ರೈತರಿಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡನಾ ರೈಸ್ ಮಿಲ್ ಮಾಲೀಕ?

ದಾವಣಗೆರೆ: ಮೂರು ದಿನಗಳ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದ ದಾವಣಗೆರೆ ಜಿಲ್ಲೆ ಹರಿಹರದ ರೈಸ್ ಮಿಲ್ ಮಾಲೀಕ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಹೌದು ವಿಷ ಸೇವಿಸಿ ಆಸ್ಪತ್ರೆ ಗೆ ಸೇರಿದ್ದ ಹರಿಹರದ ಎಂಬಿ ರೈಸ್ ಮಿಲ್ ಮಾಲೀಕ 56 ವರ್ಷದ ಹನುಮೇಶ್ ಗೌಡ, ಜೀವನ್ಮರಣದ ಮಧ್ಯೆ ಸತತ ಮೂರು ದಿನಗಳ ಕಾಲ ಹೋರಾಟ ನಡೆಸಿ ಇಂದು ಕೊನೆಯುಸಿರೆಳೆದಿದ್ದಾನೆ. ರೈತರಿಂದ ನೇರವಾಗಿ ಭತ್ತ ಖರೀದಿಸಿದ್ದ ಹನುಮೇಶ್ ಗೌಡ, ಕೋಟ್ಯಂತರ ರೂಪಾಯಿಗಳನ್ನು ರೈತರಿಗೆ ಬಾಕಿಯಾಗಿ ಕೊಡಬೇಕಿತ್ತು. ಈ ಸಂಬಂಧ ಬಾಕಿ ನೀಡುವಂತೆ ಆಗ್ರಹಿಸಿ […]

ರೈತರಿಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡನಾ ರೈಸ್ ಮಿಲ್ ಮಾಲೀಕ?
Edited By:

Updated on: Jul 22, 2020 | 4:11 PM

ದಾವಣಗೆರೆ: ಮೂರು ದಿನಗಳ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದ ದಾವಣಗೆರೆ ಜಿಲ್ಲೆ ಹರಿಹರದ ರೈಸ್ ಮಿಲ್ ಮಾಲೀಕ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.

ಹೌದು ವಿಷ ಸೇವಿಸಿ ಆಸ್ಪತ್ರೆ ಗೆ ಸೇರಿದ್ದ ಹರಿಹರದ ಎಂಬಿ ರೈಸ್ ಮಿಲ್ ಮಾಲೀಕ 56 ವರ್ಷದ ಹನುಮೇಶ್ ಗೌಡ, ಜೀವನ್ಮರಣದ ಮಧ್ಯೆ ಸತತ ಮೂರು ದಿನಗಳ ಕಾಲ ಹೋರಾಟ ನಡೆಸಿ ಇಂದು ಕೊನೆಯುಸಿರೆಳೆದಿದ್ದಾನೆ. ರೈತರಿಂದ ನೇರವಾಗಿ ಭತ್ತ ಖರೀದಿಸಿದ್ದ ಹನುಮೇಶ್ ಗೌಡ, ಕೋಟ್ಯಂತರ ರೂಪಾಯಿಗಳನ್ನು ರೈತರಿಗೆ ಬಾಕಿಯಾಗಿ ಕೊಡಬೇಕಿತ್ತು.

ಈ ಸಂಬಂಧ ಬಾಕಿ ನೀಡುವಂತೆ ಆಗ್ರಹಿಸಿ ಕಳೆದ ಒಂದು ವರ್ಷದಿಂದ ರೈತರು ಹೋರಾಟ ನಡೆಸಿದ್ದರು. ರೈತರಿಗೆ ಹಣ ನೀಡುವುದಾಗಿ ಹನುಮೇಶ್ ಗೌಡ ಭರವಸೆ ನೀಡಿದ್ದನೆನ್ನಲಾಗಿದೆ.

ರೈಸ್ ಮಿಲ್ ಮಾಲೀಕನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಆಸ್ಪತ್ರೆ ಆವರಣದಲ್ಲಿ ಸೇರಿದ್ದ ರೈತರ ಮುಖದಲ್ಲಿ ಆತಂಕ ಎದ್ದು ಕಾಣುತ್ತಿತ್ತು. ಆದ್ರೆ ಆಸ್ಪತ್ರೆ ಯ ಶವಾಗಾರದ ಸಮೀಪ ಯಾವುದೇ ಕುಟುಂಬಸ್ಥರು ಸುಳಿದಿಲ್ಲ. ಈ ಸಂಬಂಧ ದಾವಣಗೆರೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Published On - 4:44 pm, Tue, 21 July 20