ಬೆಂಗಳೂರಲ್ಲಿ ಹೊಂಡ ಬಿದ್ದ ರಸ್ತೆಗಳ ಫೋಟೋವನ್ನು ವಾಟ್ಸ್​ಆ್ಯಪ್​ ಮೂಲಕ ಕಳಿಸಿ; ಹೈಕೋರ್ಟ್​ ನಿಮ್ಮ ಸಹಾಯಕ್ಕೆ ಬರಲಿದೆ.. !

ಜನವರಿ 30 ರವರೆಗೆ ಮಾತ್ರ ಈ ಅವಕಾಶ ಲಭ್ಯವಿದೆ. ಈ ಅವಧಿಯೊಳಗೆ ಬೆಂಗಳೂರು ವಾಸಿಗಳು ತಾವು ಪಯಣಿಸುವ ರಸ್ತೆಗಳಲ್ಲಿನ ಹೊಂಡಗಳ ವಿವರವನ್ನು ಸಲ್ಲಿಸಬಹುದಾಗಿದೆ. 

ಬೆಂಗಳೂರಲ್ಲಿ ಹೊಂಡ ಬಿದ್ದ ರಸ್ತೆಗಳ ಫೋಟೋವನ್ನು ವಾಟ್ಸ್​ಆ್ಯಪ್​ ಮೂಲಕ ಕಳಿಸಿ; ಹೈಕೋರ್ಟ್​ ನಿಮ್ಮ ಸಹಾಯಕ್ಕೆ ಬರಲಿದೆ.. !
ಸಂಗ್ರಹ ಚಿತ್ರ
Follow us
guruganesh bhat
| Updated By: Lakshmi Hegde

Updated on:Jan 14, 2021 | 6:02 PM

ಬೆಂಗಳೂರು: ಅಯ್ಯಪ್ಪಾ..ಇದೇನು ರಸ್ತೆಯೋ, ಕೆರೆಯೋ ಎಂದು ಪ್ರತಿದಿನ ಬೆಂಗಳೂರಿನಲ್ಲಿ ವಾಹನ ಓಡಿಸುವಾಗ ಅಲವತ್ತುಕೊಳ್ಳುತ್ತಿದ್ದೀರಾ? ಯಾರಿಗೆ ಹೇಳೋದು ಎಂದು ತಿಳಿಯದೆ ಬೇಸರಿಸಬೇಡಿ, ಕರ್ನಾಟಕ ಹೈ ಕೋರ್ಟ್​ ನಿಮಗೆ ಸಹಾಯ ಹಸ್ತ ಚಾಚಿದೆ. ಹೇಗಂತೀರಾ ಈ ಸುದ್ದಿ ಓದಿ.

ಬೆಂಗಳೂರಿನ ರಸ್ತೆಗಳಲ್ಲಿ ಗುಂಡಿಗಳು ಕಂಡುಬಂದರೆ ನೀವು ಮಾಡಬೇಕಿರುವುದಿಷ್ಟೇ, https://api.whatsapp.com/send?phone=918095500118&text=helpbengaluru ಈ ವಾಟ್ಸ್​​ಆ್ಯಪ್​ ​ ಲಿಂಕ್​ಗೆ ಹೊಂಡ ಬಿದ್ದ ರಸ್ತೆಯ ಫೋಟೋ, ಸ್ಥಳದ ವಿವರ ಕಳುಹಿಸಿದರಾಯಿತು. ಜನವರಿ 30 ರವರೆಗೆ ಮಾತ್ರ ಈ ಅವಕಾಶ ಲಭ್ಯವಿದೆ. ಈ ಅವಧಿಯೊಳಗೆ ಬೆಂಗಳೂರು ವಾಸಿಗಳು ತಾವು ಪಯಣಿಸುವ ರಸ್ತೆಗಳಲ್ಲಿನ ಹೊಂಡಗಳ ವಿವರವನ್ನು ಸಲ್ಲಿಸಬಹುದಾಗಿದೆ.

ಏನಿದು ಪ್ರಕರಣ? 2015ರಲ್ಲಿ ಬೆಂಗಳೂರಿನ ಕಳಪೆ ರಸ್ತೆ ಮತ್ತು ಪಾದಚಾರಿ ಮಾರ್ಗಗಳ ಕುರಿತು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯೊಂದನ್ನು ಹೂಡಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ಉಚ್ಛ ನ್ಯಾಯಾಲಯ 2017ರಲ್ಲಿ ರಸ್ತೆ ಮತ್ತು ಪಾದಚಾರಿ ಮಾರ್ಗಗಳ ಕುರಿತು ಸ್ವತಂತ್ರ ಸರ್ವೆಯೊಂದನ್ನು ನಡೆಸುವಂತೆ ಕರ್ನಾಟಕ ರಾಜ್ಯ ಕಾನೂನು ಸೇವಾ ಸಂಘಕ್ಕೆ ಆದೇಶಿಸಿತ್ತು. ಜನವರಿ 30ರೊಳಗೆ ಈ ಸರ್ವೆ ಮುಕ್ತಾಯವಾಗಲಿದ್ದು, ಅಷ್ಟರೊಳಗೆ ಹದಗೆಟ್ಟ ರಸ್ತೆಗಳ ವಿವರಗಳನ್ನು ಸಾರ್ವಜನಿಕರು ಕಳುಹಿಸಬಹುದಾಗಿದೆ. ಸಾರ್ವಜನಿಕರು ಹದಗೆಟ್ಟ ರಸ್ತೆಗಳ ಚಿತ್ರಗಳನ್ನು ಕಳುಹಿಸಿದರೆ ಉಚ್ಛ ನ್ಯಾಯಾಲಯಕ್ಕೆ ಫ್ರೂಫ್ ಒದಗಿಸಲು ಸಹಕಾರಿಯಾಗಲಿದೆ.

ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಆಲಿಸಿದ ನ್ಯಾಯಾಲಯ ನೀಡಿರುವ ಮಧ್ಯಂತರ ಆದೇಶದ ಪ್ರಕಾರ ರಸ್ತೆ ಮತ್ತು ಪಾದಚಾರಿ ಮಾರ್ಗಗಳ ಸುಸ್ಥಿತಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕರ್ತವ್ಯವಾಗಿದ್ದು, ಪ್ರತಿ ವಾರ್ಡ್​ಗೂ ಕಮಿಟಿ ರಚಿಸಿ ಸುವ್ಯವಸ್ಥೆ ಕಾಪಾಡಬೇಕಿದೆ.

ಸ್ಯಾನ್​ ಫ್ರಾನ್ಸಿಸ್ಕೋ ಟು ಬೆಂಗಳೂರು; 17 ಗಂಟೆಗಳ ನಾನ್​ಸ್ಟಾಪ್ ವಿಮಾನಯಾನದ ನೇತೃತ್ವ ವಹಿಸಿದ ಏರ್ ಇಂಡಿಯಾ ಮಹಿಳಾ ಪೈಲಟ್ ತಂಡ

Published On - 6:01 pm, Thu, 14 January 21

ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ