ಚಿಕ್ಕಮಗಳೂರಿನಲ್ಲಿ ಬೃಹತ್ ಸಂಕೀರ್ತನಾ ಯಾತ್ರೆ, ಹರಿದು ಬಂದ ಜನಸಾಗರ..
ಭಜರಂಗ ದಳ ಹಾಗೂ ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ನಡೆಯುವ ದತ್ತ ಜಯಂತಿಯ ಅಂಗವಾಗಿ ನಗರದಲ್ಲಿ ಸೋಮವಾರ ಬೃಹತ್ ಸಂಕೀರ್ತನಾ ಯಾತ್ರೆ ನಡೆಯಿತು. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಭಾಗಿಯಾಗಿದ್ದರು.

ಸಂಕೀರ್ತನಾ ಯಾತ್ರೆ
ಚಿಕ್ಕಮಗಳೂರು: ಭಜರಂಗ ದಳ ಹಾಗೂ ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ನಡೆಯುವ ದತ್ತ ಜಯಂತಿಯ ಅಂಗವಾಗಿ ನಗರದಲ್ಲಿ ಸೋಮವಾರ ಬೃಹತ್ ಸಂಕೀರ್ತನಾ ಯಾತ್ರೆ ನಡೆಯಿತು. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಭಾಗಿಯಾಗಿದ್ದರು.
ಭಜರಂಗ ದಳ ಹಾಗೂ ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ನಡೆಯುವ ದತ್ತ ಜಯಂತಿಯ ಪ್ರಯುಕ್ತ ಕಾಮಧೇನು ಗಣಪತಿ ದೇಗುಲದಿಂದ ಮೆರವಣಿಗೆ ಆರಂಭವಾಗಿ ಆಜಾದ್ ವೃತ್ತದವರೆಗೆ ಸಂಕೀರ್ತನಾ ಯಾತ್ರೆ ಸಾಗಿತು. ಸಾವಿರಾರು ದತ್ತಮಾಲಾಧಾರಿಗಳು ಭಾಗಿಯಾಗಿದ್ದರು. ಯಾತ್ರೆ ವೀಕ್ಷಿಸಲು ರಸ್ತೆಯುದ್ದಕ್ಕೂ ಜನರು ನಿಂತಿದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಹಾಕಲಾಗಿತ್ತು. 1,500ಕ್ಕೂ ಹೆಚ್ಚು ಪೊಲೀಸರನ್ನು ನಿಯೋಸಿಸಲಾಗಿತ್ತು.

ಚಿಕ್ಕಮಗಳೂರಲ್ಲಿ ದತ್ತಜಯಂತಿ ಸಂಭ್ರಮ, ಕೇಸರಿನಾಡಾಗಿ ಕಂಗೊಳಿಸಿದ ಕಾಫಿನಾಡು !




