ದತ್ ಅಭಿನಯದ ದೃಶ್ಯಗಳ ಶೂಟಿಂಗ್ ಮುಗಿದಿದೆ: ಕಾರ್ತಿಕ್ ಗೌಡ

ಮೊನ್ನೆಯಷ್ಟೇ ಶ್ವಾಸಕೋಶದ ತೊಂದರೆಗೆ ಚಿಕಿತ್ಸೆ ಪಡೆದು ಮನೆಗಿ ಮರಳಿದ್ದ ಖ್ಯಾತ ಬಾಲಿವುಡ್ ನಟ ಸಂಜಯ ದತ್ ಅಸಲಿಗೆ ಮೂರನೇ ಹಂತದ ಶ್ವಾಸಕೋಶ ಕ್ಯಾನ್ಸರ್​ನಿಂದ ಬಳಲುತ್ತಿರುವುದು ಬೆಳಕಿಗೆ ಬಂದಿದೆ. ಹೆಚ್ಚಿನ ಚಿಕಿತ್ಸೆಗಾಗಿ ಅವರು ಅಮೆರಿಕ ತೆರಳಲಿದ್ದಾರೆ ಎಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ. ಅಂದಹಾಗೆ ದತ್, ಕನ್ನಡದ ಕೆಜಿಎಫ್ 2 ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದು ಅವರ ಅಭಿನಯದ ದೃಶ್ಯಗಳ ಚಿತ್ರೀಕರಣ ಹೆಚ್ಚುಕಡಿಮೆ ಮುಗಿದಿದೆ, ಕೇವಲ ಎರಡು ದಿನಗಳ ಶೂಟ್ ಮಾತ್ರ ಬಾಕಿಯಿದೆಯೆಂದು ಚಲನಚಿತ್ರ ವಿತರಕ ಕಾರ್ತಿಕ್ ಗೌಡ ಹೇಳಿದರು. […]

ದತ್ ಅಭಿನಯದ ದೃಶ್ಯಗಳ ಶೂಟಿಂಗ್ ಮುಗಿದಿದೆ: ಕಾರ್ತಿಕ್ ಗೌಡ
ಅರುಣ್​ ಕುಮಾರ್​ ಬೆಳ್ಳಿ

Updated on: Aug 12, 2020 | 8:40 PM

ಮೊನ್ನೆಯಷ್ಟೇ ಶ್ವಾಸಕೋಶದ ತೊಂದರೆಗೆ ಚಿಕಿತ್ಸೆ ಪಡೆದು ಮನೆಗಿ ಮರಳಿದ್ದ ಖ್ಯಾತ ಬಾಲಿವುಡ್ ನಟ ಸಂಜಯ ದತ್ ಅಸಲಿಗೆ ಮೂರನೇ ಹಂತದ ಶ್ವಾಸಕೋಶ ಕ್ಯಾನ್ಸರ್​ನಿಂದ ಬಳಲುತ್ತಿರುವುದು ಬೆಳಕಿಗೆ ಬಂದಿದೆ. ಹೆಚ್ಚಿನ ಚಿಕಿತ್ಸೆಗಾಗಿ ಅವರು ಅಮೆರಿಕ ತೆರಳಲಿದ್ದಾರೆ ಎಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ.

ಅಂದಹಾಗೆ ದತ್, ಕನ್ನಡದ ಕೆಜಿಎಫ್ 2 ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದು ಅವರ ಅಭಿನಯದ ದೃಶ್ಯಗಳ ಚಿತ್ರೀಕರಣ ಹೆಚ್ಚುಕಡಿಮೆ ಮುಗಿದಿದೆ, ಕೇವಲ ಎರಡು ದಿನಗಳ ಶೂಟ್ ಮಾತ್ರ ಬಾಕಿಯಿದೆಯೆಂದು ಚಲನಚಿತ್ರ ವಿತರಕ ಕಾರ್ತಿಕ್ ಗೌಡ ಹೇಳಿದರು.

ದತ್ ಅವರ ಅನಾರೋಗ್ಯ ಚಿತ್ರ ಸಂಪೂರ್ಣಗೊಳ್ಳಲು ತೊಂದರೆಯಾಗದು ಅಂತಲೂ ಹೇಳಿದ ಗೌಡ, ಅವರ ಅನುಪಸ್ಥಿಯಲ್ಲೂ ಚಿತ್ರೀಕರಣ ಪೂರ್ಣಗೊಂಡು ಬಹು ನಿರೀಕ್ಷಿತ ಕೆಜಿಎಫ್ 2 ಚಿತ್ರ ಬಿಡುಗಡೆಯಾಗಲಿದೆ ಎಂದರು

Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Follow Us