ಧೋನಿ, ಗಂಗೂಲಿ ಪೈಕಿ ಪಾರ್ಥಿವ್ ವೋಟ್ ಕೊಟ್ಟಿದ್ಯಾರಿಗೆ?
ಟೀಮ್ ಇಂಡಿಯಾದ ಇಬ್ಬರು ಮಹಾನ್ ನಾಯಕರು ಯಾರು ಅಂತಾ ಕೇಳಿದ್ರೆ ಥಟ್ ಅಂತಾ ನೆನಪಾಗೋದು ಸೌರವ್ ಗಂಗೂಲಿ ಮತ್ತು ಮಹೇಂದ್ರ ಸಿಂಗ್ ಧೋನಿ. ಸೌರವ್ ಭಾರತ ತಂಡದಲ್ಲಿ ಬಿಸಿ ರಕ್ತದ ಯುವಕರಿಗೆ ಅವಕಾಶ ನೀಡಿ ಹೊಸ ಭಾಷ್ಯ ಬರೆದವರೇ ಧೋನಿ.. ಭಾರತಕ್ಕೆ ಎರಡೆರಡು ವಿಶ್ವಕಪ್ ಗೆಲ್ಲಿಸಿಕೊಟ್ಟು ಹೀರೋ ಆದ್ರು. ಧೋನಿ ನಾಯಕತ್ವದಲ್ಲಿ ತಂಡದ ಸಾಧನೆಗೆ ಮೆಟ್ಟಿಲಾಗಿದ್ದು ಅಂದು ದಾದಾ ತೆಗೆದುಕೊಂಡ ಗಟ್ಟಿ ನಿರ್ಧಾರಗಳೇ ಅನ್ನೋದನ್ನ ಯಾರೂ ಅಲ್ಲಗಳೆಯೋ ಹಾಗಿಲ್ಲ. ಕೆಲ ದಿನಗಳ ಹಿಂದೆ ಮಾಜಿ ಕ್ರಿಕೆಟಿಗ ಗೌತಮ್ […]
ಟೀಮ್ ಇಂಡಿಯಾದ ಇಬ್ಬರು ಮಹಾನ್ ನಾಯಕರು ಯಾರು ಅಂತಾ ಕೇಳಿದ್ರೆ ಥಟ್ ಅಂತಾ ನೆನಪಾಗೋದು ಸೌರವ್ ಗಂಗೂಲಿ ಮತ್ತು ಮಹೇಂದ್ರ ಸಿಂಗ್ ಧೋನಿ. ಸೌರವ್ ಭಾರತ ತಂಡದಲ್ಲಿ ಬಿಸಿ ರಕ್ತದ ಯುವಕರಿಗೆ ಅವಕಾಶ ನೀಡಿ ಹೊಸ ಭಾಷ್ಯ ಬರೆದವರೇ ಧೋನಿ.. ಭಾರತಕ್ಕೆ ಎರಡೆರಡು ವಿಶ್ವಕಪ್ ಗೆಲ್ಲಿಸಿಕೊಟ್ಟು ಹೀರೋ ಆದ್ರು. ಧೋನಿ ನಾಯಕತ್ವದಲ್ಲಿ ತಂಡದ ಸಾಧನೆಗೆ ಮೆಟ್ಟಿಲಾಗಿದ್ದು ಅಂದು ದಾದಾ ತೆಗೆದುಕೊಂಡ ಗಟ್ಟಿ ನಿರ್ಧಾರಗಳೇ ಅನ್ನೋದನ್ನ ಯಾರೂ ಅಲ್ಲಗಳೆಯೋ ಹಾಗಿಲ್ಲ.
ಕೆಲ ದಿನಗಳ ಹಿಂದೆ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಧೋನಿ ಅದೃಷ್ಟವಂತ ನಾಯಕ. ಗಂಗೂಲಿ ಕಟ್ಟಿದ ತಂಡದಿಂದ ಧೋನಿಗೆ ಯಶಸ್ಸು ಸಿಕ್ತು ಎಂಬ ಹೇಳಿಕೆ ನೀಡಿದ್ದರು. ಇದಕ್ಕೆ ಧೋನಿ ಅಭಿಮಾನಿಗಳು ಗೌತಮ್ ವಿರುದ್ಧ ಹರಿಹಾಯ್ದಿದ್ರು. ಆದರೆ ಈಗ ಟೀಮ್ ಇಂಡಿಯಾ ವಿಕೆಟ್ ಕೀಪರ್ ಪಾರ್ಥಿವ್ ಪಟೇಲ್ ಧೋನಿಗಿಂತ ಸೌರವ್ ಗಂಗೂಲಿ ಬೆಸ್ಟ್ ಅಂತಾ ದಾದಾರನ್ನ ಹಾಡಿಹೊಗಳಿದ್ದಾರೆ.
ಭಾರತ ತಂಡಕ್ಕೆ ಹೊಸ Charisma ನೀಡಿದ್ದೇ ಸೌರವ್ ಸೌರವ್ ಗಂಗೂಲಿ ಏನೂ ಇಲ್ಲದೆ ತಂಡವನ್ನ ಬಲಿಷ್ಠವಾಗಿ ಬೆಳೆಸಿ ಸೈ ಎನಿಸಿಕೊಂಡ ಕ್ಯಾಪ್ಟನ್. ಗಂಗೂಲಿ ನಾಯಕತ್ವದಲ್ಲೇ ಭಾರತ ತಂಡ ಮತ್ತೊಮ್ಮೆ ಪುಟಿದೆದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಘರ್ಜಿಸಿದ್ದು. ಯುವ ಆಟಗಾರರನ್ನೇ ಕಟ್ಟಿಕೊಂಡು ಭಾರತ ತಂಡಕ್ಕೆ ಹೊಸ Charisma ನೀಡಿದ್ದೇ ಸೌರವ್ ಗಂಗೂಲಿ ಎಂದು ಪಾರ್ಥೀವ್ ಬಣ್ಣಿಸಿದ್ದಾರೆ.
ಇಬ್ಬರು ನಾಯಕರ ನಡುವೆ ಸ್ಪರ್ಧೆಯು ಮಾನ್ಯವಾಗಿರುತ್ತದೆ. ಧೋನಿ ನಾಯಕನಾಗಿ ಸಾಕಷ್ಟು ಟ್ರೋಫಿಗಳನ್ನು ಗೆದ್ದಿದ್ರೆ, ಗಂಗೂಲಿ ನಾಯಕನಾಗಿ ಕ್ಲಿಷ್ಟಕರ ಸಮಯದಲ್ಲಿ ತಂಡವನ್ನು ಕಟ್ಟಿದ್ದಾರೆ. ಗಂಗೂಲಿ ನಾಯಕತ್ವಕ್ಕಿಂತ ಮೊದಲು ನಾವು ಗೆದ್ದಿಲ್ಲ ಅಂತಲ್ಲ.
ಆದ್ರೆ ಆಸ್ಟ್ರೇಲಿಯಾದ ಹೆಡ್ಲಿಂಗ್‌ನಂಥ ದೊಡ್ಡ ಟೆಸ್ಟ್ ಪಂದ್ಯಗಳನ್ನು ಗೆದ್ದಿದ್ದೇವೆ. ನಂತರ ಪಾಕಿಸ್ತಾನಕ್ಕೆ ಹೋಗಿ ಟೆಸ್ಟ್ ಸರಣಿಯನ್ನು ಸಹ ಗೆದ್ದಿದ್ದೇವೆ. ಇದೆಲ್ಲ ಸಾಧ್ಯವಾಗಿದ್ದು ಗಂಗೂಲಿ ಅನ್ನೋ ಛಲದಂಕಮಲ್ಲನ ನಾಯಕತ್ವದಲ್ಲಿ. ಹೀಗಾಗಿ ನನ್ನ ವೋಟ್ ಸೌರವ್ ಗಂಗೂಲಿಗೇ ಹೋಗೋದು ಎಂದಿದ್ದಾರೆ ಪಾರ್ಥಿವ್.
Published On - 3:55 pm, Tue, 21 July 20