ ಖರೀದಿಗೆ ಕೇವಲ 324 ಕೋಟಿ ಖರ್ಚು ಮಾಡಲಾಗಿದೆ ಎಂದಿದ್ದರು, ಆದರೆ ಮೊನ್ನೆ, ಐವರು ಸಚಿವರು ಸುದ್ದಿಗೋಷ್ಠಿ ನಡೆಸಿ ರೂ 4,167 ಕೋಟಿ ಖರ್ಚು ಮಾಡಿದ್ದು ಎಂದರು. ಆಂದರೆ ಮೊದಲು ಹೇಳಿದ್ದು ಸುಳ್ಳು ತಾನೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ಮುಂದುವರೆದು ಹೇಳಿದ ಹಿರಿಯ ಕಾಂಗ್ರೆಸ್ ನಾಯಕರು ತಾವು ಮಾಡಿದ ಆರೋಪಗಳಿಗೆ 14 ದಾಖಲೆಗಳನ್ನು ಒದಗಿಸಲಾಗಿದೆ ಎಂದರು.
ಕಾರ್ಮಿಕ ಇಲಾಖೆಯಿಂದ ಭ್ರಷ್ಟಾಚಾರ ನಡೆದಿದ್ದು ಆಹಾರ ಮತ್ತು ದಿನಸಿ ಪೊಟ್ಟಣಗಳನ್ನು ತಡವಾಗಿ ವಿತರಿಸುವಲ್ಲಿ ಎಂದು ಹೇಳಿದ ಸಿದ್ದರಾಮಯ್ಯನವರು ಸರಿಯಾದ ಸಮಯಕ್ಕೆ ಅವುಗಗಳನ್ನು ವಿತರಿಸಿದ್ದರೆ ಕಾರ್ಮಿಕರು ತಮ್ಮ ಊರುಗಳಿಗೆ ವಾಪಸ್ಸು ಹೋಗುತ್ತಿರಲಿಲ್ಲವೆಂದರು. ಇಂದಿರಾ ಕ್ಯಾಂಟೀನ್ ಮೂಲಕ ಊಟ ನೀಡಿದ್ದರೆ ಸುಮಾರು 5 ಲಕ್ಷ ಕಾರ್ಮಿಕರು ರಾಜ್ಯದಲ್ಲೇ ಉಳಿದುಬಿಡುತ್ತಿದ್ದರು ಮತ್ತು ತಾನು ಮುಖ್ಯಮಂತ್ರಿಯಾಗಿದ್ದರೆ ಎಲ್ಲಾ ಕಾರ್ಮಿಕರಿಗೆ ತಲಾ ರೂ 10,000 ನೀಡುತ್ತಿದ್ದೆ ಎಂದರು.
ನನ್ನ ಪತ್ರಗಳಿಗೆ ಉತ್ತರಿಸಿಲ್ಲ! ಮಾಜಿ ಮುಖ್ಯಮಂತ್ರಿಯಾಗಿ ಸರ್ಕಾರಕ್ಕೆ ಸಲಹೆ ನೀಡಬಹುದಿತ್ತಲ್ಲ ಎಂಬ ಪ್ರಶ್ನೆಗೆ ಸಿದ್ದರಾಮಯ್ಯನವರು, ತನ್ನ ಹಲವಾರು ಪತ್ರಗಳಿಗೆ ಸರ್ಕಾರ ಉತ್ತರಿಸಿಲ್ಲ ಮತ್ತು ವಿರೋಧ ಪಕ್ಷದ ನಾಯಕನಾಗಿ ತನ್ನ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಿರುವುದಾಗಿ ಹೇಳಿದರು. ಕಾಂಗ್ರೆಸ್ ಪಕ್ಷದ ನಾಯಕರು ಪ್ರತಿಭಟನೆ ಮಾಡಲು ಬಸ್ ನಿಲ್ದಾಣಗಳಿಗೆ ಹೋಗಿರಲಿಲ್ಲ, ಆದರೆ ಕಾರ್ಮಿಕರಿಗೆ ಬಸ್ ಮತ್ತು ಟಿಕೆಟ್ ವ್ಯವಸ್ಥೆ ಮಾಡಲು ಹೋಗಿದ್ದು ಎಂದರು. ಸಹಾಯ ಧನವನ್ನು ವಿತರಣೆ ಮಾಡಲು ವಿಳಂಬಿಸಿದ ಸರ್ಕಾರದ ಕ್ರಮವನ್ನು ತರಾಟೆಗೆ ತೆಗೆದುಕೊಂಡು ಲಾಕ್ಡೌನ್ ಘೋಷಣೆಯಾದ ಕೂಡಲೆ ಹಣ ವಿತರಿಸಬೇಕಿತ್ತು ಎಂದರು.
ಪಿಪಿಇ ಕಿಟ್, ಮಾಸ್ಕ್, ವೆಂಟಿಲೇಟರ್ ಮತ್ತು ಉಳಿದೆಲ್ಲ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಸಿದ್ದರಾಮಯ್ಯ ಪುನರುಚ್ಛರಿಸಿದರು. ಸರ್ಕಾರ ನಡೆಸುವ ಎಲ್ಲಾ ವ್ಯವಹಾರಗಳು ಪಾರದರ್ಶಕ ಕಾಯ್ದೆಗೆ ಅನುಗುಣವಾಗಿ ನಡೆಯಬೇಕು. ಯಾಕೆಂದರೆ ಅದು ಖರ್ಚು ಮಾಡುವ ಹಣ ಜನರು ತೆರಿಗೆ ರೂಪದಲ್ಲಿ ಕೊಟ್ಟಿದ್ದು ಎಂದು ಪ್ರತಿಪಾದಿಸಿದರು. ತಪ್ಪು ಮಾಡಿದವರು ತಮ್ಮ ಪ್ರಮಾದಗಳನ್ನು ಮರೆ ಮಾಡುವುದಕ್ಕೆ ಸುಳ್ಳು ಹೇಳುತ್ತಾರೆ ಎಂದು ಸರ್ಕಾರವನ್ನು ಚುಚ್ಚಿದರು.
ಮುಖ್ಯಮಂತ್ರಿಯಾಗಿದ್ದರೆ ಸುಳ್ಳು ಹೇಳುತ್ತಿರಲಿಲ್ಲ! ಇಂಥ ಸಂಕಷ್ಟ ಸಮಯದಲ್ಲಿ ನೀವು ಮುಖ್ಯಮಂತ್ರಿಯಾಗಿದ್ದರೆ ಏನು ಮಾಡುತ್ತಿದ್ದಿರಿ ಎಂದು ಕೇಳಿದಾಗ ಸಿದ್ದರಾಮಯ್ಯನವರು, ಯಾವ ಕಾರಣಕ್ಕೂ ಸುಳ್ಳು ಹೇಳುತ್ತಿರಲಿಲ್ಲ ಅಂತ ಖಡಾಖಂಡಿತವಾಗಿ ಹೇಳಿದರು. ಕೇರಳದಲ್ಲಿ ಮೊದಲ ಕೊವಿಡ್-19 ಪ್ರಕರಣ ಬೆಳಕಿಗೆ ಬಂದಾಗ ಮತ್ತು ಕಲಬುರಗಿಯಲ್ಲಿ ಮಾರ್ಚ್ 19ರಂದು ಮೊದಲ ಸಾವು ದಾಖಲಾದಾಗ ಭಾರತದಲ್ಲಿ ಕೇವಲ 564 ಪಾಸಿಟಿವ್ ಪ್ರಕರಣಗಳಿದ್ದವು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು, ಕೇವಲ 20 ದಿನಗಳಲ್ಲಿ ಕೊರೊನಾವನ್ನು ಸೋಲಿಸಿಬಿಡುತ್ತೇನೆ ಅಂತ ಜಾಗಟೆ ಬಾರಿಸಲು, ಚಪ್ಪಾಳೆ ತಟ್ಟಲು ಮತ್ತು ದೀಪ ಆರಿಸಲು ಹೇಳಿದರು.
ಆದರೆ ಪರಿಸ್ಥಿತಿ ಈಗ ಏನಾಗಿದೆ? ನಮ್ಮ ದೇಶದಲ್ಲಿ 13 ಲಕ್ಷಕ್ಕೂ ಹೆಚ್ಚು ಸೋಂಕಿತರಿದ್ದಾರೆ ಎಂದು ಸಿದ್ದರಾಮಯ್ಯ ಕುಹುಕವಾಡಿದರು. ತಙ್ಞರು, ಜುಲೈ ಮತ್ತು ಆಗಸ್ಟ್ ತಿಂಗಳುಗಳಲ್ಲಿ ಸೋಂಕಿತರ ಸಂಖ್ಯೆ ಉಲ್ಬಣಗೊಳ್ಳುತ್ತದೆ ಎಂದು ಎಚ್ಚರಿಸಿದ್ದರೂ ಕೇಂದ್ರ ಸರ್ಕಾರ ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ ಎಂದು ಆಪಾದಿಸಿದರು.
ಕಾಂಗ್ರೆಸ್ ಪಕ್ಷದ ಆರೋಗ್ಯ ಹಸ್ತ ಕಾರ್ಯಕ್ರಮ ಕೊವಿಡ್ ವಿರುದ್ಧ ಹೋರಾಡಲು ತಮ್ಮ ಪಕ್ಷ ಆರೋಗ್ಯ ಹಸ್ತ ಕಾರ್ಯಕ್ರಮ ರೂಪಿಸಿದ್ದು ಇದಕ್ಕಾಗಿ ರೂ 100 ಕೋಟಿ ಮೀಸಲಿಡಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು. ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಭವಿಷ್ಯ ಉಜ್ಜಲವಾಗಿದೆ, ತಮ್ಮ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನಡುವೆ ಯಾವುದೇ ಸ್ಪರ್ಧೆ ಇಲ್ಲ, ಪಕ್ಷ ಮತ್ತು ಶಾಸಕರು ಇಚ್ಛಿಸಿದರೆ ತಾನು ಪುನಃ ಮುಖ್ಯಮಂತ್ರಿಯಾಗಲು ತಯಾರಿರುವುದಾಗಿ ಸಿದ್ದರಾಮಯ್ಯ ಹೇಳಿದರು.
Published On - 10:38 pm, Sat, 25 July 20