ಕನ್ಫರ್ಮ್​.. ಫೆಬ್ರವರಿ 22ರಂದು ಕಾಂಗ್ರೆಸ್​ಗೆ ಸೇರ್ಪಡೆಯಾಗಲಿರುವ ಶರತ್ ಬಚ್ಚೇಗೌಡ

Sharath bachegowda: ಎಂಟಿಬಿ ನಾಗರಾಜ್ ಕಾಂಗ್ರೆಸ್ ತೊರೆದು ಬಿಜೆಪಿಗೆ ಆಗಮಿಸಿದ ಹಿನ್ನಲೆ ಮುನಿಸಿಕೊಂಡು ಶರತ್ ಪಕ್ಷ ತ್ಯಜಿಸಿದ್ದರು. ಹಿಂದೆ ಬಿಜೆಪಿ ಯುವ ಘಟಕದ ಅಧ್ಯಕ್ಷರಾಗಿದ್ದ ಶರತ್ ಕೆಪಿಸಿಸಿ ಕಚೇರಿಯಲ್ಲಿ ನಡೆಯುವ ಸಮಾರಂಭದಲ್ಲಿ ಕಾಂಗ್ರೆಸ್​ಗೆ ಸೇರ್ಪಡೆಯಾಗಲಿದ್ದಾರೆ.

  • TV9 Web Team
  • Published On - 11:59 AM, 17 Feb 2021
ಕನ್ಫರ್ಮ್​.. ಫೆಬ್ರವರಿ 22ರಂದು ಕಾಂಗ್ರೆಸ್​ಗೆ ಸೇರ್ಪಡೆಯಾಗಲಿರುವ ಶರತ್ ಬಚ್ಚೇಗೌಡ
ಶರತ್ ಬಚ್ಚೇಗೌಡ

ಬೆಂಗಳೂರು: ಹೊಸಕೋಟೆ ಕ್ಷೇತ್ರದ ಪಕ್ಷೇತರ ಶಾಸಕರಾಗಿರುವ ಶರತ್ ಬಚ್ಚೇಗೌಡ ಫೆಬ್ರವರಿ 22ರಂದು ಕಾಂಗ್ರೆಸ್ಗೆ ಸೇರ್ಪಡೆಯಾಗಲಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಸಮ್ಮುಖದಲ್ಲಿ ಸೇರ್ಪಡೆಯಾಗುತ್ತಾರೆ ಎಂದು ತಿಳಿದುಬಂದಿದೆ.

ಸಚಿವ ಎಂಟಿಬಿ ನಾಗರಾಜ್ ವಿರುದ್ದ ಸ್ಪರ್ಧಿಸಿ ಶರತ್ ಬಚ್ಚೇಗೌಡ ಗೆದ್ದಿದ್ದರು. ಎಂಟಿಬಿ ನಾಗರಾಜ್ ಕಾಂಗ್ರೆಸ್ ತೊರೆದು ಬಿಜೆಪಿಗೆ ಆಗಮಿಸಿದ ಹಿನ್ನಲೆ ಮುನಿಸಿಕೊಂಡು ಶರತ್ ಪಕ್ಷ ತ್ಯಜಿಸಿದ್ದರು. ಹಿಂದೆ ಬಿಜೆಪಿ ಯುವ ಘಟಕದ ಅಧ್ಯಕ್ಷರಾಗಿದ್ದ ಶರತ್ ಕೆಪಿಸಿಸಿ ಕಚೇರಿಯಲ್ಲಿ ನಡೆಯುವ ಸಮಾರಂಭದಲ್ಲಿ ಕಾಂಗ್ರೆಸ್​ಗೆ ಸೇರ್ಪಡೆಯಾಗಲಿದ್ದಾರೆ.

ಇದನ್ನೂ ಓದಿ: ಏ ಹಿಂದಿ ಮೇ ನಕೊ: ದೆಹಲಿಯಲ್ಲೂ ಹಿಂದಿಯಲ್ಲಿ ಮಾತಾಡಲ್ಲ ಎಂದ ಸಿದ್ದರಾಮಯ್ಯ