Spinal Muscular Atrophy | ಕಂದನ ಉಳಿಸು ಕರ್ನಾಟಕ: ಮಗುವಿನ ಚಿಕಿತ್ಸೆಗೆ ನೆರವಾಗುವಂತೆ ಪ್ರಧಾನಿ ಮೋದಿಗೆ ಪತ್ರ ಬರೆದ ರಾಜ್ಯಸಭಾ ಸದಸ್ಯ ಚಂದ್ರಶೇಖರ್..!

|

Updated on: Feb 13, 2021 | 9:30 AM

Spinal Muscular Atrophy: ಜಿನಿಶ್​ಗೆ ವಿಶೇಷವಾದ ಜೆನಿಟಿಕ್ ಖಾಯಿಲೆ‌ ಇದೆ. ಮಗು ಜನೀಶ್ ಚಿಕಿತ್ಸೆಗಾಗಿ 16 ಕೋಟಿ ರೂ. ಅಗತ್ಯವಾಗಿರುವ ಹಿನ್ನೆಲೆಯಿಂದಾಗಿ ಪ್ರಧಾನಿಗೆ ಪತ್ರ ಬರೆದಿರುವ ರಾಜ್ಯಸಭಾ ಸದಸ್ಯ ಚಂದ್ರಶೇಖರ್, ಅಗತ್ಯ ಹಣ ಮಂಜೂರು ಮಾಡಿ ಮಗುವನ್ನ ಉಳಿಸಲು ಮನವಿ ಮಾಡಿದ್ದಾರೆ.

Spinal Muscular Atrophy | ಕಂದನ ಉಳಿಸು ಕರ್ನಾಟಕ: ಮಗುವಿನ ಚಿಕಿತ್ಸೆಗೆ ನೆರವಾಗುವಂತೆ ಪ್ರಧಾನಿ ಮೋದಿಗೆ ಪತ್ರ ಬರೆದ ರಾಜ್ಯಸಭಾ ಸದಸ್ಯ ಚಂದ್ರಶೇಖರ್..!
ರಾಜ್ಯಸಭಾ ಸದಸ್ಯ ಚಂದ್ರಶೇಖರ್, ಮಗು ಜನೀಶ್
Follow us on

ಬೆಂಗಳೂರು: ಟಿವಿ9 ಕನ್ನಡ ವಾಹಿನಿ ನಿರಂತರವಾಗಿ ಪ್ರಸಾರ ಮಾಡಿದ ‘ಕಂದನ ಉಳಿಸು ಕರ್ನಾಟಕ’ ಅಭಿಯಾನಕ್ಕೆ ಅತ್ಯುತ್ತಮ ಸ್ಪಂದನೆ ದೊರೆಯುತ್ತಿದೆ. 11 ತಿಂಗಳ ಪುಟ್ಟ ಮಗುವನ್ನು ಕಾಡುತ್ತಿರುವ ಸ್ಪೈನಲ್ ಮಸ್ಕ್ಯೂಲರ್ ಆಟ್ರೋಪಿ (Spinal muscular atrophy) ಸಮಸ್ಯೆಯನ್ನು ಬಗೆಹರಿಸಲು ₹16 ಕೋಟಿ ಮೊತ್ತದ ಇಂಜೆಕ್ಷನ್​ ನೀಡಬೇಕಿದ್ದು, ಈ ದುಬಾರಿ ಚುಚ್ಚುಮದ್ದನ್ನು ಅಮೆರಿಕಾದಿಂದ ಆಮದು ಮಾಡಿಕೊಳ್ಳಬೇಕಿದೆ. ಹೀಗಾಗಿ ಮಗುವಿನ ಚಿಕಿತ್ಸೆಗೆ ನೆರವಾಗುವಂತೆ ಪ್ರಧಾನಿ ಮೋದಿಗೆ ರಾಜ್ಯಸಭಾ ಸದಸ್ಯ ಜಿ. ಸಿ ಚಂದ್ರಶೇಖರ್ ಪತ್ರ ಬರೆದಿದ್ದಾರೆ.

ಪ್ರಧಾನಿಗೆ ಪತ್ರ ಬರೆದ ರಾಜ್ಯಸಭಾ ಸದಸ್ಯ ಚಂದ್ರಶೇಖರ್..
ಜಿನಿಶ್​ಗೆ ವಿಶೇಷವಾದ ಜೆನಿಟಿಕ್ ಖಾಯಿಲೆ‌ ಇದೆ. ಮಗು ಜನೀಶ್ ಚಿಕಿತ್ಸೆಗಾಗಿ 16 ಕೋಟಿ ರೂ. ಅಗತ್ಯವಾಗಿರುವ ಹಿನ್ನೆಲೆಯಿಂದಾಗಿ ಪ್ರಧಾನಿಗೆ ಪತ್ರ ಬರೆದಿರುವ ರಾಜ್ಯಸಭಾ ಸದಸ್ಯ ಚಂದ್ರಶೇಖರ್, ಅಗತ್ಯ ಹಣ ಮಂಜೂರು ಮಾಡಿ ಮಗುವನ್ನ ಉಳಿಸಲು ಮನವಿ ಮಾಡಿದ್ದಾರೆ. ಮಗುವಿಗೆ ಬೇಕಾಗಿರುವ 16 ಕೋಟಿ ಮೌಲ್ಯದ ಔಷಧವನ್ನು ವಿದೇಶದಿಂದಲೇ ಆಮದು ಮಾಡಿಕೊಳ್ಳಬೇಕು. ಹೀಗಾಗಿ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ಆರ್ಥಿಕ ಸಹಾಯ ನೀಡುವಂತೆ ಮನವಿ ಮಾಡಿರುವುದಲ್ಲದೆ ಔಷಧ ಮೇಲಿನ ಎಲ್ಲಾ ತೆರಿಗೆಗಳನ್ನ ಮನ್ನ ಮಾಡುವಂತೆ ಮನವಿ ಮಾಡಿದ್ದಾರೆ. ಹಾಗೆಯೇ ಈ ವಿಚಾರದ ಬಗ್ಗೆ ಆರ್ಥಿಕ ಸಚಿವ ನಿರ್ಮಲಾ‌ ಸೀತಾರಾಮನ್​ ಅವರಿಗೂ, ಜಿ ಸಿ ಚಂದ್ರಶೇಖರ್ ಪ್ರತಿ ರವಾನಿಸಿದ್ದಾರೆ.

ಸಂಜೀವಿನಿ ನಗರದ ನಿವಾಸಿಗಳಾಗಿರುವ ನವೀನ್​ಕುಮಾರ್, ಜ್ಯೋತಿ ದಂಪತಿ ಪುತ್ರ ಜನೀಶ್​ಗೆ ಸದ್ಯ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಗುವಿನ ವಂಶವಾಹಿಯಲ್ಲಿಯೇ (ಜೀನ್) ತೊಂದರೆ ಕಾಣಿಸಿಕೊಂಡಿದ್ದು, ಸ್ಪೈನಲ್ ಮಸ್ಕ್ಯೂಲರ್ ಆಟ್ರೋಪಿ ಅಂದರೆ ಬೆನ್ನು ಮೂಳೆಯ ಸ್ನಾಯು ಕ್ಷೀಣತೆ ಸಮಸ್ಯೆ ಉಂಟಾಗಿದೆ. ಚಿಕಿತ್ಸೆಗೆ ಸಹಾಯ ಮಾಡಲಿಚ್ಛಿಸುವವರು ಮಗುವಿನ ಪೋಷಕರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಬಹುದು.

ಬ್ಯಾಂಕ್ ಖಾತೆ ವಿವರ:
Account Name: JYOTHI
A/c Number: 374201000000285
IFSC: IOBA0003742
SAHAKARANAGARA, BENGALURU
ಗೂಗಲ್​ ಪೇ ಅಥವಾ ಫೋನ್​ ಪೇ: 96117 89719

https://tv9kannada.com/karnataka/bengaluru/eleven-month-baby-from-bengaluru-suffering-from-spinal-muscular-atrophy-parents-need-help-183564.html