Viral Video: ಗಾಳಿಯಲ್ಲಿ ತೇಲುತ್ತಿರುವ ಮಗುವನ್ನು ಕಂಡು ಗಾಬರಿಗೊಂಡ ತಾಯಿ! ಮುಂದೇನಾಯ್ತು? ವಿಡಿಯೋ ನೋಡಿ

ಮಗುವಿನ ತಾಯಿ ಒಮ್ಮೆಲೆ ಭಯಗೊಂಡು ಓಡಿ ಬಂದಿದ್ದಾರೆ. ಮಗುವನ್ನು ಹಿಡಿಯಲು ಪ್ರಯತ್ನಿಸಿದ್ದಾರೆ. ಬಳಿಕ ತಾಯಿಯ ರಿಯಾಕ್ಷನ್ ಹೇಗಿತ್ತು! ನೀವೇ ನೋಡಿ..

Viral Video: ಗಾಳಿಯಲ್ಲಿ ತೇಲುತ್ತಿರುವ ಮಗುವನ್ನು ಕಂಡು ಗಾಬರಿಗೊಂಡ ತಾಯಿ! ಮುಂದೇನಾಯ್ತು? ವಿಡಿಯೋ ನೋಡಿ
ಗಾಳಿಯಲ್ಲಿ ತೇಲುತ್ತಿರುವ ಮಗುವನ್ನು ಕಂಡು ಗಾಬರಿಗೊಂಡ ತಾಯಿ!
Follow us
TV9 Web
| Updated By: shruti hegde

Updated on:Aug 10, 2021 | 8:43 AM

ರಾತ್ರಿ ಕಳೆದು ಬೆಳಗಾಗುವುದರೊಳಗೆ ಅದೆಷ್ಟೋ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತವೆ. ಕೆಲವು ಸ್ಪೂರ್ತಿ ತುಂಬುವ ವಿಡಿಯೋಗಳಾಗಿದ್ದರೆ, ಇನ್ನು ಕೆಲವು ಎಚ್ಚರಿಕೆಯ ಸಂದೇಶವನ್ನೂ ಸಾರುತ್ತದೆ. ಕೆಲವು ತಮಾಷೆಯ ವಿಡಿಯೋಗಳೂ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯುತ್ತದೆ. ಇದೀಗ ವೈರಲ್ ಆದ ವಿಡಿಯೋ ಎಚ್ಚರಿಕೆಯ ಸಂದೇಶವನ್ನು ಸಾರುತ್ತಿದೆ. ವಿಡಿಯೋ ಇದೀಗ ಸಕತ್ ವೈರಲ್ ಆಗಿದೆ.

ಗಾಳಿಯಲ್ಲಿ ಮಗು ತೇಲುತ್ತಿರುವುದನ್ನು ನೋಡಿದ ಮಹಿಳೆಯ ಪ್ರತಿಕ್ರಿಯೆ ವೈರಲ್ ಆಗಿದೆ. ಗಾಳಿಯಲ್ಲಿ ಮಗು ತೇಲುತ್ತಿರುವ ದೃಶ್ಯ ನೋಡಿದಾಕ್ಷಣ ಒಮ್ಮೆಲೆ ಭಯವಾಗುವುದಂತೂ ಸತ್ಯ. ಮಗುವಿನ ತಾಯಿ ಒಮ್ಮೆಲೆ ಭಯಗೊಂಡು ಓಡಿ ಬಂದಿದ್ದಾರೆ. ಮಗುವನ್ನು ಹಿಡಿಯಲು ಪ್ರಯತ್ನಿಸಿದ್ದಾರೆ. ಬಳಿಕ ತಾಯಿಯ ರಿಯಾಕ್ಷನ್ ಹೇಗಿತ್ತು! ನೀವೇ ನೋಡಿ..

ವಿಡಿಯೋದಲ್ಲಿ ಗಮನಿಸುವಂತೆ ಗಾಳಿಯಲ್ಲಿ ಮಗು ತೇಲುತ್ತಿದ್ದಂತೆ ಅನಿಸುತ್ತದೆ. ಇದನ್ನು ಗಮನಿಸಿದ ತಾಯಿ ಓಡಿ ಬಂದು ಮಗುವನ್ನು ಹಿಡಿಯಲು ಪ್ರಯತ್ನಿಸುತ್ತಾರೆ. ತಾಯು ಉದ್ವೇಗಕ್ಕೆ ಒಳಗಾಗುತ್ತಾರೆ. ಪಕ್ಕದಲ್ಲಿದ್ದ ತಂದೆ ಮಗುವನ್ನು ಹಿಡಿದುಕೊಂಡಿದ್ದಾರೆ ಎಂಬ ವಿಷಯ ತಿಳಿಯುತ್ತಿದ್ದಂತೆ ಸಮಾಧಾನಗೊಳ್ಳುತ್ತಾರೆ. ತಾಯಿಯ ಪ್ರತಿಕ್ರಿಯೆ ಇದೀಗ ವೈರಲ್​ ಆಗಿದೆ.

ಟ್ವಿಟರ್​ನಲ್ಲಿ ವಿಡಿಯೋವನ್ನು ಮೊದಲಿಗೆ ಹರಿಬಿಡಲಾಗಿದೆ. ಬಳಿಕ ಇತರ ಸಾಮಾಜಿಕ ಜಾಲತಾಣದ ವೇದಿಕೆಗಳಲ್ಲಿ ಹರಿದಾಡುತ್ತಿದೆ. 8 ಸೆಕೆಂಡ್ಸ್​ಗಳಿರುವ ಈ ವಿಡಿಯೋ ಕ್ಲಿಪ್​ನಲ್ಲಿ ಮಹಿಳೆಯು, ಉದ್ವೇಗದಿಂದ ಮಗುವಿನ ಕಡೆಗೆ ಓಡುತ್ತಿರುವ ದೃಶ್ಯವಿದೆ. ಫೋಟೋ ತೆಗೆಯಲು ಮಗುವನ್ನು ಅಲಂಕಾರಗೊಳಿಸಲಾಗಿದೆ ಎಂಬ ಊಹೆಯಿದೆ. ಆದರೆ ಬಲೂನುಗಳನ್ನು ಕಟ್ಟಿ ಮಗುವವನ್ನು ಕಟ್ಟಿ ಬಿಟ್ಟರೆ ಅನಾಹುತಗಳು ಸಂಭವಿಸಬಹುದು ಎಂಬ ಎಚ್ಚರಿಕೆಯ ಸಂದೇಶವೂ ಇದರಲ್ಲಿದೆ. ವಿಡಿಯೋ ಇದೀಗ ಸಕತ್ ವೈರಲ್ ಆಗಿದ್ದು ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:

Viral News: ತಾಳಿ ಕಟ್ಟುವ ಹೊತ್ತಲ್ಲಿ ಮದುವೆ ಬೇಡವೆಂದ ವಧು; ಕಾರಣ ಕೇಳಿದ್ರೆ ಶಾಕ್ ಆಗ್ತೀರ

New Book : ಅಚ್ಚಿಗೂ ಮೊದಲು ; ಆಕೆಯ ಕಣ್ಣಿಂದ ತೋಳುಗಳಿಂದ ಬಿಡಿಸಿಕೊಳ್ಳುವ ಶಕ್ತಿ ಎಲ್ಲಿಂದ ಪಡೆದೆ ನಾನು?

(Mother seeing a flying baby reaction goes viral in social media)

Published On - 8:41 am, Tue, 10 August 21