ಶ್ರಾವಣ ಮಾಸದಲ್ಲಿ ರಾಜಸ್ತಾನದ ಪರಶುರಾಮ್ ಮಹಾದೇವ್ ದೇವಸ್ಥಾನದಲ್ಲಿ ಭಕ್ತರಿಂದ ವಿಶಿಷ್ಟ ರೀತಿಯ ಪೂಜೆ
ನಿಮಗೆ ಆಶ್ಚರ್ಯವಾಗಬಹುದು. ಶ್ರಾವಣ ಮಾಸ ಅಂತ್ಯಗೊಳ್ಳುವವರೆಗೆ ಇಲ್ಲಿ ಪ್ರತಿದಿನ 7,000 ಶಿವಲಿಂಗಗಳನ್ನು ತಯಾರಿಸಿ ಪೂಜೆ ಮಾಡಲಾಗುತ್ತದೆ. ಮಣ್ಣಿನಿಂದ ಲಿಂಗಗಳನ್ನು ನಿರ್ಮಿಸಿ ಪೂಜೆ ಸಲ್ಲಿಸಿದರೆ ಇಷ್ಟಾರ್ಥ ನೆರವೇರುತ್ತದೆ ಎಂದು ಹೇಳಲಾಗುತ್ತದೆ.
ರಾಜಸ್ತಾನದ ಪಾಲಿ ಮತ್ತು ರಾಜ್ಸಮಂಡ್ ಜಿಲ್ಲೆಗಳ ಗಡಿಭಾಗದಲ್ಲಿ ಪರಶುರಾಮ್ ಮಹಾದೇವ್ ದೇವಸ್ಥಾನವಿದೆ. ಶ್ರಾವಣ ಮಾಸದಲ್ಲಿ ಶಿವನ ಭಕ್ತರು ಈ ದೇವಾಲಯಲ್ಲಿ ಒಂದು ವಿಶಿಷ್ಟವಾದ ರೀತಿಯಲ್ಲಿ ಶಿವಾರಾಧನೆ ಮಾಡುತ್ತಾರೆ. ಹಾಗೆ ನೋಡಿದರೆ ಶ್ರಾವಣದಲ್ಲಿ ಎಲ್ಲ ಶಿವಾಲಯಗಳಲ್ಲಿ ಪೂಜೆ-ಪುನಸ್ಕಾರಗಳು ನಡೆಯುತ್ತವೆ. ಆದರೆ ಪರಶುರಾಮ್ ಮಹಾದೇವ್ ದೇವಸ್ಥಾನಕ್ಕೆ ಬರುವ ಭಕ್ತರು ಭಿನ್ನವಾದ ರೀತಿಯಲ್ಲಿ ತಮ್ಮ ಹರಕೆ ತೀರಿಸುತ್ತಾರೆ.
ನಿಮಗೆ ಆಶ್ಚರ್ಯವಾಗಬಹುದು. ಶ್ರಾವಣ ಮಾಸ ಅಂತ್ಯಗೊಳ್ಳುವವರೆಗೆ ಇಲ್ಲಿ ಪ್ರತಿದಿನ 7,000 ಶಿವಲಿಂಗಗಳನ್ನು ತಯಾರಿಸಿ ಪೂಜೆ ಮಾಡಲಾಗುತ್ತದೆ. ಮಣ್ಣಿನಿಂದ ಲಿಂಗಗಳನ್ನು ನಿರ್ಮಿಸಿ ಪೂಜೆ ಸಲ್ಲಿಸಿದರೆ ಇಷ್ಟಾರ್ಥ ನೆರವೇರುತ್ತದೆ ಎಂದು ಹೇಳಲಾಗುತ್ತದೆ. ಇಲ್ಲಿಗೆ ಆಗಮಿಸುವ ಭಕ್ತರು ಕೈಯಾರೆ ಲಿಂಗ ನಿರ್ಮಿಸಿ ಅದನ್ನು ಶಿವನಿಗೆ ಅರ್ಪಿಸುವ ಹರಕೆ ಹೊತ್ತಿರುತ್ತಾರೆ. ಮಣ್ಣಿನಿಂದ ಲಿಂಗವನ್ನು ತಯಾರಿಸಿ ಶಿವನಿಗೆ ಅರ್ಪಿಸಿದರೆ ಸಂಕಷ್ಟ ಪರಿಹಾರವಾಗುತ್ತದೆ ಎಂದು ಶಿವಪುರಾಣದಲ್ಲೂ ಹೇಳಲಾಗಿದೆ.
ಇಲ್ಲಿನ ನದಿತೀರದಲ್ಲಿನ ಮಣ್ಣಿಗೆ ಬೆಣ್ಣೆ ಮತ್ತು ಹಾಲು ಬೆರೆಸಿ ಮೂರು ಇಂಚಿನ ಲಿಂಗ ತಯಾರಿಸಿ ಅದಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ಅಂದಹಾಗೆ, ಇಲ್ಲಿ ಶಿವನ ದೇವಾಲಯ ಗುಹೆಯಲ್ಲಿದೆ. ಪ್ರತಿವರ್ಷ ಈ ದೇವಾಲಯಕ್ಕೆ 9 ಲಕ್ಷಕ್ಕಿಂತ ಹೆಚ್ಚು ಭಕ್ತರು ಭೇಟಿ ನೀಡುತ್ತಾರೆ ಅಂತ ದೇವಸ್ಥಾನದ ಟ್ರಸ್ಟ್ನವರು ಹೇಳುತ್ತಾರೆ.
ಇದನ್ನೂ ಓದಿ: Viral Video: ಗಾಳಿಯಲ್ಲಿ ತೇಲುತ್ತಿರುವ ಮಗುವನ್ನು ಕಂಡು ಗಾಬರಿಗೊಂಡ ತಾಯಿ! ಮುಂದೇನಾಯ್ತು? ವಿಡಿಯೋ ನೋಡಿ