AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Spinal Muscular Atrophy | ಕಂದನ ಉಳಿಸು ಕರ್ನಾಟಕ: ನಟ ಸುದೀಪ್​, ಪ್ರೇಮ್​ ಸೇರಿದಂತೆ ನೂರಾರು ಗಣ್ಯರಿಂದ ಸಹಾಯ

Spinal muscular atrophy: ಲಕ್ಷಾಂತರ ಮಕ್ಕಳಲ್ಲಿ ಒಬ್ಬರಿಗೆ ಕಾಡುವ ಈ ಸಮಸ್ಯೆಗೆ ತುತ್ತಾಗಿರುವ ಜನೀಶ್ ಎಂಬ ಪುಟ್ಟ ಮಗುವನ್ನು ನೋಡಿ ಕನ್ನಡಿಗರ ಕಣ್ಣಾಲಿ ಒದ್ದೆಯಾಗಿದ್ದು, ಸಹೃದಯರು ಸಹಾಯ ಹಸ್ತ ಚಾಚುತ್ತಿದ್ದಾರೆ.

Spinal Muscular Atrophy | ಕಂದನ ಉಳಿಸು ಕರ್ನಾಟಕ: ನಟ ಸುದೀಪ್​, ಪ್ರೇಮ್​ ಸೇರಿದಂತೆ ನೂರಾರು ಗಣ್ಯರಿಂದ ಸಹಾಯ
ಕಂದನ ಉಳಿಸು ಕರ್ನಾಟಕ
Skanda
| Edited By: |

Updated on:Feb 05, 2021 | 4:29 PM

Share

ಇಂದು ಮುಂಜಾನೆಯಿಂದ ಟಿವಿ9 ಕನ್ನಡ ವಾಹಿನಿ ನಿರಂತರವಾಗಿ ಪ್ರಸಾರ ಮಾಡಿದ ‘ಕಂದನ ಉಳಿಸು ಕರ್ನಾಟಕ’ ಅಭಿಯಾನಕ್ಕೆ ಅತ್ಯುತ್ತಮ ಸ್ಪಂದನೆ ದೊರೆಯುತ್ತಿದೆ. 11 ತಿಂಗಳ ಪುಟ್ಟ ಮಗುವನ್ನು ಕಾಡುತ್ತಿರುವ ಸ್ಪೈನಲ್ ಮಸ್ಕ್ಯೂಲರ್ ಆಟ್ರೋಪಿ (Spinal muscular atrophy) ಸಮಸ್ಯೆಯನ್ನು ಬಗೆಹರಿಸಲು ₹16 ಕೋಟಿ ಮೊತ್ತದ ಇಂಜೆಕ್ಷನ್​ ನೀಡಬೇಕಿದ್ದು, ಈ ದುಬಾರಿ ಚುಚ್ಚುಮದ್ದನ್ನು ಅಮೆರಿಕಾದಿಂದ ಆಮದು ಮಾಡಿಕೊಳ್ಳಬೇಕಿದೆ.

ಲಕ್ಷಾಂತರ ಮಕ್ಕಳಲ್ಲಿ ಒಬ್ಬರಿಗೆ ಕಾಡುವ ಈ ಸಮಸ್ಯೆಗೆ ತುತ್ತಾಗಿರುವ ಜನೀಶ್ ಎಂಬ ಪುಟ್ಟ ಮಗುವನ್ನು ನೋಡಿ ಕನ್ನಡಿಗರ ಕಣ್ಣಾಲಿ ಒದ್ದೆಯಾಗಿದ್ದು, ಸಹೃದಯರು ಸಹಾಯ ಹಸ್ತ ಚಾಚುತ್ತಿದ್ದಾರೆ. ನಟ ಕಿಚ್ಚ ಸುದೀಪ್​, ಪ್ರೇಮ್, ಶಾಸಕ ಮುನಿರತ್ನ, ಟಿ.ಎ.ಶರವಣ, ಮೊಯ್ದೀನ್​ ಬಾವಾ, ಪದ್ಮನಾಭ ರೆಡ್ಡಿ, ಸಾ.ರಾ,ಮಹೇಶ್, ನಿರ್ಮಾಪಕ ಉಮಾಪತಿ, ಗಾಯತ್ರಿ ಪ್ರಕಾಶ್, ಅಮೃತ್​ ರಾಜ್, ಆಸೀಫ್, ನರೋನಾ ಸೇರಿದಂತೆ ನೂರಾರು ಪ್ರಮುಖರು ದೊಡ್ಡ ಮೊತ್ತದ ಸಹಾಯ ಮಾಡಲು ಮುಂದೆ ಬಂದಿದ್ದಾರೆ. ಇನ್ನೊಂದೆಡೆ ಸರ್ಕಾರದಿಂದಲೂ ನೆರವು ನೀಡುವ ಭರವಸೆ ವ್ಯಕ್ತವಾಗಿದೆ. ಹೆಚ್ಚಿನವರು ತಮ್ಮ ಹೆಸರು ಹೇಳಲಿಚ್ಛಿಸದೆ ನೇರವಾಗಿ ಮಗುವಿನ ಪೋಷಕರ ಬ್ಯಾಂಕ್ ಅಕೌಂಟ್​ಗೆ ಹಣ ಹಾಕುವುದಾಗಿ ಹೇಳುತ್ತಿದ್ದಾರೆ.

ಸಹಾಯ ಮಾಡುವಂತೆ ಅಭಿಮಾನಿ ಬಳಗಕ್ಕೆ ಮನವಿ ಮಾಡಿದ ಸುದೀಪ್​ ಪ್ರಸ್ತುತ ದುಬೈನಲ್ಲಿರುವ ಸುದೀಪ್​ ಕೂಡಾ ನಿರ್ಮಾಪಕ ಜಾಕ್​ ಮಂಜು ಅವರ ಮೂಲಕ ₹1 ಲಕ್ಷ ನೀಡುವುದಾಗಿ ಹೇಳಿದ್ದು, ತಮ್ಮ ಅಭಿಮಾನಿಗಳಲ್ಲಿ ಸಹಾಯ ಮಾಡಲು ವಿನಂತಿಸಿಕೊಂಡಿದ್ದಾರೆ. ಸುದೀಪ್​ ಅಭಿಮಾನಿ ಬಳಗದವರಿಗೆ ಟಿವಿ9 ಮೂಲಕ ವಿನಂತಿ ಮಾಡಿಕೊಳ್ಳಲಾಗಿದ್ದು, ಪ್ರತಿಯೊಬ್ಬರೂ ಕೈಲಾದಷ್ಟು ಸಹಾಯ ಮಾಡಬೇಕೆಂದು ಕೋರಿದ್ದಾರೆ.

ಸಂಜೀವಿನಿ ನಗರದ ನಿವಾಸಿಗಳಾಗಿರುವ ನವೀನ್​ಕುಮಾರ್, ಜ್ಯೋತಿ ದಂಪತಿ ಪುತ್ರ ಜನೀಶ್​ಗೆ ಸದ್ಯ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಗುವಿನ ವಂಶವಾಹಿಯಲ್ಲಿಯೇ (ಜೀನ್) ತೊಂದರೆ ಕಾಣಿಸಿಕೊಂಡಿದ್ದು, ಸ್ಪೈನಲ್ ಮಸ್ಕ್ಯೂಲರ್ ಆಟ್ರೋಪಿ ಅಂದರೆ ಬೆನ್ನು ಮೂಳೆಯ ಸ್ನಾಯು ಕ್ಷೀಣತೆ ಸಮಸ್ಯೆ ಉಂಟಾಗಿದೆ. ಚಿಕಿತ್ಸೆಗೆ ಸಹಾಯ ಮಾಡಲಿಚ್ಛಿಸುವವರು ಮಗುವಿನ ಪೋಷಕರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಬಹುದು.

ಬ್ಯಾಂಕ್ ಖಾತೆ ವಿವರ: Account Name: JYOTHI A/c Number: 374201000000285 IFSC: IOBA0003742 SAHAKARANAGARA, BENGALURU

ಗೂಗಲ್​ ಪೇ ಅಥವಾ ಫೋನ್​ ಪೇ: 96117 89719

11 ತಿಂಗಳ ಕಂದನಿಗೆ ಇಡೀ ವಿಶ್ವವೇ ಬೆಚ್ಚುವಂತಾ ಸಮಸ್ಯೆ! ಮಗು ಬದುಕುಳಿಯಲು 16 ಕೋಟಿ ರೂ. ಬೇಕು..

Published On - 4:27 pm, Fri, 5 February 21

Follow Us
ದರೋಡೆಗೆ ಬಂದ ಕಳ್ಳರನ್ನೇ ಕೂಡಿಹಾಕಿದ ಜನರು!
ದರೋಡೆಗೆ ಬಂದ ಕಳ್ಳರನ್ನೇ ಕೂಡಿಹಾಕಿದ ಜನರು!
ಗಾಯಕಿ ಆಶಾ ಭೋಸ್ಲೆ ಕನ್ನಡದಲ್ಲಿ 4ನೇ ಗೀತೆ ಹಾಡಲು ಒಪ್ಪಿಕೊಂಡಿದ್ದು ಹೇಗೆ?
ಗಾಯಕಿ ಆಶಾ ಭೋಸ್ಲೆ ಕನ್ನಡದಲ್ಲಿ 4ನೇ ಗೀತೆ ಹಾಡಲು ಒಪ್ಪಿಕೊಂಡಿದ್ದು ಹೇಗೆ?
ಚೊಚ್ಚಲ ಪಂದ್ಯದಲ್ಲೇ ಮೂವರನ್ನು ಶೂನ್ಯಕ್ಕೆ ಔಟ್ ಮಾಡಿದ ಪ್ರಫುಲ್
ಚೊಚ್ಚಲ ಪಂದ್ಯದಲ್ಲೇ ಮೂವರನ್ನು ಶೂನ್ಯಕ್ಕೆ ಔಟ್ ಮಾಡಿದ ಪ್ರಫುಲ್
ಅತ್ಯಧಿಕ ಸೊನ್ನೆ.. ಅನಗತ್ಯ ದಾಖಲೆ ಬರೆದ ಅಭಿಷೇಕ್ ಶರ್ಮಾ
ಅತ್ಯಧಿಕ ಸೊನ್ನೆ.. ಅನಗತ್ಯ ದಾಖಲೆ ಬರೆದ ಅಭಿಷೇಕ್ ಶರ್ಮಾ
ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಠದಲ್ಲಿ ತಳ್ಳಾಟ, ನೂಕಾಟ: ಶ್ರೀಗಳಿಗೆ ಗಾಯ
ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಠದಲ್ಲಿ ತಳ್ಳಾಟ, ನೂಕಾಟ: ಶ್ರೀಗಳಿಗೆ ಗಾಯ
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್