ದೆಹಲಿಯಲ್ಲಿ ಶೇ. 23 ಜನರಿಗೆ ಕೊರೊನಾ, ಮುಂದಿದೆ ಭಾರೀ ಸಂಕಟ
ನವದೆಹಲಿ: ದೇಶದ ರಾಜಧಾನಿ ದೆಹಲಿಯಲ್ಲಿ ಈಗಾಗಲೇ ಶೇಕಡಾ 23.48ರಷ್ಟು ಜನಕ್ಕೆ ಕೊರೊನಾ ಬಂದು ಹೋಗಿದೆಯಂತೆ. ಹೀಗಾಗಿ ಇವರಲ್ಲಿ ಕೊರೊನಾ ವಿರುದ್ಧ ಹೋರಾಡುವ ಇಮ್ಯುನಿಟಿ ಬಂದಿದೆ ಎಂದು ಇತ್ತೀಚೆಗೆ ನಡೆಸಿದ ಸರ್ವೆಯಿಂದ ತಿಳಿದುಬಂದಿದೆ. ದೆಹಲಿ ಕೊರೊನಾದಿಂದ ಭಾರೀ ತೊಂದರೆ ಅನುಭವಿಸಿದ ರಾಜ್ಯ. ಕೊರೊನಾ ಮಾರಿಯ ಆರ್ಭಟಕ್ಕೆ ಕಂಗಾಲಾಗಿದ್ದ ದೆಹಲಿ ವೈರಸ್ ಕಂಟ್ರೋಲ್ ಮಾಡಲು ಏನೆಲ್ಲಾ ಕ್ರಮ ಕೈಗೊಳ್ಳಬೇಕೋ ಅದನ್ನೆಲ್ಲಾ ಮಾಡ್ತಿದೆ. ಈ ನಡುವೆ ದೆಹಲಿಯಲ್ಲಿ ನಡೆಸಿದ ಸೆರೋಲಾಜಿಕಲ್ ಸರ್ವೆಯ ಫಲಿತಾಂಶ ಈಗ ಬಂದಿದ್ದು, ರಾಜಧಾನಿ ದೆಹಲಿಯ ಪ್ರತಿ ನೂರರಲ್ಲಿ […]
ನವದೆಹಲಿ: ದೇಶದ ರಾಜಧಾನಿ ದೆಹಲಿಯಲ್ಲಿ ಈಗಾಗಲೇ ಶೇಕಡಾ 23.48ರಷ್ಟು ಜನಕ್ಕೆ ಕೊರೊನಾ ಬಂದು ಹೋಗಿದೆಯಂತೆ. ಹೀಗಾಗಿ ಇವರಲ್ಲಿ ಕೊರೊನಾ ವಿರುದ್ಧ ಹೋರಾಡುವ ಇಮ್ಯುನಿಟಿ ಬಂದಿದೆ ಎಂದು ಇತ್ತೀಚೆಗೆ ನಡೆಸಿದ ಸರ್ವೆಯಿಂದ ತಿಳಿದುಬಂದಿದೆ.
ದೆಹಲಿ ಕೊರೊನಾದಿಂದ ಭಾರೀ ತೊಂದರೆ ಅನುಭವಿಸಿದ ರಾಜ್ಯ. ಕೊರೊನಾ ಮಾರಿಯ ಆರ್ಭಟಕ್ಕೆ ಕಂಗಾಲಾಗಿದ್ದ ದೆಹಲಿ ವೈರಸ್ ಕಂಟ್ರೋಲ್ ಮಾಡಲು ಏನೆಲ್ಲಾ ಕ್ರಮ ಕೈಗೊಳ್ಳಬೇಕೋ ಅದನ್ನೆಲ್ಲಾ ಮಾಡ್ತಿದೆ. ಈ ನಡುವೆ ದೆಹಲಿಯಲ್ಲಿ ನಡೆಸಿದ ಸೆರೋಲಾಜಿಕಲ್ ಸರ್ವೆಯ ಫಲಿತಾಂಶ ಈಗ ಬಂದಿದ್ದು, ರಾಜಧಾನಿ ದೆಹಲಿಯ ಪ್ರತಿ ನೂರರಲ್ಲಿ 23.48ರಷ್ಟು ಜನರಿಗೆ ಕೊರೊನಾ ಬಂದು ಹೋಗಿದೆ. ಇವರಲ್ಲಿ ಕೊರೊನಾ ವಿರುದ್ಧ ಹೋರಾಡುವ ಪ್ರತಿಕಾಯ ಅಂದ್ರೆ ಇಮ್ಯುನಿಟಿ ಬಂದಿದೆ ಎಂದು ತಿಳಿದು ಬಂದಿದೆ.
ಆದ್ರೆ ಹೀಗೆ ಕೊರೊನಾ ಬಂದು ಹೋಗಿರುವವರಲ್ಲಿ ಬಹುತೇಕರಿಗೆ ಯಾವುದೇ ಲಕ್ಷಣಗಳಿಲ್ಲ ಎಂದು ತಿಳಿದು ಬಂದಿದೆ. ಆದ್ರೂ ಇನ್ನು ಮುಂದೆಯೂ ಹೆಚ್ಚಿನ ಸಂಖ್ಯೆಯಲ್ಲಿ ಜನರಿಗೆ ಕೊರೊನಾ ಸೋಂಕು ತಗುಲಬಹುದು ಎಂದು ಸರ್ವೆಯಲ್ಲಿ ತಿಳಿದು ಬಂದಿದೆ.
Published On - 2:32 pm, Tue, 21 July 20