ಬೆಂಗಳೂರು: ಟರ್ಮ್ ಫೀಸ್ ಕಟ್ಟದಿದ್ದರೆ ಆನ್ಲೈನ್ ಕ್ಲಾಸ್ ನಡೆಸುವುದಿಲ್ಲ ಎಂದು ಖಾಸಗಿ ಶಾಲೆಯೊಂದು ಪೋಷಕರಿಗೆ ಖಡಕ್ ಸೂಚನೆ ನೀಡಿರುವ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ.
ನಗರದ ಉತ್ತರ ಭಾಗದಲ್ಲಿರುವ ಈ ಪ್ರತಿಷ್ಠಿತ ಖಾಸಗಿ ಶಾಲೆ ಆನ್ಲೈನ್ ಕ್ಲಾಸ್ಗೆ ಟರ್ಮ್ ಫೀಸ್ ಕಟ್ಟಲೇಬೇಕು. ಫೀಸ್ ಕಟ್ಟಲು ವಿಳಂಬವಾದ್ರೆ ಆನ್ಲೈನ್ ಕ್ಲಾಸ್ ಬ್ಲಾಕ್ ಮಾಡುತ್ತೇವೆ ಎಂದು ತಾಕೀತು ಮಾಡಿದೆಯಂತೆ.
ಜೊತೆಗೆ, ಈ ಬಗ್ಗೆ ಅಧಿಕೃತ ನೋಟಿಸ್ ನೀಡೋದಿಲ್ಲ. ಸಿಂಪಲ್ ಆಗಿ ಆನ್ಲೈನ್ ಕ್ಲಾಸ್ ವೆಬ್ ಬ್ಲಾಕ್ ಮಾಡುತ್ತೇವೆ ಎಂದು ಹೇಳಿದೆಯಂತೆ. ಇದರಿಂದ ವಿದ್ಯಾರ್ಥಿಗಳ ಕಡ್ಡಾಯ ಹಾಜರಾತಿಯ ಮೇಲೆ ಭಾರಿ ಎಫೆಕ್ಟ್ ಬೀಳಲಿದೆ. ಹಾಗಾಗಿ, ಶಾಲೆಯ ನಡೆ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Published On - 12:36 pm, Sun, 26 July 20