ಮನೆಗೆ ಹೋಗಲು ಬಿಡ್ತಿಲ್ಲ, ಸಂಬಳ ಕೊಡ್ತಿಲ್ಲ.. ನಟ ನೀನಾಸಂ ಅಶ್ವತ್ಥ್ ವಿರುದ್ಧ ಕೆಲಸಗಾರರಿಂದ ಮತ್ತೊಂದು ಆರೋಪ
Ashwath Ninasam | ಸ್ಯಾಂಡಲ್ ವುಡ್ ನಟ ನೀನಾಸಂ ಅಶ್ವತ್ಥ್ ವಿರುದ್ಧ ಆರೋಪ ಕೇಳಿ ಬಂದಿದೆ. ಅಶ್ವತ್ಥ್ ಬಳಿ ಕೆಲಸ ಮಾಡುತ್ತಿದ್ದ ಕೆಲಸಗಾರರೇ ನಟನ ವಿರುದ್ಧ ಆರೋಪ ಮಾಡಿದ್ದಾರೆ. ಸದ್ಯ ತಮ್ಮ ವಿರುದ್ಧದ ಆರೋಪಕ್ಕೆ ನೀನಾಸಂ ಅಶ್ವತ್ಥ್ ಸ್ಪಷ್ಟನೆ ನೀಡಿದ್ದಾರೆ.
ಮಂಡ್ಯ: ಸ್ಯಾಂಡಲ್ ವುಡ್ ನಟ ನೀನಾಸಂ ಅಶ್ವತ್ಥ್ ವಿರುದ್ಧ ಆರೋಪ ಕೇಳಿ ಬಂದಿದೆ. ಅಶ್ವತ್ಥ್ ಬಳಿ ಕೆಲಸ ಮಾಡುತ್ತಿದ್ದ ಕೆಲಸಗಾರರೇ ನಟನ ವಿರುದ್ಧ ಆರೋಪ ಮಾಡಿದ್ದಾರೆ. ಸದ್ಯ ತಮ್ಮ ವಿರುದ್ಧದ ಆರೋಪಕ್ಕೆ ನೀನಾಸಂ ಅಶ್ವತ್ಥ್ ಸ್ಪಷ್ಟನೆ ನೀಡಿದ್ದಾರೆ. ನಾನು ಕೆಲಸಗಾರರಿಗೆ ಸರಿಯಾಗಿ ಸಂಬಳ ನೀಡುತ್ತಿದ್ದೇನೆ. ಸದ್ಯ ಫಾರ್ಮ್‌ಹೌಸ್‌ನಲ್ಲಿ ಬೇರೆ ಕೆಲಸಗಾರರು ಇಲ್ಲ. ಹೀಗಾಗಿ ಬೇರೆ ಕೆಲಸಗಾರರು ಬರುವವರೆಗೆ ಇರಿ ಎಂದಿದ್ದೆ. ಅವರನ್ನು ಊರಿಗೆ ಹೋಗಬೇಡಿ ಎಂದು ನಾನು ಹೇಳಿಲ್ಲ ಎಂದು ಟಿವಿ9ಗೆ ನಟ ನೀನಾಸಂ ಅಶ್ವತ್ಥ್ ತಿಳಿಸಿದ್ದಾರೆ.
ನಟ ಅಶ್ವತ್ಥ್ ವಿರುದ್ಧ ಕೇಳಿ ಬರುತ್ತಿರುವ ಆರೋಪವೇನು? ಮಂಡ್ಯ ಜಿಲ್ಲೆಯ ಯಾಚನಹಳ್ಳಿ ಫಾರ್ಮ್ ಹೌಸ್ನಲ್ಲಿ ಕೆಲಸಕ್ಕೆ ಸೇರಿರೋ ಎರಡು ಕುಟುಂಬಗಳು ಅಶ್ವತ್ಥ್ ವಿರುದ್ಧ ಆರೋಪ ಮಾಡಿವೆ. ನಮಗೆ ಸರಿಯಾಗಿ ಸಂಬಳ ಕೊಡುತ್ತಿಲ್ಲ. ಹಾಗೂ ನಮ್ಮ ಊರುಗಳಿಗೆ ಹೋಗಲು ಬಿಡ್ತಿಲ್ಲ ಎಂದು ಕೆಲಸಗಾರರು ಅಶ್ವತ್ಥ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಕಳೆದ ಮೂರು ತಿಂಗಳಿಂದ ಫಾರ್ಮ್ ಹೌಸ್ನಲ್ಲಿ ಕೆಲಸಗಾರರು ಕೆಲಸ ಮಾಡುತ್ತಿದ್ದಾರಂತೆ. ಆದ್ರೆ ಈ ಆರೋಪಕ್ಕೆ ನೀನಾಸಂ ಅಶ್ವತ್ಥ್ ಸ್ಪಷ್ಟನೆ ನೀಡಿದ್ದು ಆರೋಪವನ್ನು ತಳ್ಳಿ ಹಾಕಿದ್ದಾರೆ. ಇನ್ನು 2018ರಲ್ಲೂ ಕೂಡ ಅಶ್ವತ್ಥ್ ವಿರುದ್ಧ ಆರೋಪ ಕೇಳಿ ಬಂದಿತ್ತು. ಅವರು ತಮ್ಮ ಸ್ನೇಹಿತನಿಗೆ 18 ಲಕ್ಷ ವಂಚನೆ ಮಾಡಿದ್ದಾರೆ ಎಂಬ ಬಗ್ಗೆ ಪೊಲೀಸ್ ಠಾನೆಯಲ್ಲಿ ದೂರು ದಾಖಲಾಗಿತ್ತು.
ಇದನ್ನೂ ಓದಿ: Women Empowerment; ನಾನೆಂಬ ಪರಿಮಳದ ಹಾದಿಯಲಿ: ಅದ್ಯಾವ್ದೋ ನಾಟಕ್ ಸಾಲಿಗೆ ಸೇರ್ಕೊಂಡಾಳಂತs ಗಂಡಸರ ಜೊತಿ ಕುಣ್ಯಾಕ