ಗಲ್ಲಿ ಗಲ್ಲಿಯಲ್ಲೂ ಬಣ್ಣಗಳ ಮೆರುಗು: ವೆಂಕಟರಮಣ ರಥೋತ್ಸವದಲ್ಲಿ ಓಕುಳಿಯಾಟ!

ಮಂಗಳೂರು: ಅಲ್ಲಿ ಟೆನ್ಷನ್​ಗೆ ಜಾಗವಿಲ್ಲ. ಮಸ್ತಿಗಂತೂ ಬರವೇ ಇಲ್ಲ. ಜಾತ್ರೆಯಂತೆ ಜನ ಸೇರ್ತಾರೆ. ನಾವೆಲ್ಲಾ ಒಂದೇ ಅನ್ನೋ ಸಂದೇಶ ಸಾರ್ತಾರೆ. ಬಣ್ಣದೋಕುಳಿ ಆಡಿ ಇಡೀ ದಿನ ಖುಷಿಯ ಅಲೆಯಲ್ಲಿ ತೇಲ್ತಾರೆ. ಆದ್ರೆ, ಏನ್ ಮಾಡೋದು ನಾವೆಲ್ಲಾ ಆ ಚಾನ್ಸ್ ಮಿಸ್ ಮಾಡ್ಕೊಂಡ್ವಿ. ಬಟ್ ಅಲ್ಲಿನ ಹಬ್ಬದಾಟ ನೋಡಿ ಖುಷಿ ಪಡಬಹುದು. ಕೈಯಲ್ಲಿ ಬಣ್ಣ.. ಎದುರಲ್ಲಿ ಫ್ರೆಂಡ್ಸ್.. ಎಂಜಾಯ್ ಮೂಡ್.. ಕಿವಿಗೆ ಅಪ್ಪಳಿಸೋ ಮಸ್ತ್ ಮ್ಯೂಸಿಕ್.. ಇಷ್ಟೆಲ್ಲಾ ಒಂದೇ ಕಡೆ ಇದ್ಮೇಲೆ ಇವ್ರೆಲ್ಲಾ ಸುಮ್ಮನೆ ಇರ್ತಾರಾ.. ಚಾನ್ಸೇ ಇಲ್ಲ.. […]

ಗಲ್ಲಿ ಗಲ್ಲಿಯಲ್ಲೂ ಬಣ್ಣಗಳ ಮೆರುಗು: ವೆಂಕಟರಮಣ ರಥೋತ್ಸವದಲ್ಲಿ ಓಕುಳಿಯಾಟ!
sadhu srinath

|

Feb 02, 2020 | 9:51 PM

ಮಂಗಳೂರು: ಅಲ್ಲಿ ಟೆನ್ಷನ್​ಗೆ ಜಾಗವಿಲ್ಲ. ಮಸ್ತಿಗಂತೂ ಬರವೇ ಇಲ್ಲ. ಜಾತ್ರೆಯಂತೆ ಜನ ಸೇರ್ತಾರೆ. ನಾವೆಲ್ಲಾ ಒಂದೇ ಅನ್ನೋ ಸಂದೇಶ ಸಾರ್ತಾರೆ. ಬಣ್ಣದೋಕುಳಿ ಆಡಿ ಇಡೀ ದಿನ ಖುಷಿಯ ಅಲೆಯಲ್ಲಿ ತೇಲ್ತಾರೆ. ಆದ್ರೆ, ಏನ್ ಮಾಡೋದು ನಾವೆಲ್ಲಾ ಆ ಚಾನ್ಸ್ ಮಿಸ್ ಮಾಡ್ಕೊಂಡ್ವಿ. ಬಟ್ ಅಲ್ಲಿನ ಹಬ್ಬದಾಟ ನೋಡಿ ಖುಷಿ ಪಡಬಹುದು.

ಕೈಯಲ್ಲಿ ಬಣ್ಣ.. ಎದುರಲ್ಲಿ ಫ್ರೆಂಡ್ಸ್.. ಎಂಜಾಯ್ ಮೂಡ್.. ಕಿವಿಗೆ ಅಪ್ಪಳಿಸೋ ಮಸ್ತ್ ಮ್ಯೂಸಿಕ್.. ಇಷ್ಟೆಲ್ಲಾ ಒಂದೇ ಕಡೆ ಇದ್ಮೇಲೆ ಇವ್ರೆಲ್ಲಾ ಸುಮ್ಮನೆ ಇರ್ತಾರಾ.. ಚಾನ್ಸೇ ಇಲ್ಲ.. ನಮ್ ಏರಿಯಾದಲ್ಲಿ ನಾವೇ ಕಿಂಗು.. ದಿನವೂ ರಂಗು ರಂಗು ಅಂತಾ ಮಸ್ತಿ ಮಾಡೋದೇ.. ಕುಣಿದು ಕುಪ್ಪಳಿಸೋದೇ.

ರಥಸಪ್ತಮಿಯ ಪ್ರಯುಕ್ತ ಓಕುಳಿಯಾಟ: ಅಂದ್ಹಾಗೆ, ರಥಸಪ್ತಮಿಯ ಪ್ರಯುಕ್ತ ಕಳೆದ ನಾಲ್ಕು ದಿನಗಳಿಂದ ಮಂಗಳೂರಿನಲ್ಲಿ ವೆಂಕಟರಮಣ ದೇವರ ರಥೋತ್ಸವ ನಡೀತು. ಅದ್ರಲ್ಲೂ ಇವತ್ತಂತೂ ಕಲರ್​ಫುಲ್ ವಾತಾವರಣವೇ ಸೃಷ್ಟಿಯಾಗಿತ್ತು. ಸಾವ್ರ ಸಾವ್ರ ಜನ ಒಂದೇ ಕಡೆ ಸೇರಿ ಓಕುಳಿ ಆಡಿ ಖುಷಿಪಟ್ರು. ಯುವ ಸಮೂಹವಂತೂ ಸಖತ್ ಆಗಿ ಕುಣಿದು ಕುಪ್ಪಳಿಸಿದ್ರು.

ಇನ್ನು, ರಥೋತ್ಸವ ನಡೆದ ಬಳಿಕ ದೇವರಿಗೆ ವಿಶೇಷ ಮಜ್ಜನ ಕಾರ್ಯ ನಡೆದು ಬಳಿಕ ದೇವರನ್ನ ಗರ್ಭಗುಡಿಯಲ್ಲಿ ತಂದಿಡ್ತಾರೆ. ದೇವರ ಈ ಮಜ್ಜನವನ್ನೇ ಭಕ್ತರು ಬಣ್ಣದ ಹಬ್ಬವನ್ನಾಗಿ ಆಚರಿಸ್ತಾರೆ. ಅದ್ರಂತೆ ಇವತ್ತು ಜನ ಮುಂಜಾನೆಯಿಂದ್ಲೇ ಬಣ್ಣದ ಆಟದಲ್ಲಿ ಮುಳುಗಿ ಎಂಜಾಯ್ ಮಾಡಿದ್ರು. ವಿಶೇಷ ಅಂದ್ರೆ ಈ ಓಕುಳಿಯಲ್ಲಿ ಗುಲಾಬಿ ಬಣ್ಣ ಮಾತ್ರ ಬಳಸಬೇಕು ಅನ್ನೋ ನಿಯಮ ಇದೆ. ಹೀಗಾಗಿ ಜನ ಹೆಚ್ಚಾಗಿ ಗುಲಾಬಿ ಬಣ್ಣವನ್ನೇ ಓಕುಳಿಗೆ ಬಳಸಿದ್ರು. ಟೆನ್ಷನ್​ಗೆ ಗೋಲಿ ಹೊಡೆದು ಮಸ್ತಿ ಮಾಡಿದ್ರು.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada