ಇಂದು ‘ದೆಹಲಿ ಭವಿಷ್ಯ’ ಬರೆಯಲಿದ್ದಾರೆ 1.5 ಕೋಟಿ ಮತದಾರರು!
ದೆಹಲಿ: ರಾಷ್ಟ್ರ ರಾಜಧಾನಿ ಚುನಾವಣೆಯ ಮತದಾನಕ್ಕೆ ಕೌಂಟ್ಡೌನ್ ಶುರುವಾಗಿದೆ. 70 ಸೀಟುಗಳಿಗೆ ನಡೆಯೋ ಚುನಾವಣೆಯಲ್ಲಿ 672 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಸುಮಾರು ಒಂದೂವರೆ ಕೋಟಿ ಮತದಾರರು ಅಭ್ಯರ್ಥಿಗಳ ಭವಿಷ್ಯ ಬರೆಯಲಿದ್ದು, ಇಂದು ಮತಪೆಟ್ಟಿಗೆ ಸೇರಲಿದೆ. ಕೇಜ್ರಿವಾಲ್, ಮೋದಿ ಪೈಕಿ ಯಾರಿಗೆ ಜೈಕಾರ? ರಾಷ್ಟ್ರ ರಾಜಧಾನಿ ಗದ್ದುಗಾಗಿ ಗುದ್ದಾಟ ಅಂತಿಮ ಹಂತ ತಲುಪಿದೆ. ದೆಹಲಿಯ 70 ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ. ಆಡಳಿತಾರೂಢ ಆಮ್ ಆದ್ಮಿ ಪಕ್ಷ ಮತ್ತೊಂದು ಚಾನ್ಸ್ ಕೊಡಿ ಅಂತಾ ದೆಹಲಿ ಜನರಲ್ಲಿ ಕೇಳಿಕೊಂಡಿದೆ. ಇತ್ತ ಬಿಜೆಪಿ, […]
ದೆಹಲಿ: ರಾಷ್ಟ್ರ ರಾಜಧಾನಿ ಚುನಾವಣೆಯ ಮತದಾನಕ್ಕೆ ಕೌಂಟ್ಡೌನ್ ಶುರುವಾಗಿದೆ. 70 ಸೀಟುಗಳಿಗೆ ನಡೆಯೋ ಚುನಾವಣೆಯಲ್ಲಿ 672 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಸುಮಾರು ಒಂದೂವರೆ ಕೋಟಿ ಮತದಾರರು ಅಭ್ಯರ್ಥಿಗಳ ಭವಿಷ್ಯ ಬರೆಯಲಿದ್ದು, ಇಂದು ಮತಪೆಟ್ಟಿಗೆ ಸೇರಲಿದೆ.
ಕೇಜ್ರಿವಾಲ್, ಮೋದಿ ಪೈಕಿ ಯಾರಿಗೆ ಜೈಕಾರ? ರಾಷ್ಟ್ರ ರಾಜಧಾನಿ ಗದ್ದುಗಾಗಿ ಗುದ್ದಾಟ ಅಂತಿಮ ಹಂತ ತಲುಪಿದೆ. ದೆಹಲಿಯ 70 ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ. ಆಡಳಿತಾರೂಢ ಆಮ್ ಆದ್ಮಿ ಪಕ್ಷ ಮತ್ತೊಂದು ಚಾನ್ಸ್ ಕೊಡಿ ಅಂತಾ ದೆಹಲಿ ಜನರಲ್ಲಿ ಕೇಳಿಕೊಂಡಿದೆ. ಇತ್ತ ಬಿಜೆಪಿ, ಕೇಜ್ರೀವಾಲ್ ಏನೂ ಮಾಡೇ ಇಲ್ಲ ಅಂತಾ ಮತಬೇಟೆ ನಡೆಸಿದೆ. ಹೀಗಾಗೇ ಸಿಎಂ ಅರವಿಂದ್ ಕೇಜ್ರಿವಾಲ್ ಹಾಗೂ ಪ್ರಧಾನಿ ಮೋದಿ ಮಧ್ಯೆ ರೋಚಕ ಕಾಳಗ ಏರ್ಪಟ್ಟಿದೆ.
ಈ ಮಿಂಚಿನ ಕಾದಾಟದಲ್ಲಿ ಗೆದ್ದು ದೆಹಲಿ ಗದ್ದುಗೆ ಏರೋಕೆ ಆಮ್ ಆದ್ಮಿ ಪಕ್ಷ ಹಾಗೂ ಬಿಜೆಪಿ ಹೋರಾಟ ನಡೆಸಿವೆ. ಈ ಎರಡೂ ಪಕ್ಷಗಳ ಕಾಳಗದ ಮಧ್ಯೆ ಕಾಂಗ್ರೆಸ್ ಅಸ್ತವ್ಯಸ್ತವಾಗಿದೆ. ಇಷ್ಟೆಲ್ಲಾ ಮಿಂಚಿನ ಕಾದಾಟವಿದ್ರೂ ಮತ್ತೊಮ್ಮೆ ಆಪ್ ಪಕ್ಷ ವಿಜಯಪತಾಕೆ ಹಾರಿಸಲಿದೆ. ಅದೇಗಂದ್ರೆ, ಚುನಾವಣಾ ಪೂರ್ವ ಸಮೀಕ್ಷೆಗಳು ಆಪ್ಗೆ ಬಹುಮತ ನೀಡಿವೆ.
ಆಪ್ಗೆ ಮುನ್ನಡೆ ಹೇಗೆ? ಕೇಜ್ರಿವಾಲ್ ದೆಹಲಿಯಲ್ಲಿ ಉತ್ತಮ ಆಡಳಿತ ಕೊಟ್ಟಿದ್ದಾರೆ. ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಕಾಲೋನಿಗಳ ಅಭಿವೃದ್ಧಿಗೆ ಕೇಜ್ರಿವಾಲ್ ಕ್ರಮ ಕೈಗೊಂಡಿದ್ದಾರೆ. ಉಚಿತ ವಿದ್ಯುತ್, ಉಚಿತ ನೀರು, ಮಹಿಳೆಯರಿಗೆ ಉಚಿತ ಬಸ್ ಸೌಲಭ್ಯ ಕಲ್ಪಿಸಿದ್ದಾರೆ. ಆಪ್ ಸರ್ಕಾರ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಟ್ಟಿದೆ. ಸರ್ಕಾರಿ ಶಾಲೆಗಳನ್ನ ಆಪ್ ಸರ್ಕಾರ ಆಧುನೀಕರಣಗೊಳಿಸಿದೆ. ಆಪ್ ನಾಯಕರು ಪ್ರಚಾರದ ವೇಳೆ ಕೇವಲ ಅಭಿವೃದ್ಧಿ ಮಂತ್ರವನ್ನೇ ಜಪಿಸಿದ್ರು. ತಮ್ಮ ಸರ್ಕಾರದ ಸಾಧನೆಯನ್ನ ಜನರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ರು. ಇದ್ರಿಂದ ಭಾವನಾತ್ಮಕವಾಗಿ ದೆಹಲಿ ಜನತೆಗೆ ಆಪ್ ಹತ್ತಿರವಾಗಿದೆ.
ಮೋದಿಗೆ ಹಿನ್ನಡೆಯಾಗುವುದು ಎಲ್ಲಿ? ಈ ಬಾರಿ ಪ್ರಚಾರದ ವೇಳೆ ದೆಹಲಿಯಲ್ಲಿ ಪ್ರಧಾನಿ ಮೋದಿ ಹೆಚ್ಚು ಱಲಿ ನಡೆಸಲಿಲ್ಲ. ಬಿಜೆಪಿ ಸಿಎಂ ಅಭ್ಯರ್ಥಿಯನ್ನ ಘೋಷಿಸಲಿಲ್ಲ. ಬಿಜೆಪಿ ಅಭಿವೃದ್ಧಿ ವಿಚಾರವನ್ನ ಮುಂದಿಟ್ಟುಕೊಂಡು ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ. ಆರ್ಟಿಕಲ್ 370, ಸಿಎಎ, ಪಾಕಿಸ್ತಾನ, ಶಾಹೀನ್ಬಾಗ್ ವಿಚಾರಗಳನ್ನ ಪ್ರಚಾರದ ವೇಳೆ ಪ್ರಸ್ತಾಪಿಸಿತ್ತು. ಈ ವಿಚಾರಗಳು ಜನರ ಮತಗೆಲ್ಲೋ ಸಾಧ್ಯತೆ ಕಡಿಮೆ ಇದೆ. ಇನ್ನು ಬಿಜೆಪಿ ನಾಯಕರು ದೆಹಲಿ ಸಿಎಂ ಕೇಜ್ರಿವಾಲ್ ವಿರುದ್ಧ ವೈಯಕ್ತಿಕ ಮಟ್ಟದ ಟೀಕೆ ಮಾಡಿದ್ರು. ಬಿಜೆಪಿಯ ನಾಯಕರು ಕೇಜ್ರಿವಾಲ್ರನ್ನ ‘ಭಯೋತ್ಪಾದಕ’ ಅಂತಾ ಜರಿದಿದ್ರು. ಇಂಥಾ ವಿವಾದಾತ್ಮಕ ಹೇಳಿಕೆಯಿಂದ ಬಿಜೆಪಿ ಜನರ ವಿಶ್ವಾಸ ಕಳೆದುಕೊಂಡಿರಬಹುದು.
ಜಾಮಿಯಾ, ಜೆಎನ್ಯು ಸೇರಿದಂತೆ ಕಾಲೇಜು ಗಲಾಟೆಯಿಂದಲೂ ಹೊಡೆತ ಬಿದ್ದಿರಬಹುದು. ಈ ಎಲ್ಲಾ ಅಂಶಗಳನ್ನಾಧರಿಸಿ ಬಿಜೆಪಿಗೆ ಹಿನ್ನಡೆ ಆಗಬಹುದು ಎನ್ನಲಾಗ್ತಿದೆ. ಒಟ್ನಲ್ಲಿ, ಇಂದು ದೆಹಲಿ ವಿಧಾನಸಭೆಗೆ ಚುನಾವಣೆ ನಡೆಯುತ್ತಿದ್ದು, ಮತದಾರ ಅಭ್ಯರ್ಥಿಗಳ ಭವಿಷ್ಯ ಬರೆಯಲಿದ್ದಾರೆ. ಆದ್ರೆ, ವಿಜಯಲಕ್ಷ್ಮೀ ಯಾರಿಗೆ ಒಲಿಯುತ್ತಾಳೆ ಅನ್ನೋದು ಫೆಬ್ರವರಿ 11ರಂದು ಗೊತ್ತಾಗಲಿದೆ.
Published On - 7:25 am, Sat, 8 February 20