ಮುಂದಿನ ವರ್ಷ ಆಲಿಯಾ ಭಟ್ ಜತೆ ಮದುವೆ, ಸುಳಿವು ನೀಡಿದ ರಣಬೀರ್ ಕಪೂರ್

ಬಾಲಿವುಡ್ ಭರ್ಜರಿ ಮದುವೆ ಊಟ ಸವಿಯಲು ಸಜ್ಜಾಗುವ ಸೂಚನೆ ದಟ್ಟವಾಗುತ್ತಿದೆ. ಬಹು ನಿರೀಕ್ಷಿತ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ 2021ರಲ್ಲಿ ಹಸೆಮಣೆ ಏರುವ ಸುಳಿವು ನೀಡಿದ್ದಾರೆ.

ಮುಂದಿನ ವರ್ಷ ಆಲಿಯಾ ಭಟ್ ಜತೆ  ಮದುವೆ, ಸುಳಿವು ನೀಡಿದ ರಣಬೀರ್ ಕಪೂರ್
ರಣ್​ಬೀರ್ ಕಪೂರ್ ಮತ್ತು ಆಲಿಯಾ ಭಟ್
Follow us
guruganesh bhat
|

Updated on: Dec 25, 2020 | 10:42 AM

ಮುಂಬೈ: ಬಾಲಿವುಡ್ ಭರ್ಜರಿ ಮದುವೆ ಊಟ ಸವಿಯಲು ಸಜ್ಜಾಗುವ ಸೂಚನೆ ದಟ್ಟವಾಗುತ್ತಿದೆ.  ಬಿ ಟೌನ್​ನ ಕ್ಯೂಟ್  ಜೋಡಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ 2021ರಲ್ಲಿ ಹಸೆಮಣೆ ಏರುವ ಸುಳಿವು ನೀಡಿದ್ದಾರೆ.

‘ನನ್ನ ಜೀವನದ ಬಹುಮುಖ್ಯ ಸಂಗತಿಯೊಂದರ ಮುಂದೆ ಸದ್ಯದಲ್ಲೇ ಟಿಕ್ ಮಾರ್ಕ್ ಮಾಡಲಿದ್ದೇನೆ’ ಎಂದು ರಣಬೀರ್ ಸೂಚ್ಯವಾಗಿ ಗುಟ್ಟು ಬಿಟ್ಟುಕೊಟ್ಟಿದ್ದಾರೆ.  ಕೊರೊನಾ ಸಾಂಕ್ರಾಮಿಕ ಇಲ್ಲದಿದ್ದರೆ ಇಷ್ಟೊತ್ತಿಗಾಗಲೇ ಅಧಿಕೃತ ಜೋಡಿಯಾಗಿರುತ್ತಿದ್ದೆವು. ಆದರೂ ಕೊರೊನಾ ನಮ್ಮ ಬಾಂಧವ್ಯಕ್ಕೆ ತೀರಾ ಧಕ್ಕೆಯನ್ನೇನೂ ಮಾಡಿಲ್ಲ. ಅತಿ ಶೀಘ್ರದಲ್ಲೇ ನಾವಿಬ್ಬರೂ ದಂಪತಿಗಳಾಗಲಿದ್ದೇವೆ ಎಂದು ಅವರು ರಾಜೀವ್ ಮಸಂದ್ ಅವರ ಜೊತೆಗಿನ ಸಂದರ್ಶನದಲ್ಲಿ  ಹೇಳಿದ್ದಾರೆ.

ಸಂದರ್ಶನದಲ್ಲಿ ಆಲಿಯಾರನ್ನು ತಮ್ಮ ‘ಗರ್ಲ್ ಫ್ರೆಂಡ್’ ಎಂದು ಸಂಬೋಧಿಸಿರುವ ಅವರು, ಆಕೆ ಮಹತ್ವಾಕಾಂಕ್ಷಿ. ಲಾಕ್ ಡೌನ್ ನಲ್ಲಿ ಗಿಟಾರ್ ಕ್ಲಾಸ್ ನಿಂದ ಹಿಡಿದು ಸ್ಕ್ರೀನ್ ಪ್ಲೇ ಬರವಣಿಗೆಯವರೆಗೂ ಆಲಿಯಾ ಆನ್ ಲೈನ್ ಕ್ಲಾಸ್ ಗೆ ಹಾಜರಾಗಿದ್ದಾಳೆ. ಅವಳ ಸಾಧನೆ ಮುಂದೆ ನನ್ನದು ಕಳಪೆ ಪ್ರದರ್ಶನ ಎಂದು ತುಂಟ ಉತ್ತರ ನೀಡಿದ್ದಾರೆ. ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಮದುವೆಯ ಶುಭಸುದ್ದಿ  ಟ್ವಿಟ್ಟರ್ ನಲ್ಲಿ  ಟ್ರೆಂಡ್ ಆಗಿದೆ. ಈ ಜೋಡಿ ಬ್ರಹ್ಮಾಸ್ತ್ರ ಸಿನಿಮಾದಲ್ಲಿ ಪರದೆಯ ಮೇಲೂ ಜೊತೆಯಾಗಲಿದ್ದಾರೆ.