ತಾಯಿ-ಮಗಳಿದ್ದ ಸ್ಕೂಟರ್ಗೆ ಬೈಕ್ ಗುದ್ದಿಸಿ.. ಚಿನ್ನಾಭರಣ ದೋಚಿ ಪರಾರಿ!
ರಾಮನಗರ: ಸ್ಕೂಟರ್ಗೆ ಬೈಕ್ನಿಂದ ಗುದ್ದಿಸಿದ ದುಷ್ಕರ್ಮಿಗಳು ಚಿನ್ನಾಭರಣ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಜಿಲ್ಲೆಯ ಶಿವನಹಳ್ಳಿ ಗ್ರಾಮದ ಬಳಿ ಇಂದು ನಡೆದಿದೆ. ಸಂಬಂಧಿಕರ ಮದುವೆಗೆಂದು ಹೊನ್ನಿಗಾನಹಳ್ಳಿಗೆ ಗೌರಮ್ಮ ಹಾಗೂ ಅವರ ಪುತ್ರಿ ರಶ್ಮಿ ಹೋಂಡಾ ಆಕ್ಟೀವಾದಲ್ಲಿ ಹೋಗುತ್ತಿದ್ದರು. ಈ ಸಂದರ್ಭ, ಅವರ ಸ್ಕೂಟರ್ಗೆ ತಮ್ಮ ಬೈಕ್ ಡಿಕ್ಕಿ ಹೊಡೆಸಿದ ಇಬ್ಬರು ಹೆಲ್ಮೆಟ್ಧಾರಿ ದುಷ್ಕರ್ಮಿಗಳು 55 ಗ್ರಾಂ ಮಾಂಗಲ್ಯ ಸರ, ನೆಕ್ಲೆಸ್ ಹಾಗೂ ಲಾಂಗ್ ಚೈನ್ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಆರೋಪಿಗಳು ಹೆಲ್ಮೆಟ್ ಧರಿಸಿದ್ದರಿಂದ ಅವರ ಗುರುತು ಪತ್ತೆ ಮಾಡಲು ಸಾಧ್ಯವಾಗಿಲ್ಲ. […]

ರಾಮನಗರ: ಸ್ಕೂಟರ್ಗೆ ಬೈಕ್ನಿಂದ ಗುದ್ದಿಸಿದ ದುಷ್ಕರ್ಮಿಗಳು ಚಿನ್ನಾಭರಣ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಜಿಲ್ಲೆಯ ಶಿವನಹಳ್ಳಿ ಗ್ರಾಮದ ಬಳಿ ಇಂದು ನಡೆದಿದೆ.
ಸಂಬಂಧಿಕರ ಮದುವೆಗೆಂದು ಹೊನ್ನಿಗಾನಹಳ್ಳಿಗೆ ಗೌರಮ್ಮ ಹಾಗೂ ಅವರ ಪುತ್ರಿ ರಶ್ಮಿ ಹೋಂಡಾ ಆಕ್ಟೀವಾದಲ್ಲಿ ಹೋಗುತ್ತಿದ್ದರು. ಈ ಸಂದರ್ಭ, ಅವರ ಸ್ಕೂಟರ್ಗೆ ತಮ್ಮ ಬೈಕ್ ಡಿಕ್ಕಿ ಹೊಡೆಸಿದ ಇಬ್ಬರು ಹೆಲ್ಮೆಟ್ಧಾರಿ ದುಷ್ಕರ್ಮಿಗಳು 55 ಗ್ರಾಂ ಮಾಂಗಲ್ಯ ಸರ, ನೆಕ್ಲೆಸ್ ಹಾಗೂ ಲಾಂಗ್ ಚೈನ್ ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಆರೋಪಿಗಳು ಹೆಲ್ಮೆಟ್ ಧರಿಸಿದ್ದರಿಂದ ಅವರ ಗುರುತು ಪತ್ತೆ ಮಾಡಲು ಸಾಧ್ಯವಾಗಿಲ್ಲ. ಕನಕಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published On - 6:04 pm, Fri, 20 November 20



