ಶಿವಮೊಗ್ಗ: ಸಾಗರದ ಅರಣ್ಯ ಇಲಾಖೆ ಕಚೇರಿಯ ಬೀಗ ಹೊಡೆದು ಕಳ್ಳತನ ಪ್ರಕರಣ ಟ್ವಿಸ್ಟ್ ಪಡೆದುಕೊಂಡಿದೆ. ಶ್ರೀಗಂಧ ಮರಗಳ ಕಳ್ಳತನ ಬಳಿಕ ನಾಪತ್ತೆಯಾಗಿದ್ದ ಕಾವಲುಗಾರ ನಾಗರಾಜ್ ಶವವಾಗಿ ಪತ್ತೆಯಾಗಿದ್ದಾನೆ.
ತಡರಾತ್ರಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಯ ಬೀಗ ಮುರಿದು ಉಗ್ರಾಣದಲ್ಲಿ ಸಂಗ್ರಹಿಸಿ ಇಟ್ಟಿದ್ದ ಸುಮಾರು 25 ಕೆ.ಜಿ ಶ್ರೀಗಂಧ ಕಳುವಾಗಿತ್ತು. ಘಟನೆಯ ಬಳಿಕ ಕಚೇರಿಯ ಕಾವಲುಗಾರ ನಾಗರಾಜ್ ನಾಪತ್ತೆಯಾಗಿದ್ದ. ಇಂದು ಕಾವಲುಗಾರ ನಾಗರಾಜ್ ಮೃತದೇಹ ಸಾಗರ ತಾಲೂಕಿನ ಐಗಿನ್ ಬೈಲ್ನ ನೇದರವಳ್ಳಿ ಬಸ್ ನಿಲ್ದಾಣದ ಬಳಿ ಪತ್ತೆಯಾಗಿದೆ.
ಹಾಗಾಗಿ ಪ್ರಕರಣ ಮತ್ತಷ್ಟು ತಿರುವು ಪಡೆದುಕೊಂಡಿದ್ದು, ಶ್ರೀಗಂಧ ಕಳ್ಳತನ ನಡೆಸಿರುವ ದುಷ್ಕರ್ಮಿಗಳೇ ಕಾವಲುಗಾರ ನಾಗರಾಜ್ನನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಸಾಗರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.