ಡಿಸೆಂಬರ್ ಒಳಗೆ 30 ಕೋಟಿ ಕೊವಿಡ್​ ಲಸಿಕೆ​ ರೆಡಿ, ಬೆಲೆ ಎಷ್ಟು ಇರುತ್ತೆ ಗೊತ್ತಾ?

ದಾರಿಗೆ ಅಡ್ಡಬಂದವರನ್ನ ಬಲಿ ಪಡೆಯುತ್ತಿರುವ ಕೊರೊನಾ ಮಹಾಮಾರಿಯ ಎದುರು ಜಗತ್ತೇ ಮಂಡಿ ಊರುವಂಥ ಸ್ಥಿತಿ ಬಂದಿದೆ. ಈ ಮಧ್ಯೆ ಹೆಮ್ಮಾರಿಯನ್ನ ಹತ್ತಿಕ್ಕಲು ಹಲವಾರು ದೇಶಗಳು ತಕ್ಕ ಔಷಧದ ಹುಡುಕಾಟದಲ್ಲಿ ತೊಡಗಿದೆ. ಅದರಲ್ಲಿ ಇಂಗ್ಲೆಂಡ್​ ಸಹ ಒಂದು. ಇದೀಗ ಇಂಗ್ಲೆಂಡ್​ನ ಆಕ್ಸ್​ಫರ್ಡ್​ ವಿಶ್ವವಿದ್ಯಾಲಯ ಹಾಗೂ ಆಸ್ಟ್ರಾ ಜೆನೆಕಾ (Astra Zeneca) ಸಹ ಭಾಗಿತ್ವದಲ್ಲಿ ತಯಾರಾಗಿರುವ ಕೊವಿಡ್​ ಲಸಿಕೆ ಮಾನವ ಪ್ರಾಯೋಗಿಕ ಹಂತದಲ್ಲಿ ಉತ್ತಮ ಫಲಿತಾಂಶವನ್ನ ನೀಡುತ್ತಿದೆ. ಹಾಗಾಗಿ, ವಿಶ್ವದಾದ್ಯಂತ ಜನರಲ್ಲಿ ಕೊಂಚ ಭರವಸೆ ಮೂಡಿದೆ. ಇದೀಗ ಭಾರತದ ಪ್ರಖ್ಯಾತ […]

ಡಿಸೆಂಬರ್ ಒಳಗೆ 30 ಕೋಟಿ ಕೊವಿಡ್​ ಲಸಿಕೆ​ ರೆಡಿ, ಬೆಲೆ ಎಷ್ಟು ಇರುತ್ತೆ ಗೊತ್ತಾ?
Follow us
KUSHAL V
| Updated By:

Updated on:Jul 22, 2020 | 4:57 PM

ದಾರಿಗೆ ಅಡ್ಡಬಂದವರನ್ನ ಬಲಿ ಪಡೆಯುತ್ತಿರುವ ಕೊರೊನಾ ಮಹಾಮಾರಿಯ ಎದುರು ಜಗತ್ತೇ ಮಂಡಿ ಊರುವಂಥ ಸ್ಥಿತಿ ಬಂದಿದೆ. ಈ ಮಧ್ಯೆ ಹೆಮ್ಮಾರಿಯನ್ನ ಹತ್ತಿಕ್ಕಲು ಹಲವಾರು ದೇಶಗಳು ತಕ್ಕ ಔಷಧದ ಹುಡುಕಾಟದಲ್ಲಿ ತೊಡಗಿದೆ. ಅದರಲ್ಲಿ ಇಂಗ್ಲೆಂಡ್​ ಸಹ ಒಂದು.

ಇದೀಗ ಇಂಗ್ಲೆಂಡ್​ನ ಆಕ್ಸ್​ಫರ್ಡ್​ ವಿಶ್ವವಿದ್ಯಾಲಯ ಹಾಗೂ ಆಸ್ಟ್ರಾ ಜೆನೆಕಾ (Astra Zeneca) ಸಹ ಭಾಗಿತ್ವದಲ್ಲಿ ತಯಾರಾಗಿರುವ ಕೊವಿಡ್​ ಲಸಿಕೆ ಮಾನವ ಪ್ರಾಯೋಗಿಕ ಹಂತದಲ್ಲಿ ಉತ್ತಮ ಫಲಿತಾಂಶವನ್ನ ನೀಡುತ್ತಿದೆ. ಹಾಗಾಗಿ, ವಿಶ್ವದಾದ್ಯಂತ ಜನರಲ್ಲಿ ಕೊಂಚ ಭರವಸೆ ಮೂಡಿದೆ. ಇದೀಗ ಭಾರತದ ಪ್ರಖ್ಯಾತ ಲಸಿಕೆ ತಯಾರಿಕಾ ಕಂಪನಿಯಾದ ಸೀರಮ್​ ಇನ್​ಸ್ಟಿಟ್ಯೂಟ್​ ಆಫ್​ ಇಂಡಿಯಾದ (Serum Institute of India) ಮುಖ್ಯಸ್ಥ ಅದಾರ್​ ಪೂನಾವಾಲಾ ಮತ್ತೊಂದು ಸಿಹಿ ಸುದ್ದಿ ನೀಡಿದ್ದಾರೆ.

‘ಪ್ರತಿ ಲಸಿಕೆಯ ಬೆಲೆ 1 ಸಾವಿರ ರೂಪಾಯಿ’ ಹೌದು, ಅದಾರ್​ ಪೂನಾವಾಲಾ ಡಿಸೆಂಬರ್ ಒಳಗೆ ಆಕ್ಸ್​ಫರ್ಡ್​ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿರುವ ವ್ಯಾಕ್ಸಿನ್​ನ ಕನಿಷ್ಠ 30 ಕೋಟಿ ಲಸಿಕೆಗಳನ್ನು ತಯಾರಿಸುವುದಾಗಿ ಮಾಹಿತಿ ನೀಡಿದ್ದಾರೆ. ಕೋವಿಶೀಲ್ಡ್ (Covishield) ಎಂಬ ಹೆಸರಿನಲ್ಲಿ ಈ ಲಸಿಕೆ ತಯಾರಾಗಲಿದೆ ಎಂದು ತಿಳಿಸಿದ್ದಾರೆ. ಜೊತೆಗೆ, ಭಾರತದಲ್ಲಿ ಪ್ರತಿ ಲಸಿಕೆಯು 1,000 ರೂಪಾಯಿ ದರದಲ್ಲಿ ಲಭ್ಯವಾಗಲಿದೆ ಎಂಬ ಮಾಹಿತಿ ಸಹ ನೀಡಿದ್ದಾರೆ.

ಈ ಆಕ್ಸ್​ಫರ್ಡ್ ಲಸಿಕೆ ಎಲ್ಲಾ ಮಾನವ ಪ್ರಯೋಗಿಕ ಹಂತದಲ್ಲಿ ಪೂರ್ಣಪ್ರಮಾಣವಾಗಿ ಯಶಸ್ಸನ್ನು ಕಂಡ ಕೂಡಲೇ ಅದನ್ನು ತಯಾರಿಸಲು ಸೀರಮ್​ ಇನ್​ಸ್ಟಿಟ್ಯೂಟ್​ ಆಫ್​ ಇಂಡಿಯಾವನ್ನ ಆಸ್ಟ್ರಾ ಜೆನೆಕಾ ಆಯ್ಕೆ ಮಾಡಿದೆ. ಜೊತೆಗೆ, ಕೇಂದ್ರ ಸರ್ಕಾರಕ್ಕೆ ದೇಶದಲ್ಲಿ ಇದರ ಮಾನವ ಪ್ರಯೋಗಕ್ಕೆ ಅನುಮತಿ ಪಡೆದು ಭಾರತದಲ್ಲೂ ಇದರ ಟ್ರಯಲ್​ ಆರಂಭಿಸುತ್ತೇವೆ ಎಂದು ಅದಾರ್​ ಪೂನಾವಾಲಾ ತಿಳಿಸಿದ್ದಾರೆ.

Published On - 5:13 pm, Tue, 21 July 20

Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ