ಸುಗ್ಗಿ ಹಬ್ಬದಂದೇ.. ನಡು ಬೀದಿಯಲ್ಲಿ ಗೂಳಿಕಾಳಗ: ಜಬರ್​ದಸ್ತ್​ ಫೈಟಿಂಗ್​ ಕಣ್ತುಂಬಿಕೊಂಡ ಜನಸಾಗರ!

ಸುಗ್ಗಿ ಹಬ್ಬದಂದೇ ಗೂಳಿಗರೆಡು ನಡು ಬೀದಿಯಲ್ಲಿ ಜಬರ್​​ದಸ್ತ್​ ಆಗಿ ಫೈಟ್​ ಮಾಡಿರುವ ಘಟನೆ ಮಂಜಿನ‌ ನಗರಿ ಮಡಿಕೇರಿಯ ಕಾನ್ವೆಂಟ್ ಜಂಕ್ಷನ್ ಬಳಿ ಕಂಡುಬಂದಿದೆ. ಹೋರಿಗಳು ಸುಮಾರು 15 ನಿಮಿಷಕ್ಕೂ ಹೆಚ್ಚು ಕಾಲ ಬೀದಿಯಲ್ಲಿ ಗುದ್ದಾಡಿಕೊಂಡಿದೆ.

  • Updated On - 5:55 pm, Thu, 14 January 21
ಸುಗ್ಗಿ ಹಬ್ಬದಂದೇ.. ನಡು ಬೀದಿಯಲ್ಲಿ ಗೂಳಿಕಾಳಗ: ಜಬರ್​ದಸ್ತ್​ ಫೈಟಿಂಗ್​ ಕಣ್ತುಂಬಿಕೊಂಡ ಜನಸಾಗರ!
ನಡು ಬೀದಿಯಲ್ಲಿ ಗೂಳಿಕಾಳಗ

ಕೊಡಗು: ಸಂಕ್ರಾಂತಿ ಹಬ್ಬದಂದು ರೈತಾಪಿ ವರ್ಗದವರು ತಮ್ಮ ರಾಸುಗಳನ್ನು ಬಲು ಸುಂದರವಾಗಿ ಅಲಂಕರಿಸಿ, ಪೂಜೆ ಸಲ್ಲಿಸುವ ಮೂಲಕ ತಮ್ಮ ಕೃತಜ್ಞತೆ ತೋರುತ್ತಾರೆ. ಇದರ ಜೊತೆ ಎತ್ತುಗಳನ್ನು ಕಿಚ್ಚು ಹಾಯಿಸುವುದರ ಮೂಲಕ ಸಂಪ್ರದಾಯವನ್ನು ನೆರವೇರಿಸುತ್ತಾರೆ.

ಆದರೆ, ಇತ್ತ, ಸುಗ್ಗಿ ಹಬ್ಬದಂದೇ ಗೂಳಿಗರೆಡು ನಡು ಬೀದಿಯಲ್ಲಿ ಜಬರ್​​ದಸ್ತ್​ ಆಗಿ ಫೈಟ್​ ಮಾಡಿರುವ ಘಟನೆ ಮಂಜಿನ‌ ನಗರಿ ಮಡಿಕೇರಿಯ ಕಾನ್ವೆಂಟ್ ಜಂಕ್ಷನ್ ಬಳಿ ಕಂಡುಬಂದಿದೆ. ಹೋರಿಗಳು ಸುಮಾರು 15 ನಿಮಿಷಕ್ಕೂ ಹೆಚ್ಚು ಕಾಲ ಬೀದಿಯಲ್ಲಿ ಗುದ್ದಾಡಿಕೊಂಡಿದೆ.

ಗೂಳಿಗಳ‌ ಕಾಳಗ ಕಂಡ ಸಾರ್ವಜನಿಕರು ಒಂದು ಕ್ಷಣ ಭಯಭೀತರಾದರು. ಎತ್ತುಗಳನ್ನು ಓಡಿಸಲು ಜನರು ಎಷ್ಟೇ ಪ್ರಯತ್ನಪಟ್ಟರೂ ಏನು ಪ್ರಯೋಜನವಾಗಲಿಲ್ಲ. ಕೊನೆಗೆ, ಸಾರ್ವಜನಿಕರೇ ಗೂಳಿ ಕಾಳಗದ ವಿಡಿಯೋ ಮಾಡಿಕೊಳ್ಳುವ ದೃಶ್ಯ ಸಹ ಕಂಡುಬಂತು.

ಇತ್ತ, ಗೂಳಿ ಕಾಳಗದಲ್ಲಿ ದ್ವಿಚಕ್ರ ವಾಹನವೊಂದಕ್ಕೆ ಹಾನಿ ಉಂಟಾಗಿದೆ. ಕೊನೆಗೆ ಶತಾಯ ಗತಾಯ ಯತ್ನಿಸಿದ ಸ್ಥಳೀಯರು ಎರಡು ಹೋರಿಗಳನ್ನು ಓಡಿಸುವಲ್ಲಿ ಸಫಲಾರದರು.

ಜೋಡೆತ್ತುಗಳ ಸಾಹಸ: 65 ಕ್ವಿಂಟಲ್ ಭಾರವನ್ನು 15 ಕಿಲೋ ಮೀಟರ್ ದೂರ ಎಳೆದ ಹೋರಿಗಳು

Click on your DTH Provider to Add TV9 Kannada