ರಾಮನಗರ: ಚನ್ನಪಟ್ಟಣ ಬೊಂಬೆಗಳು ರಾಜ್ಯ, ದೇಶವಲ್ಲದೇ ವಿಶ್ವಮಟ್ಟದಲ್ಲೂ ಕೂಡ ಪ್ರಸಿದ್ದ ಪಡೆದಿವೆ. ಚಿಕ್ಕ ಚಿಕ್ಕ, ಪುಟಾಣಿ ಬೊಂಬೆಗಳು ಎಂತವರನ್ನು ಕೂಡ ತನ್ನತ್ತ ಸೆಳೆಯುತ್ತದೆ. ಆದ್ರೆ ಇದೀಗ ಲಾಕ್ಡೌನ್ನಿಂದಾಗಿ ಬೊಂಬೆ ತಯಾರಿಸುವವರು ಹಾಗೂ ಮಾರಾಟ ಮಾಡುವವರ ಬದುಕು ಬೀದಿಗೆ ಬಿದ್ದಿದೆ. ಬೊಂಬೆಗಳಿಗೆ ಬೇಡಿಕೆ ಇಲ್ಲದೇ, ಬದುಕು ಮೂರಾಬಟ್ಟೆಯಾಗಿದೆ.
ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಇಡೀ ದೇಶವನ್ನ ಲಾಕ್ಡೌನ್ ಮಾಡಲಾಗಿದೆ. ಇದೀಗ ಸ್ವಲ್ಪ ಮಟ್ಟಿನ ಸಡಲಿಕೆ ನೀಡಿದ್ರು ಕೂಡ, ಪ್ರವಾಸಿಗರ ಓಡಾಟವಿಲ್ಲ. ತಾವು ತಯಾರಿಸುವ ವಸ್ತುಗಳಿಗೆ ಬೇಡಿಕೆ ಇಲ್ಲದೇ, ಕೊಂಡು ಕೊಳ್ಳುವವವರು ಇಲ್ಲದೆ, ಸರಿಯಾದ ಬೆಲೆ ಸಿಗದೇ ಸಾಕಷ್ಟು ಅತಂತ್ರ ಸ್ಥಿತಿಗೆ ತಲುಪಿದ್ದಾರೆ. ಆ ಲಿಸ್ಟ್ಗೆ ಬೊಂಬೆ ತಯಾರಕರು ಹಾಗೂ ಮಾರಾಟಗಾರರು ಸಹಾ ಸೇರಿದ್ದಾರೆ.
ಚನ್ನಪಟ್ಟಣ ಬೊಂಬೆಗಳು ವಿಶ್ವವಿಖ್ಯಾತಿ:
ಹೌದು, ಬೊಂಬೆ ತಯಾರು ಮಾಡಿ ಅದರಲ್ಲಿ ಬಂದ ಹಣದಿಂದ ಬದುಕು ಸಾಗಿಸುತ್ತಿದ್ದ ಸಾವಿರಾರು ಕುಟುಂಬಗಳು ಇದೀಗ ಬೀದಿಗೆ ಬೀಳುವ ಪರಿಸ್ಥಿತಿ ಬಂದಿದೆ. ರಾಮನಗರ ಜಿಲ್ಲೆ ಚನ್ನಪಟ್ಟಣದ ಬೊಂಬೆಗಳು ಎಂದರೆ ರಾಜ್ಯ, ದೇಶ, ವಿದೇಶಗಳಲ್ಲೂ ಹೆಸರುವಾಸಿ. ಚಿಕ್ಕ ಚಿಕ್ಕ, ಪುಟಾಣಿ ಬೊಂಬೆಗಳು ಸಾಕಷ್ಟು ಜನರನ್ನ ತನ್ನತ್ತ ಆಕರ್ಷಣೆ ಮಾಡುತ್ತವೆ. ಹೀಗಾಗಿ ಚನ್ನಪಟ್ಟಣ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ನೂರಾರು ಬೊಂಬೆಗಳ ಮಾರಾಟ ಅಂಗಡಿಗಳು ಸಹಾ ಇವೆ.
ಹೆದ್ದಾರಿಯಲ್ಲಿ ಪ್ರಯಾಣಿಸುವ ಸಾವಿರಾರು ಜನರು ಬೊಂಬೆಗಳನ್ನ ಖರೀದಿಸಿ ಹೋಗುತ್ತಿದ್ದರು. ಆದ್ರೆ ಇದೀಗ ಲಾಕ್ಡೌನ್ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಖ್ಯೆ ಇಲ್ಲದಂತೆ ಆಗಿದೆ. ಹೀಗಾಗಿ ಅಂಗಡಿಗಳಲ್ಲಿ ಬೊಂಬೆಗಳನ್ನ ಕೇಳುವವರೇ ಇಲ್ಲದಂತೆ ಆಗಿದೆ. ಹೀಗಾಗಿ ಬೊಂಬೆ ಅಂಗಡಿಗಳ ಮಾಲೀಕರು ವ್ಯಾಪಾರವಿಲ್ಲದೇ ಪರದಾಡುತ್ತಿದ್ದಾರೆ. ಒಟ್ಟಾರೆ ಬೊಂಬೆ ಉದ್ಯಮವನ್ನೇ ನಂಬಿಕೊಂಡಿದ್ದ ಸಾವಿರಾರು ಕುಟುಂಬಗಳು ಬೀದಿಗೆ ಬೀಳುವ ಪರಿಸ್ಥಿತಿ ಉಂಟಾಗಿದೆ.
Published On - 5:20 pm, Sun, 24 May 20