
ಬಳ್ಳಾರಿ: ಜಾತ್ರೆ ವೇಳೆ ದೇವರ ತೇರು ಎಳೆಯಲು ಜನರು ಕಾತರದಿಂದ ಎದುರು ನೋಡುವುದನ್ನ ಕಂಡಿದ್ದೇವೆ. ತೇರು ಎಳೆದು ಸಂಭ್ರಮಿಸುವುದನ್ನ ಸಹ ನೋಡಿದ್ದೇವೆ. ಅಂತೆಯೇ, ದೇವರ ಮಡಿತೇರು ಎಳೆಯುವ ವೇಳೆ ಅದು ಮಗುಚಿಬಿದ್ದು ಏಳು ಜನರಿಗೆ ಗಾಯವಾಗಿರುವ ಘಟನೆ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಕೊತ್ತಚಿಂತ ಗ್ರಾಮದಲ್ಲಿ ನಡೆದಿದೆ.
ಹನುಮಂತಾವಧೂತರ ಆರಾಧನಾ ಮಹೋತ್ಸವದ ಪ್ರಯುಕ್ತವಾಗಿ ಗ್ರಾಮಸ್ಥರು ದೇವರ ಮಡಿತೇರು ಎಳೆಯಲು ಮುಂದಾದರು. ಖುಷಿಯಿಂದ ಚೀರಾಡುತ್ತಾ, ಕೂಗಾಡುತ್ತಾ ತೇರನ್ನು ಸ್ವಲ್ಪ ಜೋಶ್ನಲ್ಲೇ ಎಳೆದರು. ಈ ವೇಳೆ ತೇರಿನ ಕೆಳಭಾಗ ಮುರಿದು ಭಕ್ತರ ಮೇಲೆ ಮುಗುಚಿಬಿದ್ದಿದೆ. ಘಟನೆಯಲ್ಲಿ ಗಾಯಗೊಂಡವರನ್ನು ವಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
Published On - 12:32 pm, Tue, 8 September 20