
ಮೈಸೂರು: ಮುಖದ ಮೇಲೆ ಮೊಬೈಲ್ ಟಾರ್ಚ್ ಬೆಳಕು ಬಿಟ್ಟಿದ್ದಕ್ಕೆ ಚಾಕುವಿನಿಂದ ಇರಿದು ಸ್ನೇಹಿತನ ಕೊಲೆ ಮಾಡಿರುವ ಘಟನೆ ಮೈಸೂರಿನ ಬಿ.ಎಂ.ಶ್ರೀ.ನಗರದಲ್ಲಿ ನಡೆದಿದೆ. ಸೋಮಶೇಖರ್ (36) ಮೃತ ದುರ್ದೈವಿ.
ಸೋಮಶೇಖರ್ ಮೊಬೈಲ್ ಟಾರ್ಚ್ ಬೆಳಕು ಬಿಟ್ಟಿದ್ದಕ್ಕೆ ರೌಡಿ ಶೀಟರ್ ಸತ್ಯ ಎಂಬಾತ ಕೊಲೆ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಆಗಸ್ಟ್ 24ರಂದು ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಚಾಕು ಇರಿತದಿಂದ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಆರೋಪಿ ರೌಡಿಶೀಟರ್ ಸತ್ಯ ಎಸ್ಕೇಪ್ ಆಗಿದ್ದಾನೆ. ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.