‘ಭೂ ಕಾಯ್ದೆಗೆ ತಿದ್ದುಪಡಿ ತಂದಿದ್ದಕ್ಕೆ ಮೊದಲು ಕ್ಷಮೆಯಾಚಿಸಿ, ಇದು ನಿಮಗೆ ಅಗ್ನಿ ಪರೀಕ್ಷೆ!’

ಬೆಂಗಳೂರು: ನಗರದಲ್ಲಿ ಕರ್ನಾಟಕ ಬಂದ್​ನ ಕಾವು ಜೋರಾಗಿದ್ದರೆ ಇತ್ತ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಸಹ ಟ್ವಿಟರ್​ ಮುಖಾಂತರ ಸಿಎಂ BSY ವಿರುದ್ಧ ಕಿಡಿಕಾರಿದ್ದಾರೆ. ರೈತರ ಕರ್ನಾಟಕ ಬಂದ್‌ಗೆ ನಿಷೇಧ ಹೇರುವ ಬದಲಿಗೆ ರೈತ ಮತ್ತು ಕಾರ್ಮಿಕ ವಿರೋಧಿ ಮನಸ್ಥಿತಿಗೆ ನಿಷೇಧವನ್ನ ಹೇರಿ ಎಂದು ಸಿಎಂ BSYಗೆ ರಣದೀಪ್ ಸಿಂಗ್ ಸುರ್ಜೇವಾಲಾ ಮನವಿ ಮಾಡಿದ್ದಾರೆ. ರಾಜ್ಯವನ್ನೇ ಹರಾಜು ಹಾಕುವ ಭೂ ಸುಧಾರಣೆ ಕಾಯ್ದೆ, ತಿದ್ದುಪಡಿ ಮಾಡಿದ್ದಕ್ಕೆ ಜನರಲ್ಲಿ ಕ್ಷಮೆಯಾಚಿಸಿ ಹಿಂಪಡೆಯಿರಿ. APMC ಕಾಯ್ದೆಗೆ ಮಾಡಿರುವ ಕೆಟ್ಟ […]

‘ಭೂ ಕಾಯ್ದೆಗೆ ತಿದ್ದುಪಡಿ ತಂದಿದ್ದಕ್ಕೆ ಮೊದಲು ಕ್ಷಮೆಯಾಚಿಸಿ, ಇದು ನಿಮಗೆ ಅಗ್ನಿ ಪರೀಕ್ಷೆ!’
ರಣದೀಪ್ ಸುರ್ಜೇವಾಲಾ
Updated By: ಸಾಧು ಶ್ರೀನಾಥ್​

Updated on: Sep 28, 2020 | 11:11 AM

ಬೆಂಗಳೂರು: ನಗರದಲ್ಲಿ ಕರ್ನಾಟಕ ಬಂದ್​ನ ಕಾವು ಜೋರಾಗಿದ್ದರೆ ಇತ್ತ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಸಹ ಟ್ವಿಟರ್​ ಮುಖಾಂತರ ಸಿಎಂ BSY ವಿರುದ್ಧ ಕಿಡಿಕಾರಿದ್ದಾರೆ.

ರೈತರ ಕರ್ನಾಟಕ ಬಂದ್‌ಗೆ ನಿಷೇಧ ಹೇರುವ ಬದಲಿಗೆ ರೈತ ಮತ್ತು ಕಾರ್ಮಿಕ ವಿರೋಧಿ ಮನಸ್ಥಿತಿಗೆ ನಿಷೇಧವನ್ನ ಹೇರಿ ಎಂದು ಸಿಎಂ BSYಗೆ ರಣದೀಪ್ ಸಿಂಗ್ ಸುರ್ಜೇವಾಲಾ ಮನವಿ ಮಾಡಿದ್ದಾರೆ. ರಾಜ್ಯವನ್ನೇ ಹರಾಜು ಹಾಕುವ ಭೂ ಸುಧಾರಣೆ ಕಾಯ್ದೆ, ತಿದ್ದುಪಡಿ ಮಾಡಿದ್ದಕ್ಕೆ ಜನರಲ್ಲಿ ಕ್ಷಮೆಯಾಚಿಸಿ ಹಿಂಪಡೆಯಿರಿ. APMC ಕಾಯ್ದೆಗೆ ಮಾಡಿರುವ ಕೆಟ್ಟ ತಿದ್ದುಪಡಿ ರದ್ದುಮಾಡಿ ಎಂದು ಟ್ವೀಟ್ ಮೂಲಕ ರಣದೀಪ್ ಸುರ್ಜೇವಾಲಾ ಕೇಳಕೊಂಡಿದ್ದಾರೆ.

ಜೊತೆಗೆ, ಕೊವಿಡ್‌ನಿಂದ 8500ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಆದ್ರೂ ಸಿಎಂ, ಸಚಿವರಿಗೆ ನಿದ್ದೆ ಬರುವುದಾದರೂ ಹೇಗೆ? ಎಂದು ಟ್ವೀಟ್ ಮೂಲಕ ರಣದೀಪ್ ಸುರ್ಜೇವಾಲಾ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

Published On - 11:06 am, Mon, 28 September 20