ಸುಶಾಂತ್​ನನ್ನು ಪ್ರೀತಿಸುತ್ತಿದ್ದ ರಿಯಾ ಅವನು ಡ್ರಗ್ ಅಡಿಕ್ಟ್ ಆಗಿದ್ದ ಎನ್ನುತ್ತಾಳೆ!: ಶೇಖರ್ ಸುಮನ್

ಸುಶಾಂತ್ ಸಿಂಗ್ ರಜಪುತ ನಿಗೂಢ ಸಾವಿನ ಪ್ರಕರಣವನ್ನು ಕೇಂದ್ರ ತನಿಖಾ ದಳ (ಸಿಬಿಐ) ಇನ್ನೂ ತನಿಖೆ ನಡೆಸಿತ್ತಿರುವಾಗಲೇ, ಈ ಕೇಸಲ್ಲಿ ಪ್ರಮುಖ ಅರೋಪಿಯೆಂದು ಪರಿಗಣಿಸಲಾಗಿರುವ ರಿಯಾ ಚಕ್ರವರ್ತಿ ರಾಷ್ರೀಯ ಸುದ್ದಿ ಚ್ಯಾನೆಲ್​ಗಳಿಗೆ ಸಂದರ್ಶನಗಳನ್ನು ನೀಡುತ್ತಾ, ಆಕೆಯ ಬಾಯ್​ಫ್ರೆಂಡ್ ಡ್ರಗ್ ಅಡಿಕ್ಟ್ ಅಗಿದ್ದನೆಂದು ಹೇಳುತ್ತಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ. ಹೆಸರಾಂತ ನಟ ಮತ್ತು ಟಿವಿ ಚ್ಯಾನೆಲ್​ಗಳಲ್ಲಿ ಕೆಲವು ಟಾಕ್​ಶೋಗಳ ಹೋಸ್ಟ್ ಆಗಿದ್ದ ಶೇಖರ್ ಸುಮನ್, ರಿಯಾಳ ವರ್ತನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ‘‘ಸುಶಾಂತ್ ಡ್ರಗ್ ವ್ಯಸನಿಯಾಗಿದ್ದ ರಿಯಾ ಯಾಕೆ ಹೇಳುತ್ತಿದ್ದಾಳೆ […]

ಸುಶಾಂತ್​ನನ್ನು ಪ್ರೀತಿಸುತ್ತಿದ್ದ ರಿಯಾ ಅವನು ಡ್ರಗ್ ಅಡಿಕ್ಟ್ ಆಗಿದ್ದ ಎನ್ನುತ್ತಾಳೆ!: ಶೇಖರ್ ಸುಮನ್

Updated on: Aug 31, 2020 | 6:48 PM

ಸುಶಾಂತ್ ಸಿಂಗ್ ರಜಪುತ ನಿಗೂಢ ಸಾವಿನ ಪ್ರಕರಣವನ್ನು ಕೇಂದ್ರ ತನಿಖಾ ದಳ (ಸಿಬಿಐ) ಇನ್ನೂ ತನಿಖೆ ನಡೆಸಿತ್ತಿರುವಾಗಲೇ, ಈ ಕೇಸಲ್ಲಿ ಪ್ರಮುಖ ಅರೋಪಿಯೆಂದು ಪರಿಗಣಿಸಲಾಗಿರುವ ರಿಯಾ ಚಕ್ರವರ್ತಿ ರಾಷ್ರೀಯ ಸುದ್ದಿ ಚ್ಯಾನೆಲ್​ಗಳಿಗೆ ಸಂದರ್ಶನಗಳನ್ನು ನೀಡುತ್ತಾ, ಆಕೆಯ ಬಾಯ್​ಫ್ರೆಂಡ್ ಡ್ರಗ್ ಅಡಿಕ್ಟ್ ಅಗಿದ್ದನೆಂದು ಹೇಳುತ್ತಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.

ಹೆಸರಾಂತ ನಟ ಮತ್ತು ಟಿವಿ ಚ್ಯಾನೆಲ್​ಗಳಲ್ಲಿ ಕೆಲವು ಟಾಕ್​ಶೋಗಳ ಹೋಸ್ಟ್ ಆಗಿದ್ದ ಶೇಖರ್ ಸುಮನ್, ರಿಯಾಳ ವರ್ತನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ‘‘ಸುಶಾಂತ್ ಡ್ರಗ್ ವ್ಯಸನಿಯಾಗಿದ್ದ ರಿಯಾ ಯಾಕೆ ಹೇಳುತ್ತಿದ್ದಾಳೆ ಅಂತ ನನಗಂತೂ ಅರ್ಥವಾಗುತ್ತಿಲ್ಲ. ಅಕೆ ಮೊಲಗಳನ್ನು ಕಟ್ಟಿಕೊಂಡು ತೋಳಗಳ ಬೇಟೆಯಾಡುತ್ತಿದ್ದಾಳೆಂದು ಭಾಸವಾಗುತ್ತಿದೆ. ಸಿಬಿಐ ತನಿಖೆ ನಡೆಸುತ್ತಿದೆ, ಅವರ ಮೇಲೆ ನನಗೆ ವಿಶ್ವಾಸವಿದೆ ಎಂದು ಸಹ ಹೇಳುವ ಆಕೆ, ಸುಶಾಂತ್ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದ ಅಂತ ಹೇಳುವ ಅವಶ್ಯಕತೆಯೇನಿದೆ?’’ಎಂದು ಶೇಖರ್ ಪ್ರಶ್ನಿಸಿದ್ದಾರೆ.

‘‘ಸುಶಾಂತ್​ನನ್ನು ತಾನು ತಂಬಾ ಪ್ರೀತಿಸುತ್ತಿದ್ದೆ ಎಂದು ಸಹ ರಿಯಾ ಹೇಳುತ್ತಾಳೆ. ಪ್ರೀತಿಯೆಂದರೆ ಇದೇನಾ? ಒಬ್ಬ ಪ್ರೇಯಸಿ ತನ್ನ ಪ್ರಿಯಕರ ಬಗ್ಗೆ, ಅದೂ ಅವನ ಸಾವಿನ ನಂತರ ಕೆಟ್ಟ ಮಾತುಗಳನ್ನಾಡುತ್ತಾಳೆಯೇ? ಒಂದು ಪಕ್ಷ ಸುಶಾಂತ್ ಮಾದಕ ವಸ್ತುಗಳ ವ್ಯಸನಿಯಾಗಿದ್ದರೂ ಅದು ಆಕೆ ಚ್ಯಾನೆಲ್​ಗಳಲ್ಲಿ ಬಹಿರಂಗಗೊಳಿಸಬಾರದು. ಒಂದೇ ಮಾತಿನಲ್ಲಿ ಹೇಳೋದಾದರೆ, ಆಕೆಯ ವರ್ತನೆ ನನ್ನಲ್ಲಿ ದಿಗ್ಭ್ರಮೆ ಮೂಡಿಸುತ್ತಿದೆ,’’ ಎಂದು ಶೇಖರ್ ಹೇಳಿದ್ದಾರೆ.

ಬಿಹಾರ ಮೂಲದರಾಗಿರುವ ಶೇಖರ್ ಸುಮನ್, ಸುಪ್ರೀಂ ಕೋರ್ಟ್ ಸುಶಾಂತ್ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿದಾಗ ಅತೀವ ಸಂತಸ ವ್ಯಕ್ತಪಡಿಸಿದ್ದರು.