RR ನಗರ: ಮತ್ತೆ ವೋಟರ್ ಐ.ಡಿ. ಮಾಫಿಯಾ.. ಜನರಿಗೆ ಕರೆ ಮಾಡಿ ವೋಟರ್ ನಂಬರ್ ಕೇಳ್ತಿದ್ದಾರೆ!

| Updated By: ಸಾಧು ಶ್ರೀನಾಥ್​

Updated on: Oct 19, 2020 | 11:59 AM

ಬೆಂಗಳೂರು: ನವೆಂಬರ್ 3ರಂದು ಆರ್.ಆರ್. ನಗರ ಕ್ಷೇತ್ರದ ಬೈಎಲೆಕ್ಷನ್ ಹಿನ್ನೆಲೆಯಲ್ಲಿ ಮತದಾರರಿಗೆ ಕರೆ ಮಾಡಿ ವೋಟರ್‌ ಐಡಿ ನಂಬರ್ ಕೇಳ್ತಿದ್ದಾರೆ. ಈ ಬಗ್ಗೆ ಜನರಿಂದ ಸಾಕಷ್ಟು ದೂರುಗಳು ಬರುತ್ತಿವೆ ಎಂದು ಬಿಬಿಎಂಪಿ ಕಚೇರಿಯಲ್ಲಿ ಜಿಲ್ಲಾ ಚುನಾವಣಾಧಿಕಾರಿ ಮಂಜುನಾಥ ಪ್ರಸಾದ್ ಸುದ್ದಿಗೋಷ್ಠಿ ವೇಳೆ ತಿಳಿಸಿದ್ದಾರೆ. ಆರ್.ಆರ್. ನಗರದಲ್ಲಿ ಮತ್ತೆ ವೋಟರ್ ಐ.ಡಿ. ಮಾಫಿಯಾ ಶುರುವಾದಂತಿದೆ. ಏಕೆಂದರೆ ಕ್ಷೇತ್ರದ ಮತದಾರರಿಗೆ ಅನಾಮಧೇಯ ಕರೆಗಳು ಬರುತ್ತಿವೆಯಂತೆ. ಕರೆ ಮಾಡಿದವರು ನಿಮ್ಮ ವೋಟರ್ ಐ.ಡಿ. ನಂಬರ್ ಹೇಳಿ ಎಂದು ಪ್ರಾಣ ತಿಂತಿದ್ದಾರಂತೆ. ಈ […]

RR ನಗರ: ಮತ್ತೆ ವೋಟರ್ ಐ.ಡಿ. ಮಾಫಿಯಾ.. ಜನರಿಗೆ ಕರೆ ಮಾಡಿ ವೋಟರ್ ನಂಬರ್ ಕೇಳ್ತಿದ್ದಾರೆ!
Follow us on

ಬೆಂಗಳೂರು: ನವೆಂಬರ್ 3ರಂದು ಆರ್.ಆರ್. ನಗರ ಕ್ಷೇತ್ರದ ಬೈಎಲೆಕ್ಷನ್ ಹಿನ್ನೆಲೆಯಲ್ಲಿ ಮತದಾರರಿಗೆ ಕರೆ ಮಾಡಿ ವೋಟರ್‌ ಐಡಿ ನಂಬರ್ ಕೇಳ್ತಿದ್ದಾರೆ. ಈ ಬಗ್ಗೆ ಜನರಿಂದ ಸಾಕಷ್ಟು ದೂರುಗಳು ಬರುತ್ತಿವೆ ಎಂದು ಬಿಬಿಎಂಪಿ ಕಚೇರಿಯಲ್ಲಿ ಜಿಲ್ಲಾ ಚುನಾವಣಾಧಿಕಾರಿ ಮಂಜುನಾಥ ಪ್ರಸಾದ್ ಸುದ್ದಿಗೋಷ್ಠಿ ವೇಳೆ ತಿಳಿಸಿದ್ದಾರೆ.

ಆರ್.ಆರ್. ನಗರದಲ್ಲಿ ಮತ್ತೆ ವೋಟರ್ ಐ.ಡಿ. ಮಾಫಿಯಾ ಶುರುವಾದಂತಿದೆ. ಏಕೆಂದರೆ ಕ್ಷೇತ್ರದ ಮತದಾರರಿಗೆ ಅನಾಮಧೇಯ ಕರೆಗಳು ಬರುತ್ತಿವೆಯಂತೆ. ಕರೆ ಮಾಡಿದವರು ನಿಮ್ಮ ವೋಟರ್ ಐ.ಡಿ. ನಂಬರ್ ಹೇಳಿ ಎಂದು ಪ್ರಾಣ ತಿಂತಿದ್ದಾರಂತೆ. ಈ ಬಗ್ಗೆ ಮತದಾರರು ಜಿಲ್ಲಾ ಚುನಾವಣಾಧಿಕಾರಿಗೆ ಕರೆ ಮಾಡಿ ದೂರು ಹೇಳುತ್ತಿದ್ದಾರೆ.

ಈ ಬಗ್ಗೆ ಮಾತನಾಡಿದ ಮಂಜುನಾಥ ಪ್ರಸಾದ್, ಬೇರೆಯವರ ವೋಟರ್‌ ಐ.ಡಿ. ಮಾಹಿತಿ ಕೇಳುವುದು ಅಪರಾಧ. ಈ ಬಗ್ಗೆ ಪೊಲೀಸ್ ಇಲಾಖೆಗೆ ಮಾಹಿತಿಯನ್ನು ನೀಡಲಾಗಿದೆ. ಆರ್.ಆರ್. ನಗರದಲ್ಲಿ ಹಲವು ವರ್ಷಗಳಿಂದ ಅಧಿಕಾರಿಗಳು ಒಂದೇ ಜಾಗದಲ್ಲಿರುವ ಮಾಹಿತಿ ಇದೆ. ಹೀಗಾಗಿ ಕೆಲವರನ್ನು ವರ್ಗಾವಣೆ ಮಾಡಲಾಗಿದೆ ಎಂದು ಮಂಜುನಾಥ ಪ್ರಸಾದ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.