15 ಲಕ್ಷ ಮೌಲ್ಯ ಚಿನ್ನದ ಬ್ಯಾಗ್ ವಾಪಸ್ ಮಾಡಿದ PSI, ಮೆಚ್ಚುಗೆಗಳ ಮಹಾಪೂರ!

|

Updated on: May 26, 2020 | 5:26 PM

ಪೊಲೀಸ್ ಇಲಾಖೆ ಅಂದ್ರೆ ಶಿಸ್ತು ಮತ್ತು ಗೌರವಗಳ ಪ್ರತೀಕ. ಇದಕ್ಕೆ ಪ್ರಾಮಾಣಿಕತೆ ಸೇರಿಬಿಟ್ಟರೆ.. ಚಿನ್ನಕ್ಕೆ ಪುಟವಿಟ್ಟಂತೆ ಸರ್ವಜ್ಞ ಅನ್ನಬಹುದು ಅಪರೂಪವೇ ಆದರೂ ಆಗಾಗ ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳಿಂದ ಇಲಾಖೆಗೆ ಘನತೆ ಹೆಚ್ಚುತ್ತಲೇ ಇರುತ್ತದೆ. ತಾಜಾ ಉದಾಹರಣೆಯಲ್ಲಿ.. ಶಿವಮೊಗ್ಗ ತಾಲೂಕಿನ ಕುಂಸಿ ಪೊಲೀಸ್ ಠಾಣೆಯ PSI ನವೀನ ಮಠಪತಿ ಅವರ ಕೈಗೆ 15 ಲಕ್ಷ ರೂಪಾಯಿ ಬೆಳೆಬಾಳುವ ಚಿನ್ನಾಭರಣ ಸಿಕ್ಕಿದೆ. ಆದ್ರೆ ಚಿನ್ನಾಭರಣ ಕಳೆದುಕೊಂಡವರನ್ನ ಪತ್ತೆ ಹೆಚ್ಚಿ, ವಾಪಸ್ ಮಾಡುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಪೊಲಿಸರ ಪ್ರಾಮಾಣಿಕತೆ ಹೇಗಿರುತ್ತದೆ ಎಂಬುದನ್ನು […]

15 ಲಕ್ಷ ಮೌಲ್ಯ ಚಿನ್ನದ ಬ್ಯಾಗ್ ವಾಪಸ್ ಮಾಡಿದ PSI, ಮೆಚ್ಚುಗೆಗಳ ಮಹಾಪೂರ!
Follow us on

ಪೊಲೀಸ್ ಇಲಾಖೆ ಅಂದ್ರೆ ಶಿಸ್ತು ಮತ್ತು ಗೌರವಗಳ ಪ್ರತೀಕ. ಇದಕ್ಕೆ ಪ್ರಾಮಾಣಿಕತೆ ಸೇರಿಬಿಟ್ಟರೆ.. ಚಿನ್ನಕ್ಕೆ ಪುಟವಿಟ್ಟಂತೆ ಸರ್ವಜ್ಞ ಅನ್ನಬಹುದು ಅಪರೂಪವೇ ಆದರೂ ಆಗಾಗ ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳಿಂದ ಇಲಾಖೆಗೆ ಘನತೆ ಹೆಚ್ಚುತ್ತಲೇ ಇರುತ್ತದೆ.

ತಾಜಾ ಉದಾಹರಣೆಯಲ್ಲಿ.. ಶಿವಮೊಗ್ಗ ತಾಲೂಕಿನ ಕುಂಸಿ ಪೊಲೀಸ್ ಠಾಣೆಯ PSI ನವೀನ ಮಠಪತಿ ಅವರ ಕೈಗೆ 15 ಲಕ್ಷ ರೂಪಾಯಿ ಬೆಳೆಬಾಳುವ ಚಿನ್ನಾಭರಣ ಸಿಕ್ಕಿದೆ. ಆದ್ರೆ ಚಿನ್ನಾಭರಣ ಕಳೆದುಕೊಂಡವರನ್ನ ಪತ್ತೆ ಹೆಚ್ಚಿ, ವಾಪಸ್ ಮಾಡುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಪೊಲಿಸರ ಪ್ರಾಮಾಣಿಕತೆ ಹೇಗಿರುತ್ತದೆ ಎಂಬುದನ್ನು ರುಜುವಾತುಪಡಿಸಿದ್ದಾರೆ.

ಶಿವಮೊಗ್ಗ ತಾಲೂಕಿನ ಚೋರಡಿ ಬಳಿ ಮೇ 23 ರಂದು ಒಂದು ಅಪಘಾತ ನಡೆದಿತ್ತು. ಕಾರ್ ನಲ್ಲಿದ್ದ ಮಹಿಳೆ ಭಾರತಿ ಮೃತಪಟ್ಟಿದ್ದರು. ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಕೆಇಬಿ ನೌಕರ ಸುಬ್ಬಯ್ಯ ಅವರು ಪತ್ನಿ ಕಳೆದುಕೊಂಡ ನೋವಿನಲ್ಲಿದ್ದರು. ಆದ್ರೆ ಆ ದಿನ ಕುಂಸಿ PSI ಅಪಘಾತ ಸ್ಥಳಕ್ಕೆ ಭೇಟಿ ನೀಡಿದಾಗ ಅವರಿಗೆ ಕಣ್ಣಿಗೆ ಬ್ಯಾಗ್ ಬಿದ್ದಿದೆ.

ಈ ಬ್ಯಾಗ್ ತೆಗೆದು ನೋಡಿದರೆ 15 ರಿಂದ 20 ಲಕ್ಷ ರೂಪಾಯಿ ಚಿನ್ನಾಭರಣವಿತ್ತು. ನಂತರ ಅಪಘಾತ ಪ್ರಕರಣದ ಮಾಹಿತಿ ಪಡೆದ PSI, ಮೃತಳ ಪತಿ ಸುಬ್ಬಯ್ಯ ಅವರಿಗೆ ಕಾಲ್ ಮಾಡಿ, ಕುಂಸಿ ಠಾಣೆಗೆ ಕರೆಸಿಕೊಂಡಿದ್ದಾರೆ. ಕಾರ್ ನಲ್ಲಿ ಸಿಕ್ಕಿದ್ದ ಚಿನ್ನಾಭಾರಣದ ಬ್ಯಾಗ್ ನ್ನು ಅವರು ವಾಪಸ್ ನೀಡಿದ್ದಾರೆ. ಈ ಮೂಲಕ ಕುಂಸಿ ಪೊಲೀಸ್ ಠಾಣೆಯ PSI ಪ್ರಾಮಾಣಿಕತೆಯನ್ನು ಇಡೀ ಜಿಲ್ಲೆ ಶ್ಲಾಘಿಸುತ್ತಿದೆ.

ಇನ್ನು, ಚಿನ್ನಾಭರಣದ ಬ್ಯಾಗ್ ವಾಪಸ್ ಪಡೆದ ಸುಬ್ಬಯ್ಯ ಅವರ ಕುಟುಂಬಸ್ಥರೂ ಅಭಿನಂದನೆ ಸಲ್ಲಿಸಿದ್ದಾರೆ. ಈ ಮೂಲಕ PSI ಪೊಲೀಸ್ ಇಲಾಖೆಯಲ್ಲಿ ಎಲ್ಲರಿಗೂ ಮಾದರಿಯಾಗುವಂತಹ ಕೆಲಸ ಮಾಡಿದ್ದಾರೆ.
ಶಿವಮೊಗ್ಗ SP ಶಾಂತರಾಜು ಅವರು ಕೂಡಾ PSI ನವೀನ ಮಠಪತಿ ಅವರ ಪ್ರಾಮಾಣಿಕತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Published On - 5:25 pm, Tue, 26 May 20